Video Viral: ಬ್ಯಾಗಿನಲ್ಲಿ ಏಡಿಗಳನ್ನು ತುಂಬಿಕೊಂಡು ವಿಮಾನ ಪ್ರಯಾಣ ಹೊರಟ ವ್ಯಕ್ತಿ; ಮುಂದೆನಾಯಿತು ನೋಡಿ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬ್ಯಾಗಿನೊಳಗೆ ಜೀವಂತ ಏಡಿಗಳನ್ನು ತುಂಬಿಸಿ ತಂದಿದ್ದು, ಏಕಾಏಕಿ ಬ್ಯಾಗಿನೊಳಗಿನಿಂದ ರಾಶಿ ರಾಶಿ ಏಡಿಗಳು ಬ್ಯಾಗಿನಿಂದ ಹೊರಬಂದು ಏರ್ಪೋರ್ಟ್ ತುಂಬೆಲ್ಲಾ ಓಡಾಡಿದೆ. ವಿಡಿಯೋ ಇಲ್ಲಿದೆ ನೋಡಿ.
ವಿಮಾನ ನಿಲ್ದಾಣದಲ್ಲಿ ಲಗೇಜ್ ಬ್ಯಾಗ್‌ನಲ್ಲಿ ಚಿನ್ನ, ಬೆಳ್ಳಿ ಅಥವಾ ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಘಟನೆಗಳ ಬಗ್ಗೆ ಆಗಾಗ್ಗೆ ಸುದ್ದಿಯಾಗುವುದುಂಟು. ಮೇಲಾಗಿ ಹಾವು, ಚೇಳುಗಳಂತಹ ಪ್ರಾಣಿಗಳನ್ನು ಚೀಲಗಳಲ್ಲಿ ತುಂಬಿಕೊಂಡು ವಿಮಾನ ನಿಲ್ದಾಣ ತಲುಪಿ ನಂತರ ಸಿಕ್ಕಿಬಿದ್ದ ಘಟನೆಗಳೂ ಕೂಡ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅಂತಹ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬ್ಯಾಗಿನೊಳಗೆ ಜೀವಂತ ಏಡಿಗಳನ್ನು ತುಂಬಿಸಿ ತಂದಿದ್ದು, ಏಕಾಏಕಿ ಬ್ಯಾಗಿನೊಳಗಿನಿಂದ ರಾಶಿ ರಾಶಿ ಏಡಿಗಳು ಹೊರಬಂದಿದ್ದು, ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯ ಬಹಾಮಾಸ್ನ ಲಿಂಡೆನ್ ಪಿಂಗ್ಲಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡೆದಿದೆ.
@lyricaanderson ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 9ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 62. 8 ಮಿಲಿಯನ್ ಅಂದರೆ 6 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 769,703 ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ವೈರಲ್ ಆಗಿರುವ ವಿಡಿಯೋದಲ್ಲಿ ಏರ್ಪೋರ್ಟ್ನಲ್ಲಿ ಲಗೇಜ್ ಬ್ಯಾಗ್ ಜೊತೆಗೆ ರಾಶಿ ರಾಶಿ ಏಡಿಗಳು ಹರಿದಾಡುತ್ತಿರುವುದನ್ನು ಕಾಣಬಹುದು. ರಾಶಿ ರಾಶಿ ಏಡಿಗಳನ್ನು ಕಾಣುತ್ತಿದ್ದಂತೆ ಪ್ರಯಾಣಿಕರು ದಂಗಾಗಿ ಹೋಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ