ಲಖನೌ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಘಟನೆ ನಡೆದು ಕೇವಲ ಒಂದು ವಾರದ ನಂತರ ಲಖನೌ ವಿಶ್ವವಿದ್ಯಾನಿಲಯದಲ್ಲಿ (Lucknow University) ದಲಿತ (Dalit) ಪ್ರಾಧ್ಯಾಪಕ ರವಿಕಾಂತ್ ಮೇಲೆ ಸಮಾಜವಾದಿ ಛಾತ್ರ ಸಭಾದ (Samajwadi Chhatra Sabha) ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ವರದಿ ಆಗಿದೆ. ದಾಳಿ ನಡೆದಾಗ ಲಖನೌ ವಿಶ್ವವಿದ್ಯಾನಿಲಯ ಒದಗಿಸಿದ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಪ್ರೊ ಕಾಂತ್ ಜೊತೆಗಿದ್ದರು. ಪ್ರೊಕ್ಟೋರಿಯಲ್ ಬೋರ್ಡ್ ಸದಸ್ಯರ ಸಮ್ಮುಖದಲ್ಲಿ ಮೊದಲ ದಾಳಿ ನಡೆದಿತ್ತು, ಆದರೆ ಲಖನೌ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಪ್ರೊ ಕಾಂತ್ ಅವರ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬುಧವಾರ ಪೊಲೀಸರು ಎಸ್‌ಟಿ/ಎಸ್‌ಸಿ ಕಾಯ್ದೆ, ಕ್ರಿಮಿನಲ್ ಹಲ್ಲೆ, ಥಳಿಸುವಿಕೆ ಮತ್ತು ನಿಂದನೆ ಮತ್ತು ಪ್ರಯಾಣ ತಡೆಯುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕಾರ್ತಿಕ್ ಪಾಂಡೆ ಎಂದು ಗುರುತಿಸಲಾದ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳನ್ನು ಸಹ ದಾಖಲಿಸಿದ್ದಾರೆ. ರವಿಕಾಂತ್ ತನ್ನ ದೂರಿನಲ್ಲಿ, ತಾನು ಬಿಎ 6ನೇ ಸೆಮಿಸ್ಟರ್ ತರಗತಿಗಳನ್ನು ತೆಗೆದುಕೊಳ್ಳಲು ಹೋಗುತ್ತಿದ್ದೆ. ಮೇ 10 ರ ಘಟನೆಯ ನಂತರ ತನಗೆ ಒದಗಿಸಲಾದ ಭದ್ರತಾ ಸಿಬ್ಬಂದಿ ನನ್ನ ಜತೆಗಿದ್ದನು ಎಂದಿದ್ದಾರೆ. ಮೇ 10 ರ ಘಟನೆಯಲ್ಲಿ ರವಿಕಾಂತ್ ಮೇಲೆ ಎಬಿವಿಪಿ ಪದಾಧಿಕಾರಿಗಳು ಮತ್ತು ಇತರ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಈ ಘಟನೆ ನಂತರ ರವಿಕಾಂತ್ ಅವರಿಗೆ ಭದ್ರತೆ ಒದಗಿಸಲಾಗಿತ್ತು.
ಮೇ 10 ರಂದು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ರವಿಕಾಂತ್ ಆರೋಪಿಸಿದ್ದಾರೆ. ಮೊದಲ ಘಟನೆ ವರದಿಯಾದ ಒಂದು ವಾರದ ನಂತರ ನನ್ನ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿರುವುದು ಪೊಲೀಸರ ಅಸಡ್ಡೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ಕುಟುಂಬ ಸಾಯಬಹುದು. ನನ್ನ ಪ್ರಕರಣವನ್ನು ತಕ್ಷಣ ಗಮನಿಸಬೇಕು ”ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉತ್ತರ ವಲಯದ ಎಡಿಸಿಪಿ ಪ್ರಾಚಿ ಸಿಂಗ್ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:15 pm, Wed, 18 May 22