Dance Video: ಡ್ಯಾನ್ಸ್ ವಿಡಿಯೋ ವೈರಲ್, ನಾಲ್ವರು ಮಹಿಳಾ ಕಾನ್ಸ್ಸ್ಟೆಬಲ್ ಅಮಾನತು
ಮಹಿಳಾ ಕಾನ್ಸ್ಟೆಬಲ್ಗಳ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ನಾಲ್ವರನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಹಿಳಾ ಕಾನ್ಸ್ಟೆಬಲ್ಗಳ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ನಾಲ್ವರನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳು ಭೋಜ್ಪುರಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಮಾನತುಗೊಂಡಿರುವ ಕಾನ್‌ಸ್ಟೆಬಲ್‌ಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮುನಿರಾಜ್ ಜಿ ಅವರು ಗುರುವಾರ ಹೆಚ್ಚುವರಿ ಎಸ್‌ಪಿ (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಕಾನ್‌ಸ್ಟೆಬಲ್‌ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.
#Ayodhya: महिला सिपाहियों के द्वारा बनाया गया ‘पतली कमरिया तोरी’ पर रील। महिला सिपाहियों का विडियो हुआ वायराल। @ayodhya_police pic.twitter.com/YGn8rlj5cU
— Rahul kumar Vishwakarma (@Rahulku18382624) December 16, 2022
ಅಯೋಧ್ಯೆಯ ರಾಮಜನ್ಮಭೂಮಿ ಬಳಿ ಭದ್ರತೆಗಾಗಿ ಅಧಿಕಾರಿಗಳು ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನೇಮಿಸಿದ್ದರು. ನಾಲ್ವರು ಕಾನ್‌ಸ್ಟೆಬಲ್‌ಗಳಲ್ಲಿ ಒಬ್ಬರು ಉತ್ತಮ ನೃತ್ಯಗಾರರಾಗಿದ್ದರು. ಅವರು ಭೋಜ್ ಪುರಿ ಹಾಡಿಗೆ ನೃತ್ಯ ಮಾಡಿದರೆ, ಇತರರು ಚಪ್ಪಾಳೆ ತಟ್ಟಿದ್ದರು, ಮತ್ತೋರ್ವ ಕಾನ್‌ಸ್ಟೆಬಲ್ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.
ಮತ್ತಷ್ಟು ಓದಿ: Viral Video: ದಂಡದಿಂದ ಪಾರಾಗಲು ಟ್ರಾಫಿಕ್ ಪೊಲೀಸ್ಗೆ ಕಾರಿನಲ್ಲಿ ಡಿಕ್ಕಿ ಹೊಡೆದು, 4 ಕಿ.ಮೀ ಎಳೆದುಕೊಂಡು ಹೋದ ಚಾಲಕ
ಮಹಿಳಾ ಸಿಪಾಯಿಗಳ ಡ್ಯಾನ್ಸ್ ಎಂಬ ಶೀರ್ಷಿಕೆಯನ್ನು ವಿಡಿಯೋಗೆ ಸೇರಿಸಲಾಗಿದ್ದು ಅದು ವೈರಲ್ ಆಗಿದೆ. ಡ್ಯಾನ್ಸ್ ಮಾಡಿದ ಕಾನ್‌ಸ್ಟೆಬಲ್ ಹೊರತುಪಡಿಸಿ ಉಳಿದವರೂ ಸಿವಿಲ್ ಡ್ರೆಸ್‌ನಲ್ಲಿದ್ದರು. ಆದರೆ, ಈ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ನಾಲ್ವರನ್ನೂ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ