AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಿನ್ನೆ 3 ವರ್ಷದ ಅಣ್ಣನ ಮಗನನ್ನು ಚಿಕ್ಕಪ್ಪನೊರ್ವ ಹತ್ಯೆ ಮಾಡಿರುವಂತಹ ಘಟನೆ ನಡೆದಿತ್ತು, ಸದ್ಯ ಈ ಪ್ರಕರಣವನ್ನು ಬಟ್ಲಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಅತ್ತಿಗೆ ಮೇಲಿನ ಕೋಪಕ್ಕೆ ಮಗನ ಬರ್ಬರ ಕೊಲೆ ಮಾಡಿರುವುದಾಗಿ ಆರೋಪಿ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.

ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ
ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 20, 2024 | 3:44 PM

Share

ಚಿಕ್ಕಬಳ್ಳಾಪುರ, ಜೂನ್​ 20: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದ್ದ 3 ವರ್ಷದ ಬಾಲಕನ ಕೊಲೆ (death) ಪ್ರಕರಣವನ್ನು ಇಂದು ಬಟ್ಲಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಆರೋಪಿ ರಂಜಿತ್​ಗೆ ಅತ್ತಿಗೆ ಶಿರಿಷ್​ ದುಡಿದು ತಿನ್ನುವಂತೆ ಬುದ್ದಿವಾದ ಹೇಳಿದ್ದಾರೆ. ಈ ಒಂದೇ ಕಾರಣಕ್ಕೆ ರಂಜಿತ್ ಸ್ವತಃ ಅಣ್ಣನ ಮಗನನ್ನು ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.​

ಇಂಜಿನಿಯರಿಂಗ್ ಮುಗಿಸಿದ್ದ ಆರೋಪಿ ರಂಜಿತ್​ ಕೆಲಸವಿಲ್ಲದೆ ಮನೆಯಲ್ಲಿ ಖಾಲಿಯಾಗಿದ್ದ. ಹೀಗಾಗಿ ಅತ್ತಿಗೆ ಶಿರಿಷ್ ಉಂಡಾಡಿ ಗುಂಡ ಆಗಿದ್ದೀಯಾ ಅಂತ ಬುದ್ದಿವಾದ ಹೇಳಿದ್ದಾರೆ. ಬಳಿಕ ಅತ್ತಿಗೆಗೆ ಹೊಡೆದಿದ್ದಲ್ಲದೆ ನಂತರ ಮಗುವನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ಘಟನೆ ಹಿನ್ನಲೆ

ಗ್ರಾಮದಲ್ಲಿ ನಿನ್ನೆ ಸಂಜೆ ಕಂಡುಕೇಳದ ವಿಕೃತ ಘಟನೆಯೊಂದು ನಡೆದುಹೋಗಿತ್ತು. ಸ್ವತಃ ಚಿಕ್ಕಪ್ಪ ರಂಜಿತ್ ತನ್ನ ಅಣ್ಣನ ಮಗ 3 ವರ್ಷದ ಮಗುವನ್ನು ಮನೆಬಳಿಯ ಪಾಳುಬಿದ್ದ ಮನೆಯೊಂದರಲ್ಲಿ ಬಟ್ಟೆ ಹೊಗೆದಂತೆ ಚಪ್ಪಡಿಕಲ್ಲಿಗೆ ಮಗುವನ್ನು ಹೊಡೆದು ನಂತರ ಚಾಕುವಿನಿಂದ ಕತ್ತುಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಕತ್ತು ಸೀಳಿ ಮೂರು ವರ್ಷದ ಬಾಲಕನ ಬರ್ಬರ ಕೊಲೆ; ಆರೋಪಿ ಚಿಕ್ಕಪ್ಪನಿಗಾಗಿ ಪೊಲೀಸರ ಹುಡುಕಾಟ

ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್, ಬಟ್ಲಹಳ್ಳಿ ಠಾಣೆಯ ಪೊಲೀಸರು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದರೆ ಆರೋಪಿ ರಂಜಿತ್ ಮೃತಬಾಲಕನ ತಂದೆ ಮಂಜುನಾಥ್ ಚಿಕ್ಕಪ್ಪನ ಮಗನಾಗಿದ್ದಾನೆ. 2 ಕುಟುಂಬಗಳು ಒಟ್ಟಿಗೆ ಇವೆ. ಭೂ ವಿವಾದ, ವೈಯಕ್ತಿಕ ದ್ವೇಷ, ಹಳೇ ದ್ವೇಷ ಯಾವುದೂ ಕಂಡು ಬಂದಿರಲಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ 3 ವರ್ಷದ ಬಾಲಕ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

ಆರೋಪಿ ರಂಜಿತ್ ನಿನ್ನೆ ಸಂಜೆ 4-00 ಗಂಟೆ ಸಮಯದಲ್ಲಿ ಅಣ್ಣನ ಮನೆಯಲ್ಲೇ ಊಟ ಮಾಡಿ, ಮಗುವಿನ ಜೊತೆ ಆಟವಾಡಿದ್ದಾನೆ. ನಂತರ ಮಗುವನ್ನು ಕರೆದುಕೊಂಡು ಹೋಗಿದ್ದ. ಇನ್ನು ಆರೋಪಿಯ ಮೇಲೆ ಆತನ ಸಂಬಂಧಿಕರಿಗೆ ಯಾವುದೇ ಅನುಮಾನವಿರಲಿಲ್ಲ. ಪೊಲೀಸರ ಮುಂದೆ ಆರೋಪಿ ಬಾಯ್ಬಿಡುತ್ತಿರಲಿಲ್ಲ. ಇದರಿಂದ ಪುಟಾಣಿ ಕೊಲೆ ನಿಗೂಢವಾಗಿ ಉಳಿದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಗೆ ಕಾರಣ ಬಾಯ್ಬಿಟ್ಟಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.