AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನವನ್ನೇ ಟಾರ್ಗೆಟ್​ ಮಾಡಿ ಕಳ್ಳತನ; ಸಿಸಿಟಿವಿ ಜಾಡು ಹಿಡಿದು ಖದೀಮನ ಬಂಧನ

ಅವನು ಅಂತಿಂಥ ಕಳ್ಳನಲ್ಲ, ದೇವರಿಗೆ ಸವಾಲು ಹಾಕಿ ದೇವಾಲಯಗಳಿಗೆ ಕಳ್ಳತನ ಮಾಡುವ ಖತರ್ನಾಕ್ ಕಳ್ಳ. ದೇವಸ್ಥಾನಕ್ಕೆ ಎಷ್ಟೇ ಭದ್ರತೆ ಇರಲಿ, ಬೀಗಗಳಿರಲಿ, ಕಳ್ಳತನ ಮಾಡಬೇಕೆಂದರೆ ಮಾಡಿಯೇ ತೀರುತ್ತಿದ್ದ. ಹೀಗೆ ಪ್ರತಿಷ್ಠಿತ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಷ್ಟಕ್ಕೂ ಅವನು ಯಾರು ಅಂತೀರಾ? ಈ ಸ್ಟೋರಿ ಓದಿ.

ದೇವಸ್ಥಾನವನ್ನೇ ಟಾರ್ಗೆಟ್​ ಮಾಡಿ ಕಳ್ಳತನ; ಸಿಸಿಟಿವಿ ಜಾಡು ಹಿಡಿದು ಖದೀಮನ ಬಂಧನ
ಬಂಧಿತ ಆರೋಪಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 29, 2024 | 8:40 PM

Share

ಚಿಕ್ಕಬಳ್ಳಾಪುರ, ಮೇ.29: ಚಿಕ್ಕಬಳ್ಳಾಪುರ(Chikkaballapur) ನಗರದ ಹೊರವಲಯದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ.12 ರಂದು ವಿಸ್ಮಯಕಾರಿ ರೀತಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಹುಂಡಿ ಹಣವನ್ನು ದೋಚಿ ಪರಾರಿಯಾಗಿದ್ದ. ಆರೋಪಿಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಸಿಸಿ ಟಿವಿ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ.

ಚಿಕ್ಕಬಳ್ಳಾಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿ ಆರೋಪಿ ತಿಪ್ಪೇಶ್ ಅಲಿಯಾಸ್ ಭರತ್ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ. ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಯ ಕಾಯಕವೇ ದೇವಸ್ಥಾನಗಳ ಕಳ್ಳತನ ಎನ್ನುವುದು ಬಯಲಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕಳ್ಳತನ ಮಾಡೋಕೆ ಖದೀಮನಿಗೂ ತಿಂಗಳ ಸಂಬಳ; ಚೋರ ಗುರು ಸೇರಿ ಮೂವರು ಅರೆಸ್ಟ್

ಇನ್ನು ಬಂಧಿತ ಆರೋಪಿ ದೇವಸ್ಥಾನಗಳನ್ನು ಕಳ್ಳತನ ಮಾಡುವುದು, ಜೈಲಿಗೆ ಹೋಗಿ ಬರುವುದನ್ನು ಕಾಯಕ ಮಾಡಿಕೊಂಡಿದ್ದನಂತೆ. ಒಂದೊಂದು ಊರಿನಲ್ಲಿ ಒಂದೊಂದು ಹೆಸರು ಇಟ್ಟುಕೊಂಡಿದ್ದ ಇತ, ಸದ್ಯ ಚಿಕ್ಕಬಳ್ಳಾಪುರದಲ್ಲಿ ನಡೆದ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಆರೋಪಿ ಮತ್ತೆ ಹೊರಗಡೆ ಬಂದರೆ ಇನ್ಯಾವ ದೇವಸ್ಥಾನಕ್ಕೆ ಖನ್ನ ಹಾಕುತ್ತಾನೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ