ಕಾಲಿನ ಗಾಯಕ್ಕೆ ಆಸ್ಪತ್ರೆಗೆ ದಾಖಲಾದ ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು
ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಬಾಲಕನ ಕಾಲಿಗೆ ಗಾಯವಾಗಿದ್ದು, ಜೂ.15ರಂದು ಶಹಾಪುರದ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಯಗೊಂಡ ಕಾಲಿನ ಬದಲಿಗೆ ವೈದ್ಯರು ಬಾಲಕನ ಖಾಸಗಿ ಅಂಗಕ್ಕೆ ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ಮಹಾರಾಷ್ಟ್ರ: ಒಂಬತ್ತು ವರ್ಷದ ಬಾಲಕನ ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ದಾಖಲಾದ ವೇಳೆ ವೈದ್ಯರು ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಎಡವಟ್ಟು ಮಾಡಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಬಾಲಕನ ಪೋಷಕರ ಹೇಳಿಕೆಯ ಪ್ರಕಾರ, ಕಳೆದ ತಿಂಗಳು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕಾಲಿಗೆ ಗಾಯವಾಗಿತ್ತು, ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಅದರಂತೆ ಶಸ್ತ್ರಚಿಕಿತ್ಸೆ ನಡೆದಿದೆ. ಚಿಕಿತ್ಸೆಯ ಬಳಿಕ ಬಾಲಕನ ಖಾಸಗಿ ಅಂಗಕ್ಕೆ ಹಾಕಿರುವ ಬ್ಯಾಂಡೇಜ್ ಕಂಡು ಪೋಷಕರು ಶಾಕ್ ಗೆ ಒಳಗಾಗಿದ್ದಾರೆ.
ಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಬದಲಾಗಿ ವೈದ್ಯರು ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಎಡವಟ್ಟು ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಪುತ್ತೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಬೆಂಕಿ
‘‘ಕಳೆದ ತಿಂಗಳು ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಬಾಲಕನ ಕಾಲಿಗೆ ಗಾಯವಾಗಿದ್ದು, ಜೂ.15ರಂದು ಶಹಾಪುರದ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಯಗೊಂಡ ಕಾಲಿನ ಬದಲಿಗೆ ವೈದ್ಯರು ಖಾಸಗಿ ಅಂಗಕ್ಕೆ ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ನಂತರ, ಅವರ ಮೂರ್ಖತನವನ್ನು ಅರಿತುಕೊಂಡ ನಂತರ, ವೈದ್ಯರು ಶೀಘ್ರದಲ್ಲೇ ಅವರ ಗಾಯಗೊಂಡ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ” ಎಂದು ಸುದ್ದಿ ಸಂಸ್ಥೆ ಪಿಟಿಐ ಬಾಲಕನ ಪೋಷಕರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಏನಿದು ಸುನ್ನತಿ ಶಸ್ತ್ರಚಿಕಿತ್ಸೆ?
ಸುನ್ನತಿ ಎಂದರೆ ಶಸ್ತ್ರಚಿಕಿತ್ಸೆಯ ಮೂಲಕ ಮುಂದೊಗಲನ್ನು ತೆಗೆಯುವುದು. ಅಂದರೆ ಶಿಶ್ನದ ತಲೆಯ ಮೇಲೆ ಆವರಿಸುವ ಚರ್ಮವನ್ನು ತೆಗೆಯುವುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ