ರೋಗಿಯ ತಲೆಗೆ ಹೊಲಿಗೆ ಹಾಕಿ ಸೂಜಿಯನ್ನು ಅಲ್ಲೇ ಮರೆತ ವೈದ್ಯರು
ವೈದ್ಯರೊಬ್ಬರು ರೋಗಿಯ ತಲೆಗೆ ಹೊಲಿಗೆ ಹಾಕಿ ಅಲ್ಲಿಯೇ ಸೂಜಿ ಮರೆತುಬಿಟ್ಟಿರುವ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ. ಅಕ್ಕಪಕ್ಕದ ಮನೆಯವರ ನಡುವೆ ನಡೆದ ಕಲಹದಲ್ಲಿ ಸಿತಾರಾ ಎಂಬುವವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಆಕೆಯ ತಲೆಗೆ ಹೊಲಿಗೆ ಹಾಕಿದ್ದ ವೈದ್ಯರು ಸೂಜಿಯನ್ನು ಅಲ್ಲಿಯೇ ಬಿಟ್ಟು, ತಲೆಗೆ ಬ್ಯಾಂಡೇಜ್ ಮಾಡಿ ಮನೆಗೆ ಕಳುಹಿಸಿದ್ದರು.

ಮನೆಗೆ ಹಿಂದಿರುಗಿದ ಯುವತಿಗೆ ನೋವಿನಿಂದ ಕಿರುಚಾಡಲು ಶುರು ಮಾಡಿದ್ದಳು, ಕೂಡಲೇ ಆಕೆಯನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿದ್ದ ವೈದ್ಯರು ಆಕೆಯ ಬ್ಯಾಂಡೇಜ್ ತೆಗೆದು ಗಾಯದ ಮೇಲಿದ್ದ ಸೂಜಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಅದನ್ನು ತೆಗೆದ ಬಳಿಕ ಆಕೆಗೆ ಸ್ವಲ್ಪ ಸಮಾಧಾನವಾಗಿದೆ.
ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪಾನಮತ್ತರಾಗಿದ್ದರು ಎಂದು ಯುವತಿಯ ತಾಯಿ ಹೇಳಿದ್ದಾರೆ. ಯಾರೂ ಕೂಡ ಅಲ್ಲಿಗೆ ಹೋಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಹಾಪುರ್ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ ಸುನಿಲ್ ತ್ಯಾಗಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ದ್ವಿಸದಸ್ಯ ತಂಡದಿಂದ ತನಿಖೆಗೆ ಆದೇಶಿಸಿದ್ದೇವೆ, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮತ್ತಷ್ಟು ಓದಿ: ಕಾಲಿನ ಗಾಯಕ್ಕೆ ಆಸ್ಪತ್ರೆಗೆ ದಾಖಲಾದ ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು
ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಪಾನಮತ್ತರಾಗಿದ್ದರು ಎನ್ನುವ ವಿಚಾರದ ಕುರಿತು ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಅಂತಹ ವೈದ್ಯರಿಲ್ಲ, ತನಿಕೆ ನಡೆಸುತ್ತೇವೆ ಎಂದರು.
ರೋಗಿಯ ದೇಹದಲ್ಲಿ ಉಳಿದಿರುವ ಶಸ್ತ್ರಚಿಕಿತ್ಸಾ ಸೂಜಿಗಳು ದೀರ್ಘಕಾಲದ ನೋವು, ಗಾಯ ಹೆಚ್ಚಾಗುವುದು ಸೇರಿದಂತೆ ಮೆದುಳಿಗೂ ಗಾಯಗಳನ್ನುಂಟುಮಾಡುವ ಸಾಧ್ಯತೆ ಇತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ