Viral Video : ಈ ಮಳೆಗೆ ಸ್ಕೂಟರ್ ಸೀಟಿನೊಳಗೆ ಬೆಚ್ಚಗೆ ಕುಳಿತಿದ್ದ ಹೆಬ್ಬಾವು, ಬೈಕ್ ಸವಾರ ಶಾಕ್
ಮಳೆಗಾಲದಲ್ಲಿ ಹಾವುಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು, ಅದರಲ್ಲಿ ಬೆಚ್ಚಗಿರುವ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈಗಾಗಲೇ ಇಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಆದರೆ ಇದೀಗ ಸಣ್ಣ ಹೆಬ್ಬಾವೊಂದು ಸ್ಕೂಟರ್‌ನ ಪೆಟ್ರೋಲ್ ಟ್ಯಾಂಕಿಗೆ ಸುರುಳಿ ಸುತ್ತಿಕೊಂಡು ಮಲಗಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಗಾಬರಿಗೊಂಡಿದ್ದಾರೆ.
ಹಾವುಗಳೆಂದರೆ ಎಲ್ಲರಿಗೂ ಭಯನೇ, ಇದನ್ನು ನೋಡುವುದು ಬಿಡಿ, ಹಾವು ಎಂದರೆ ಸಾಕು ನಡುಕ ಶುರುವಾಗುತ್ತದೆ. ಇನ್ನು ನಮ್ಮ ಕಣ್ಣಿಗೆ ಬಿದ್ದರಂತೂ ಒಂದು ಕ್ಷಣವು ಅಲ್ಲಿ ನಿಲ್ಲುವುದೇ ಇಲ್ಲ ಬಿಡಿ. ಈ ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಋತುವಿನಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಹಾವುಗಳಿಂದ ಪ್ರಾಣಕ್ಕೆ ಕುತ್ತು ಬರುವುದು ಖಂಡಿತ. ಇದೀಗ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್‌ಗೆ ಸಣ್ಣ ಹೆಬ್ಬಾವೊಂದು ಸುತ್ತಿಕೊಂಡಿರುವ ವಿಡಿಯೋ ಮೈ ಜುಮ್ ಎನ್ನುವಂತಿದೆ.
ಸಾಲಿತ್ ಮುಲ್ಲಂಬತ್ ಎಂಬ ವ್ಯಕ್ತಿಯೂ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬರು, ಒಂದು ಕೋಲಿನಿಂದ ಸ್ಕೂಟರ್ ಸೀಟನ್ನು ತೆರೆದಿದ್ದಾರೆ. ಈ ವೇಳೆ ಸಣ್ಣ ಗಾತ್ರದ ಹೆಬ್ಬಾವೊಂದು ಪೆಟ್ರೋಲ್ ಟ್ಯಾಂಕ್ ಸುತ್ತ ಸುರುಳಿ ಸುತ್ತಿಕೊಂಡು ಮಲಗಿರುವುದು ಕಾಣಬಹುದು. ಈ ಹಾವು ಅಲ್ಲಿಗೆ ಹೇಗೆ ಹೋಯಿತು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ವ್ಯಕ್ತಿಯೂ ಮಲಯಾಳಂ ಮಾತನಾಡುತ್ತಿರುವ ಕಾರಣ ಈ ಘಟನೆ ನಡೆದಿರುವುದು ಕೇರಳದ್ದು ಎನ್ನಲಾಗಿದೆ.
ಇದನ್ನೂ ಓದಿ: ಪುತ್ತೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಬೆಂಕಿ
ವೈರಲ್ ವಿಡಿಯೋ:
View this post on Instagram
ವೈರಲ್ ಆಗಿರುವ ಈ ವಿಡಿಯೋವ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರನೊಬ್ಬ, “ಪೆಟ್ರೋಲ್ ಟ್ಯಾಂಕ್‌ನಲ್ಲಿ ಎಷ್ಟು ಇಂಧನವಿದೆ ಎಂದು ನೋಡಲು ಅದು ಅಲ್ಲಿಗೆ ಹೋದಂತೆ ತೋರುತ್ತಿದೆ!” ಎಂದಿದ್ದಾನೆ. ಮತ್ತೊಬ್ಬನು “ಇದು ಭಾರತೀಯ ಹೆಬ್ಬಾವು, ಇದು ವಿಷರಹಿತವಾಗಿದೆ” ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ