ಉತ್ತರ ಪ್ರದೇಶ: ಪತಿ, ಪತ್ನಿ ಹಾಗೂ ಮಗನ ಕತ್ತು ಸೀಳಿ ಹತ್ಯೆ ಮಾಡಿದ ದುಷ್ಕರ್ಮಿಗಳು

|

Updated on: Jul 08, 2024 | 12:07 PM

ಉತ್ತರ ಪ್ರದೇಶದಲ್ಲಿ ತ್ರಿವಳಿ ಕೊಲೆ ಪ್ರಕರಣವೊಂದು ವರದಿಯಾಗಿದೆ. ಭಾನುವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಮಲಗಿದ್ದ ದಂಪತಿ ಮತ್ತು ಅವರ ಮಗನನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.

ಉತ್ತರ ಪ್ರದೇಶ: ಪತಿ, ಪತ್ನಿ ಹಾಗೂ ಮಗನ ಕತ್ತು ಸೀಳಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಸಾವು
Follow us on

ದುಷ್ಕರ್ಮಿಗಳು ಪತಿ, ಪತ್ನಿ ಹಾಗೂ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಪಿ ಓಂವಿರ್ ಸಿಂಗ್ ನೇತೃತ್ವದ ಎಸ್‌ಒಜಿ ತಂಡವು ಘಟನಾ ಸ್ಥಳಕ್ಕೆ ತಲುಪಿ ಗಂಟೆಗಳ ಕಾಲ ತನಿಖೆ ನಡೆಸಿತು, ಆದರೆ ಕೊಲೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಖಿಲ್ವಾ ಗ್ರಾಮದ ನಿವಾಸಿ ಮುನ್ಶಿ ಬಿಂದ್ (45) ಮತ್ತು ಅವರ ಪತ್ನಿ ದೇವಂತಿ (40) ಮನೆಯ ಹೊರಗಿನ ಗುಡಿಸಲಿನಲ್ಲಿ ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿದ್ದರು.

ಹಿರಿಯ ಮಗ ರಮಶಿಶ್ (20) ಮನೆಯಲ್ಲಿ ಮಲಗಿದ್ದ. ಕಿರಿಯ ಮಗ ಆಶಿಶ್ ಗ್ರಾಮಕ್ಕೆ ಬಂದಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದ. ರಾತ್ರಿ 2 ಗಂಟೆಗೆ ಆಶಿಶ್ ಮನೆಗೆ ಬಂದು ನೋಡಿದಾಗ ಪೋಷಕರು ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ.

ಇದಾದ ಬಳಿಕ ಮನೆಯಲ್ಲಿ ಮಲಗಿದ್ದ ಅಣ್ಣನನ್ನು ಗಲಾಟೆ ಮಾಡಿ ಎಬ್ಬಿಸಲು ಹೋದಾಗ ಆತನೂ ಮೃತಪಟ್ಟಿರುವುದ ಕಂಡು ಒಮ್ಮೆ ಭೂಮಿಯೇ ಬಾಯ್ತೆರೆದ ಅನುಭವವಾಗಿತ್ತು. ಕಿರುಚಾಟ ಕೇಳಿ ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿದರು. ರಕ್ತದಲ್ಲಿ ತೋಯ್ದ ಶವಗಳನ್ನು ಕಂಡು ಜನರು ಬೆಚ್ಚಿಬಿದ್ದರು.

ಮತ್ತಷ್ಟು ಓದಿ: ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ

ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಎಸ್ಪಿ ಓಂವೀರ್ ಸಿಂಗ್ ಆಗಮಿಸಿ ತನಿಖೆ ಆರಂಭಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸಿದ್ದಾರೆ.
ಒಂದೇ ಕುಟುಂಬದ ಮೂವರ ಕೊಲೆಯಾದ ಘಟನೆ ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.

ಘಟನೆಯಿಂದ ಜನರು ಭಯದ ಅಲೆಯಲ್ಲಿ ಸಿಲುಕಿದ್ದಾರೆ. ಭಯದಿಂದ ಜನರು ಮನೆಯಿಂದ ಹೊರಗೆ ಕಾಲಿಡಲೂ ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ.
ಹಂತಕರನ್ನು ಹಿಡಿಯುವ ಶೋಧವೂ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ತಿಂಗಳು ಉತ್ತರಾಖಂಡ್‌ನಲ್ಲಿ ತ್ರಿವಳಿ ಕೊಲೆಯೊಂದು ವರದಿಯಾಗಿದ್ದು, ಡೆಹ್ರಾಡೂನ್‌ನಲ್ಲಿ ಮಹಿಳೆ ತನ್ನನ್ನು ಮದುವೆಯಾಗಲು ಪುರುಷನನ್ನು ಒತ್ತಾಯಿಸುತ್ತಿದ್ದಳು ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಮತ್ತು ಅವಳ ಇಬ್ಬರು ಮಕ್ಕಳನ್ನು ಕೊಂದಿದ್ದ.

ಜೂನ್ 25 ರಂದು ಕೊತ್ವಾಲಿ ಪಟೇಲ್ ನಗರ ಪ್ರದೇಶದ ಶಿಮ್ಲಾ ಬೈಪಾಸ್ ರಸ್ತೆ ಬಳಿಯ ಬಡೋವಾಲಾದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಪುಟ್ಟ ಮಕ್ಕಳ ಶವಗಳು ಪತ್ತೆಯಾಗಿದ್ದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ