ಕಳ್ಳತನ ಮಾಡಲು ಹೋಗಿ ಎಸಿ ಕೆಳಗೆ ನಿದ್ರೆಗೆ ಜಾರಿದ ಕಳ್ಳ
ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಸೇರಿದಂತೆ ಹಲವೆಡೆ ಇನ್ನೂ ಶಾಖದ ಅಲೆ ಮುಂದುವರೆದಿದೆ. ಇದೇ ಬಿಸಿಲಿನ ಶಾಖದಿಂದ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಲಕ್ನೋನಲ್ಲಿ ನಡೆದಿದೆ. ಕಳ್ಳತನ ಮಾಡಿ ಸೆಕೆಯಿಂದ ಎಸಿ ಕೆಳಗೆ ಮಲಗಿ ನಿದ್ರೆಗೆ ಜಾರಿದ್ದ ಕಳ್ಳನನ್ನು ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಕಳ್ಳತನ ಮಾಡಲು ಹೋದ ಕಳ್ಳನೊಬ್ಬ ಎಸಿ ಕೆಳಗೆ ಮಲಗಿ ನಿದ್ರೆಗೆ ಜಾರಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಇಂದಿರಾನಗರ ಸೆಕ್ಟರ್ 20ರಲ್ಲಿರುವ ಡಾ.ಸುನೀಲ್ ಪಾಂಡೆ ಎಂಬುವವರ ಮನೆಗೆ ನುಗ್ಗಿದ ಕಳ್ಳನೊಬ್ಬ ಬೀಗ ಒಡೆದು ಪಾತ್ರೆ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಚೀಲಕ್ಕೆ ತುಂಬಿಸಿದ್ದಾನೆ.
ಬಳಿಕ ಎಸಿಯ ತಣ್ಣನೆಯ ಗಾಳಿಯಲ್ಲಿ ನಿದ್ರೆಗೆ ಜಾರಿದ್ದಾನೆ, ಅಕ್ಕಪಕ್ಕದ ಮನೆಯವರು ಮನೆಯ ಬೀಗ ಒಡೆದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಎದುರಿಗೆ ಕುಳಿತರೂ ಕಳ್ಳನಿಗೆ ಎಚ್ಚರವಿರಲಿಲ್ಲ. ಬಳಿಕ ಆತನನ್ನು ಎಬ್ಬಿಸಿ ಪೊಲೀಸ್ ಠಾಣೆಗೆ ಕರೆದುಕೊಂಡುಹೋಗಿದ್ದಾರೆ.
ವೈದ್ಯರು ಮತ್ತು ನೆರೆಹೊರೆಯವರು ಮೊದಲು ಕಳ್ಳನನ್ನು ತೀವ್ರವಾಗಿ ಥಳಿಸಿದ್ದಾರೆ. ಮುಂಜಾನೆ ಅವಕಾಶ ಸಿಕ್ಕ ತಕ್ಷಣ ಕಪಿಲ್ ಬೀಗ ಒಡೆದು ಮನೆ ಪ್ರವೇಶಿಸಿದ್ದಾರೆ. ಇನ್ವರ್ಟರ್ ಬ್ಯಾಟರಿ, ಗೀಸರ್, ಪಾತ್ರೆಗಳು ಮತ್ತು ಇತರ ಕೆಲವು ವಸ್ತುಗಳನ್ನು ಎರಡು ಚೀಲಗಳಲ್ಲಿ ಪ್ಯಾಕ್ ಮಾಡಿದ್ದಾನೆ.
ಮತ್ತಷ್ಟು ಓದಿ:ಹಾಡಹಗಲೇ ತಹಶೀಲ್ದಾರ್ ಕಚೇರಿಯ 2 ಪ್ರಿಂಟರ್ಗಳನ್ನು ಕದ್ದೊಯ್ದ ಕಳ್ಳ: ಸಿಸಿಟಿವಿ ದೃಶ್ಯ ನೋಡಿ
ಗೋಣಿಚೀಲದಲ್ಲಿ ವಸ್ತುಗಳನ್ನು ಇಟ್ಟುಕೊಂಡು ಅಲ್ಲಿಯೇ ಸಿಗರೇಟು ಸೇದಿಕೊಂಡು ಮಲಗಿದ್ದ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಬೀಗ ಮುರಿದಿರುವುದನ್ನು ಕಂಡು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ.
ಪೊಲೀಸರು ಮತ್ತು ವೈದ್ಯರೊಂದಿಗೆ ಕೆಲವು ನೆರೆಹೊರೆಯವರು ಸಹ ಮನೆಯೊಳಗೆ ತಲುಪಿದರು. ಕಪಿಲ್ ಅಲ್ಲೇ ಮಲಗಿದ್ದು ಕಂಡು ಬಂತು. ಆತನನ್ನು ಎಚ್ಚರಗೊಳಿಸಲಾಯಿತು ಮತ್ತು ಬಂಧಿಸಲಾಯಿತು. ಸ್ಥಳದಿಂದ ಮಾಲನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಪಿಲ್ ವಿರುದ್ಧ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಎಸಿಪಿ ವಿಕಾಸ್ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ