ಅಲಹಾಬಾದ್ ಆಗಸ್ಟ್ 30: ರಕ್ಷಾ ಬಂಧನದ ಸಂದರ್ಭದಲ್ಲಿ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ರಾಜ್ಯದ ಹೆಣ್ಣು ಮಕ್ಕಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ’ (CM Kanya Sumangala Yojana) ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಈ ಯೋಜನೆಯ ಹಣವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಕನ್ಯಾ ಸುಮಂಗಲಾ ಯೋಜನೆಯ ಮೊತ್ತವನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವ ಯೋಜನೆ ಇದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಈ ಯೋಜನೆಯಡಿ ಈ ಹಿಂದೆ ಆರು ಹಂತಗಳಲ್ಲಿ 15 ಸಾವಿರ ರೂ.ಗಳ ಪ್ಯಾಕೇಜ್ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಮಗಳು ಹುಟ್ಟಿದ ತಕ್ಷಣ ಆಕೆಯ ಪೋಷಕರ ಖಾತೆಗೆ 5 ಸಾವಿರ ರೂ.ಗಳನ್ನು ವರ್ಗಾಯಿಸಲಾಗುವುದು. ಮಗಳಿಗೆ ಒಂದು ವರ್ಷವಾದಾಗ ಎರಡು ಸಾವಿರ ರೂ, ಮಗಳು ಒಂದನೇ ತರಗತಿಗೆ ದಾಖಲಾದಾಗ ಮೂರು ಸಾವಿರ, ಮಗಳು ಆರನೇ ತರಗತಿಗೆ ಪ್ರವೇಶ ಪಡೆದರೆ ಮೂರು ಸಾವಿರ, ಮಗಳು ಒಂಬತ್ತನೇ ತರಗತಿಗೆ ಹೋದರೆ ಐದು ಸಾವಿರ ರೂ. ಮತ್ತು ಮಗಳು ಯಾವುದೇ ಪದವಿ ಅಥವಾ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಿದರೆ ಏಳು ಸಾವಿರ ರೂಪಾಯಿಗಳನ್ನು ಖಾತೆಗೆ ವರ್ಗಾಯಿಸಲಾಗುತ್ತದೆ ಎಂದಿದ್ದಾರೆ.
रक्षाबंधन के पावन अवसर पर आज लखनऊ में ‘मुख्यमंत्री कन्या सुमंगला योजना’ के अंतर्गत 29,523 लाभार्थी बालिकाओं के खातों में ₹5.82 करोड़ एवं ‘निराश्रित महिला पेंशन योजना’ के अंतर्गत 05 लाख लाभार्थी महिलाओं के खातों में ₹150 करोड़ की धनराशि का हस्तांतरण किया।
माताओं-बहनों की सेवा… pic.twitter.com/ABH5KRY1uq
— Yogi Adityanath (@myogiadityanath) August 30, 2023
ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ ಮೂಲಕ 1624000 ಸಾವಿರ ಹೆಣ್ಣು ಮಕ್ಕಳಿಗೆ ಪ್ರಯೋಜನ ಸಿಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ಯಾ ಸುಮಂಗಲಾ ಯೋಜನೆಯ ಫಲಾನುಭವಿಗಳಾದ ಕೆಲ ಬಾಲಕಿಯರು ಸಿಎಂ ಯೋಗಿ ಅವರ ಹಣೆಗೆ ತಿಲಕವಿಟ್ಟು, ಕೈಗೆ ರಾಖಿ ಕಟ್ಟಿದರು. ಸಿಎಂ ಯೋಗಿ ಅವರಿಗೆ ಉಡುಗೊರೆ ನೀಡಿ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಒಂದೇ ಕ್ಲಿಕ್ ಮೂಲಕ 29523 ಫಲಾನುಭವಿ ಹೆಣ್ಣು ಮಕ್ಕಳ ಖಾತೆಗೆ 5.82 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.
ಯೋಜನೆಯ ಫಲಾನುಭವಿ ರತ್ನಾ ಮಿಶ್ರಾ ಮಾತನಾಡಿ, ಈ ಯೋಜನೆಯಿಂದಾಗಿ ಶಿಕ್ಷಣ ಸಾಧ್ಯವಾಗಿದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈಗ ರಾಜ್ಯದ ಹೆಣ್ಣುಮಕ್ಕಳಿಗೆ ಬೆಂಬಲವಾಗಿ ನಿಂತಿರುವ ಸಿಎಂ ಯೋಗಿ ಇರುವುದರಿಂದ ನಮ್ಮ ಕನಸು ನನಸಾಗಲು ಸಾಧ್ಯವಾಗುತ್ತಿದೆ ಎಂದರು.
ಯೋಜನೆ ತನ್ನಂತಹ ಬಡ ಹೆಣ್ಣುಮಕ್ಕಳ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ. ಈ ಮೂಲಕ ತಾನು ಓದಲು ಮತ್ತು ಇತರ ಮಕ್ಕಳೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗಿದೆ. ಇದಕ್ಕಾಗಿ ಸಿಎಂ ಯೋಗಿ ಅವರಿಗೆ ಧನ್ಯವಾದಗಳು ಎಂದು 10ನೇ ತರಗತಿ ವಿದ್ಯಾರ್ಥಿನಿ ಅಕ್ಷರಾ ಕುಶ್ವಾಹ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Wed, 30 August 23