ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್​ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ

| Updated By: Lakshmi Hegde

Updated on: Nov 21, 2021 | 2:44 PM

ಯೋಗಿ ಆದಿತ್ಯನಾಥ್​ ಶೇರ್ ಮಾಡಿರುವ ಫೋಟೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅಪರೂಪದ ಫೋಟೋ ಎಂದಿದ್ದಾರೆ. ಆದರೆ ಸಮಾಜವಾದಿ ಪಕ್ಷ ವ್ಯಂಗ್ಯ ಮಾಡಿದೆ.

ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್​ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ
ಯೋಗಿ ಆದಿತ್ಯನಾಥ್​ ಶೇರ್ ಮಾಡಿರುವ ಫೋಟೋ
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಸದ್ಯ ಲಖನೌದಲ್ಲಿದ್ದಾರೆ. 56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ನವೆಂಬರ್ 19ರಂದು ತೆರಳಿರುವ ಪ್ರಧಾನಿ ಮೋದಿ ಇಂದು ದೆಹಲಿಗೆ ವಾಪಸ್​ ಬರಲಿದ್ದಾರೆ. ಈ ಮಧ್ಯೆ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಎರಡೂ ಕ್ಯಾಂಡಿಡ್​ ಫೋಟೋಗಳಾಗಿದ್ದು, ಯೋಗಿ ಜೀ ಶೇರ್​ ಮಾಡಿದ ಕೆಲವೇ ಕ್ಷಣದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗಿ ಆದಿತ್ಯನಾಥ್​ ಅವರ ಹೆಗಲ ಮೇಲೆ ಕೈಹಾಕಿ ಏನನ್ನೋ ಹೇಳುತ್ತಿರುವ ಫೋಟೋಗಳು ಇವು. ಒಂದು ಫೋಟೋವನ್ನು ಎದುರಿನಿಂದ ಕ್ಲಿಕ್ಕಸಿದ್ದರೆ, ಇನ್ನೊಂದನ್ನು ಹಿಂಬದಿಯಿಂದ ತೆಗೆಯಲಾಗಿದೆ. ಒಟ್ಟಿನಲ್ಲಿ ಅಪರೂಪ ಎನ್ನಿಸುವ ಫೋಟೋಗಳು ಇವಾಗಿವೆ.

ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ ಯೋಗಿ ಆದಿತ್ಯನಾಥ್​, ನವಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಣ್ಣ ಕವಿತೆಯನ್ನೇ ಬರೆದುಬಿಟ್ಟಿದ್ದಾರೆ. ‘ನಾವು ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ..ನಮ್ಮ ತನು-ಮನವನ್ನು ಅರ್ಪಿಸಲು ನಿರ್ಧಾರ ಮಾಡಿದ್ದೇವೆ, ಆಕಾಶದೆತ್ತರಕ್ಕೆ ಹೋಗಲು ಮತ್ತು ನವಭಾರತ ನಿರ್ಮಾಣ ಮಾಡಲು’ ಎಂದು ನಾಲ್ಕು ಸಾಲು ಸುಂದರವಾಗಿ ಬರೆದುಕೊಂಡಿದ್ದಾರೆ.

ಸಮಾಜವಾದಿ ಪಕ್ಷದಿಂದ ವ್ಯಂಗ್ಯ
ಯೋಗಿ ಆದಿತ್ಯನಾಥ್​ ಶೇರ್ ಮಾಡಿರುವ ಫೋಟೋವನ್ನು ಸಮಾಜವಾದಿ ಪಕ್ಷ ವ್ಯಂಗ್ಯಮಾಡಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಅಖಿಲೇಶ್​ ಅವರೇ ಗೆಲ್ಲಬಹುದು ಎಂದು ಪ್ರಧಾನಿ ಮೋದಿ, ಯೋಗಿ ಜೀ ಅವರಿಗೆ ಹೇಳುತ್ತಿರಬಹುದು ಎಂದು ಎಸ್​ಪಿ ವಕ್ತಾರ ಅನುರಾಗ್​ ಭಡೌರಿಯಾ ಟ್ವೀಟ್​ ಮಾಡಿದ್ದಾರೆ.  ಹಾಗೇ, ಫೋಟೋವನ್ನೂ ಶೇರ್​ ಮಾಡಿಕೊಂಡಿದ್ದಾರೆ. ಅದರಾಚೆ ಹಲವರು ಈ ಫೋಟೋವನ್ನು ಶೇರ್​ ಮಾಡಿಕೊಂಡು ಅಪರೂಪದ ಫೋಟೋ ಎಂದಿದ್ದಾರೆ.

ಇದನ್ನೂ ಓದಿ: Smart TV: ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿದ್ದೀರಾ?: ಹಾಗಿದ್ರೆ ಇಲ್ಲೊಮ್ಮೆ ಕಣ್ಣಾಡಿಸಿ