ದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರ ಅಬ್ಬಾ ಜಾನ್ (Abba Jaan) ಹೇಳಿಕೆ ಖಂಡಿಸಿ ಸೋಮವಾರ ಬಿಹಾರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮುಜಫರ್ ಪುರ್ ನ ಮುಖ್ಯ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಾಶ್ಮಿ ಈ ಅರ್ಜಿಯನ್ನು ಸಲ್ಲಿಸಿದ್ದು ಬಿಜೆಪಿ ನಾಯಕನ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯೋಗಿ ಭಾನುವಾರ ಖುಶಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 2017 ರಲ್ಲಿ ಅಧಿಕಾರಕ್ಕೆ ಬಂದ ನಂತರವೇ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಪರಿಣಾಮಕಾರಿಯಾಗಿ ಪರಿಣಮಿಸಿತು. ಅಲ್ಲಿ “ಅಬ್ಬಾ ಜಾನ್ ಎಂದು ಹೇಳುವವರು( ಮುಸ್ಲಿಮರು ತಂದೆಯನ್ನು ಉದ್ದೇಶಿಸಲು ಬಳಸುವ ಪದ) ಬಡವರ ಪಾಲಿನ ಪಡಿತರವನ್ನು ತಿನ್ನುತ್ತಿದ್ದರು ಎಂದಿದ್ದರು.
ಹಾಶ್ಮಿ ಈ ಹಿಂದೆ ಅನೇಕ ರಾಜಕಾರಣಿಗಳ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದ ಸರಣಿ ದಾವೆದಾರರಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಬಗ್ಗೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಯೋಗಿಯ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಜಿಯನ್ನು ಸೂಕ್ತ ಸಮಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಟ್ವಿಟರ್ನಲ್ಲಿ ಅಬ್ಬಾ ಜಾನ್ ಟ್ರೆಂಡ್
ಯೋಗಿ ಆದಿತ್ಯನಾಥ ಅವರು ತಮ್ಮ ಭಾಷಣದಲ್ಲಿ ಅಬ್ಬಾ ಜಾನ್ ಪದ ಬಳಸಿದ ಬೆನ್ನಲ್ಲೇ ಯೋಗಿ ಹೇಳಿಕೆ ಖಂಡಿಸಿ ಹಲವಾರು ನೆಟ್ಟಿಗರು ಅಬ್ಬಾ ಜಾನ್ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ನೆಟ್ಟಿಗರು ಅವರವರ ಅಪ್ಪನ ಜತೆಗಿನ ಚಿತ್ರ, ಅಪ್ಪನ ನೆನಪುಗಳನ್ನು ಟ್ವೀಟ್ ಮಾಡಿದ್ದಾರೆ.
My #AbbaJaan retired from the Indian Judiciary. Served the state as a Judge in some very difficult naxal infested areas upholding the law of the land . Learned to stand up for what is right and respect the law from him . Proud of you #AbbaJaan https://t.co/NjnBPVBBZR
— Naghma Sahar (@NaghmaSahar) September 13, 2021
#HamareAbbaJaan pic.twitter.com/wwkebiRZPW
— Saba Naqvi (@_sabanaqvi) September 13, 2021
#HamareAbbaJaan
He taught us the value of truthfulness, honesty and above all humanity pic.twitter.com/5qfpzefwnc— Rana Safvi رعنا राना (@iamrana) September 13, 2021
Yeh hain hamare marhoom AbbaJaan!#HamareAbbaJaan pic.twitter.com/dBtZjbe37e
— Dr. Riz Ahmad (@RizwanAhmad1) September 13, 2021
My #AbbaJaan is a 71 war veteran..he served the #IndianArmy with valour,honour and distinction for forty years as a soldier.
Add another 5 years of training to become an officer at NDA and IMA.
He retired as the deputy chief of the Indian Army after 40 years of meritorious pic.twitter.com/BEtcGr5ppG
— Saira Shah Halim سائرہ ?? (@sairashahhalim) September 13, 2021
ಇದನ್ನೂ ಓದಿ: ’ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯ ತಾಯಿ’- ವಿವಾದ ಸೃಷ್ಟಿಸಿದ ಸಿಎಂ ಯೋಗಿ ಆದಿತ್ಯನಾಥ್
ಇದನ್ನೂ ಓದಿ: ಪಂಜಾಬ್ಗೆ ತೊಂದರೆ ನೀಡಬೇಡಿ, ರೈತರ ಪ್ರತಿಭಟನೆಯನ್ನು ದೆಹಲಿಗೆ ಸ್ಥಳಾಂತರಿಸಿ: ಅಮರಿಂದರ್ ಸಿಂಗ್
(Uttar Pradesh CM Yogi Adityanath Abba Jaan barb Petition filed in Bihar court)