Uttar Pradesh Flood: ಉತ್ತರ ಪ್ರದೇಶದಲ್ಲಿ ಭೀಕರ ಪ್ರವಾಹ; ಒಬ್ಬರು ಸಾವು, 2.4 ಲಕ್ಷ ಜನರ ಜೀವನ ಅಸ್ತವ್ಯಸ್ತ

| Updated By: ಸುಷ್ಮಾ ಚಕ್ರೆ

Updated on: Aug 31, 2022 | 8:31 AM

ವಾರಾಣಸಿ ಜಿಲ್ಲೆಯಲ್ಲಿ ಗಂಗಾನದಿಯ ನೀರಿನ ಮಟ್ಟ ಅಪಾಯದ ಮಟ್ಟ ದಾಟಿದ್ದು, 115 ಗ್ರಾಮಗಳ 28,499 ಜನರು ಬಾಧಿತರಾಗಿದ್ದಾರೆ. 6,08.572 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Uttar Pradesh Flood: ಉತ್ತರ ಪ್ರದೇಶದಲ್ಲಿ ಭೀಕರ ಪ್ರವಾಹ; ಒಬ್ಬರು ಸಾವು, 2.4 ಲಕ್ಷ ಜನರ ಜೀವನ ಅಸ್ತವ್ಯಸ್ತ
ಉತ್ತರ ಪ್ರದೇಶದ ಪ್ರವಾಹ
Follow us on

ಲಕ್ನೋ: ಉತ್ತರ ಪ್ರದೇಶದ (Uttar Pradesh Rain) 22 ಜಿಲ್ಲೆಗಳ 1,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಉಂಟಾದ ಭಾರೀ ಪ್ರವಾಹದಿಂದ ಸುಮಾರು 2.4 ಲಕ್ಷ ಜನರ ಜೀವನ ಅಸ್ತವ್ಯಸ್ತವಾಗಿದೆ. ಈ ಪ್ರವಾಹದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ, 1,079 ಪ್ರವಾಹ ಪೀಡಿತ ಹಳ್ಳಿಗಳಲ್ಲಿ 153 ಹಳ್ಳಿಗಳು ರಾಜ್ಯದ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿವೆ. ಉತ್ತರ ಪ್ರದೇಶದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸುಮಾರು 21,000 ಜನರು ತಂಗಿರುವ 347 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿರುವಾಗ ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್‌ನ (SDRF) 26 ತಂಡಗಳನ್ನು ಕಾರ್ಯಾಚರಣೆಗೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಹಾರ ಆಯುಕ್ತರ ವರದಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಇದುವರೆಗೆ 2,44,279 ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಗಂಗಾ ಮತ್ತು ವರುಣಾ ನದಿಗಳ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಅದರ ಪ್ರಸಿದ್ಧ ಘಾಟ್‌ಗಳು ಸೇರಿದಂತೆ ವಾರಣಾಸಿಯ ಭಾಗಗಳು ಮುಳುಗಿವೆ. ಹರಿಶ್ಚಂದ್ರ ಮತ್ತು ಮಣಿಕರ್ಣಿಕಾ ಘಾಟ್‌ಗಳಿಗೆ ತಂದ ಶವಗಳನ್ನು ಹತ್ತಿರದ ಬೀದಿಗಳಲ್ಲಿ ಮತ್ತು ಟೆರೇಸ್‌ಗಳಲ್ಲಿ ಸುಡುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: Karnataka Rain: ಭಾರೀ ಮಳೆಯಿಂದ ಕೆರೆಯಂತಾದ ಬೆಂಗಳೂರು; ರಾಜ್ಯಾದ್ಯಂತ ಹಬ್ಬದ ದಿನವೂ ನಿಲ್ಲದ ವರುಣನ ಆರ್ಭಟ

ವಾರಾಣಸಿ ಜಿಲ್ಲೆಯಲ್ಲಿ ಗಂಗಾನದಿಯ ನೀರಿನ ಮಟ್ಟ ಅಪಾಯದ ಮಟ್ಟ ದಾಟಿದ್ದು, 115 ಗ್ರಾಮಗಳ 28,499 ಜನರು ಬಾಧಿತರಾಗಿದ್ದಾರೆ. 6,08.572 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಗಂಗಾ ನದಿಯ ನೀರಿನ ಮಟ್ಟ ಏರಿಕೆಯಿಂದ ಬಲ್ಲಿಯಾ ಜಿಲ್ಲೆಯ 27 ಹಳ್ಳಿಗಳು ಬಾಧಿತವಾಗಿವೆ.

ಹಮೀರ್‌ಪುರ, ಮೌದಾ ಮತ್ತು ಸರಿಲಾದಲ್ಲಿ 2,300 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಪ್ರವಾಹದ ನೀರು ನುಗ್ಗಿದೆ. ಶಿವಾಲಿಕ್ ಬೆಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ನೀರಿನ ರಭಸಕ್ಕೆ ಸಹರಾನ್‌ಪುರದ ಮಾ ಶಾಕಂಬರಿ ದೇವಿ ದೇವಸ್ಥಾನದ ಬಳಿ ಹಲವಾರು ಭಕ್ತರು ಕೆಲಕಾಲ ಸಿಲುಕಿಕೊಂಡರು. ಮಳೆಯಿಂದ ಹಲವಾರು ವಾಹನಗಳು ಭಾಗಶಃ ಮುಳುಗಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 am, Wed, 31 August 22