ಬೆಂಗಳೂರು: ಕಸ್ತೂರ ಬಾ ಮುಖ್ಯ ರಸ್ತೆಯಲ್ಲಿ ಉಚಿತ ಪಾರ್ಕಿಂಗ್ ಅಧ್ವಾನ, ಸಾರ್ವಜನಿಕರ ಆಕ್ರೋಶ

ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ಕಬ್ಬನ್ ಪಾರ್ಕ್‌ಗೆ ಬರುವವರಿಗೆಂದು ಪಾಲಿಕೆ ನೀಡಿದ ಉಚಿತ ಪಾರ್ಕಿಂಗ್ ಸೌಲಭ್ಯ ಅರ್ಹರಿಗೆ ದೊರೆಯುತ್ತಿಲ್ಲ. ಬದಲಿಗೆ ಇನ್ಯಾರೋ ಇಡೀ ದಿನ, ಹಲವು ದಿನಗಳ ಕಾಲ ವಾಹನ ಪಾರ್ಕ್ ಮಾಡಿ ತೆರಳುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ, ಸಾಮಾಜಿಕ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರು: ಕಸ್ತೂರ ಬಾ ಮುಖ್ಯ ರಸ್ತೆಯಲ್ಲಿ ಉಚಿತ ಪಾರ್ಕಿಂಗ್ ಅಧ್ವಾನ, ಸಾರ್ವಜನಿಕರ ಆಕ್ರೋಶ
ಕಸ್ತೂರ ಬಾ ಮುಖ್ಯ ರಸ್ತೆಯಲ್ಲಿ ಉಚಿತ ಪಾರ್ಕಿಂಗ್ ಅಧ್ವಾನ, ಸಾರ್ವಜನಿಕರ ಆಕ್ರೋಶ
Follow us
Vinayak Hanamant Gurav
| Updated By: Ganapathi Sharma

Updated on: Jun 20, 2024 | 2:51 PM

ಬೆಂಗಳೂರು, ಜೂನ್ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆ ಒಂದಡೆಯಾದರೆ, ಇನ್ನೊಂದೆಡೆಗೆ ಪಾರ್ಕಿಂಗ್ (Parking Problem) ಸಮಸ್ಯೆ. ಹೀಗಿರುವಾಗ ಸ್ಮಾರ್ಟ್ ಸಿಟಿ (Smart City) ಯೋಜನೆಯಡಿ ಪಾಲಿಕೆ ಕೆಲವಡೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಆದರೆ ಅದೇ ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ. ನಗರದ‌ ಕಸ್ತೂರ ಬಾ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಮ್ಯೂಸಿಯಂ ಬಳಿ ರಸ್ತೆಯ ಎರಡು ಬದಿಗಳಲ್ಲಿ ಮ್ಯೂಸಿಯಂ ಹಾಗೂ ಕಬ್ಬನ್ ಪಾರ್ಕ್‌ಗೆ ಬರುವವರಿಗೆ ಅನಕೂಲವಾಗುವ ದೃಷ್ಟಿಕೋನದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಫ್ರೀ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅದು ಮ್ಯೂಸಿಯಂಗೆ ಹಾಗೂ ಕಬ್ಬನ್ ಪಾರ್ಕ್‌ಗೆ ಬರುವಂತಹವರಿಗೆ ಉಪಯೋಗಕ್ಕೆ ಬಾರದೇ ಅಕ್ಕಪಕ್ಕದವರಿಗೆ ಪಾರ್ಕಿಂಗ್ ಜಾಗವಾಗಿ ಆಗಿ ಪರಿಣಮಿಸಿದೆ.

ಕಸ್ತೂರ ಬಾ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿ, ಕೆಲಸಕ್ಕೆ ಬರುವವರು ಈ ಉಚಿತ ಪಾರ್ಕಿಂಗ್‌ ಜಾಗದಲ್ಲಿ ತಮ್ಮ ಕಾರುಗಳನ್ನು ಬೆಳಿಗ್ಗೆ ಡ್ಯೂಟಿ ಸಮಯದಲ್ಲಿ ತಂದು ನಿಲ್ಲಿಸಿದರೆ, ಸಾಯಂಕಾಲ ಕೆಲಸ ಬಿಟ್ಟು ಮನೆಗೆ ಹೋಗುವಾಗ ತಗೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಕಾರ್ ಪಾರ್ಕ್ ಮಾಡಿದ್ರೆ ಮೂರ್ನಾಲ್ಕು ದಿನಗಳ ವರೆಗೆ ಜಾಗ ಬಿಟ್ಟು ಕದಲಿಸುವುದಿಲ್ಲ. ಈ ಬಗ್ಗೆ ಪಾಲಿಕೆ ಇತ್ತಕಡೆ ಲಕ್ಷ್ಯ ವಹಿಸಬೇಕು ಹಾಗೂ ಪಾಲಿಕೆ ಆಯುಕ್ತರು ಸ್ಥಳ‌ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಜುಲೈ 1ರಿಂದ ರಾಜ್ಯದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಬೆಲೆ ಇಳಿಕೆ

ಒಟ್ಟಿನಲ್ಲಿ ಮ್ಯೂಸಿಯಂ, ಕಬ್ಬನ್ ಪಾರ್ಕ್‌ಗೆ ಬರುವ ಜನರ ಅನಕೂಲಕ್ಕೆ ಮಾಡಿದ ಪಾರ್ಕಿಂಗ್ ಹೀಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರುಪಯೋಗ ಆಗುತ್ತಿದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ