Yogi meets Modi ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಯೋಗಿ ಆದಿತ್ಯನಾಥ, ಉತ್ತರಪ್ರದೇಶದ ನೂತನ ಸರ್ಕಾರದ ಬಗ್ಗೆ ಚರ್ಚೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 13, 2022 | 6:44 PM

Yogi Adityanath ಮೋದಿ ಭೇಟಿಗೆ ಮುನ್ನ ಯೋಗಿ ಆದಿತ್ಯನಾಥ ಅವರು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಭಾನುವಾರ ಭೇಟಿಯಾದರು.

Yogi meets Modi ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಯೋಗಿ ಆದಿತ್ಯನಾಥ, ಉತ್ತರಪ್ರದೇಶದ ನೂತನ ಸರ್ಕಾರದ ಬಗ್ಗೆ ಚರ್ಚೆ
ಯೋಗಿ ಆದಿತ್ಯನಾಥ- ಮೋದಿ (ಸಂಗ್ರಹ ಚಿತ್ರ)
Follow us on

ದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath)ರಾಜ್ಯ ಚುನಾವಣೆಯಲ್ಲಿ ಪಕ್ಷ ಸತತ ಎರಡನೇ ಗೆಲುವು ಸಾಧಿಸಿದ ಮೂರು ದಿನಗಳ ನಂತರ ಭಾನುವಾರ ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ ಉತ್ತರ ಪ್ರದೇಶದ (Uttar Pradesh) ಹೊಸ ಸರ್ಕಾರದ ಸಚಿವ ಸಂಪುಟ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ಪ್ರಮಾಣವಚನ ಸಮಾರಂಭದ ದಿನಾಂಕದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದರೂ ಪಕ್ಷದ ಉನ್ನತ ಸ್ಥಾನದಲ್ಲಿದ್ದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಚುನಾವಣೆಯಲ್ಲಿ ಸೋತರು. ಅವರು ಸಿರತುದಲ್ಲಿ ಸುಮಾರು 7,000 ಮತಗಳಿಂದ ಸೋತರು.  ಅಪ್ನಾ ದಳ (ಕಾಮೆರವಾಡಿ) ನ ಸಮಾಜವಾದಿ ಪಕ್ಷದ ಮಿತ್ರ ಪಲ್ಲವಿ ಪಟೇಲ್ ವಿರುದ್ಧ ಮೌರ್ಯ ಸೋತಿದ್ದಾರೆ. ಕೇಶವ್ ಮೌರ್ಯ ಅಲ್ಲದೆ ಇನ್ನೂ 10 ಸಚಿವರು ಚುನಾವಣೆಯಲ್ಲಿ ಸೋತಿದ್ದಾರೆ.  ಯೋಗಿ ಆದಿತ್ಯನಾಥ ಅವರ ಎರಡನೇ ಉಪನಾಯಕ ದಿನೇಶ್ ಶರ್ಮಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.  ಮೌರ್ಯ ಅವರು ಉಪಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಅಥವಾ ಅವರ ಸ್ಥಾನಕ್ಕೆ ಬೇರೆ ನಾಯಕರು ಬರುತ್ತಾರೆಯೇ ಎಂಬುದನ್ನು ಪಕ್ಷ ಸ್ಪಷ್ಟಪಡಿಸಬೇಕಾಗಿದೆ. ಮೂಲಗಳ ಪ್ರಕಾರ, ಮೌರ್ಯ ಅವರು ಇನ್ನೂ ಶಾಸಕಾಂಗ ಮಂಡಳಿಯ ಮಾರ್ಗವನ್ನು ಹಿಡಿಯಬಹುದು.  ಯೋಗಿ ಆದಿತ್ಯನಾಥ ಅವರು ಈ ಬಾರಿಯ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೋರಖ್‌ಪುರ ನಗರ ಕ್ಷೇತ್ರದಿಂದ ಗೆಲ್ಲುವವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.


ಮೋದಿ ಭೇಟಿಗೆ ಮುನ್ನ ಯೋಗಿ ಆದಿತ್ಯನಾಥ ಅವರು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಭಾನುವಾರ ಭೇಟಿಯಾದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸಮಗ್ರ ವಿಜಯವನ್ನು ಸಾಧಿಸಿದ ನಂತರ ರಾಷ್ಟ್ರ ರಾಜಧಾನಿಗೆ ಅವರ ಮೊದಲ ಭೇಟಿಯಾಗಿದೆ ಇದು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಆದಿತ್ಯನಾಥ ಭೇಟಿಯಾಗಲಿದ್ದಾರೆ.

ಇದನ್ನೂ ಓದಿCWC meeting ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟ ಸಾಧ್ಯತೆ

Published On - 6:43 pm, Sun, 13 March 22