VIDEO: ಇಶಾನ್ ಕಿಶನ್ ದ್ವಿಶತಕವನ್ನು ಡ್ಯಾನ್ಸ್ ಮಾಡಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
Virat Kohli: ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ ಅಂತಿಮವಾಗಿ 24 ಫೋರ್ ಹಾಗೂ 10 ಸಿಕ್ಸ್ನೊಂದಿಗೆ 210 ರನ್ಗಳಿಸಿ ಔಟಾದರು.
India vs Bangladesh: ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ನಾಯಕ ಲಿಟನ್ ದಾಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಇಶಾನ್ ಕಿಶನ್ (Ishan Kishan) ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾಗ್ಯೂ 5ನೇ ಓವರ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಧವನ್ (3) ಪೆವಿಲಿಯನ್ ಸೇರಿದರು.
ಈ ಹಂತದಲ್ಲಿ ಜೊತೆಯಾದ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ್ದ ಇಶಾನ್ ಕಿಶನ್ ನಿಧಾನಕ್ಕೆ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಇತ್ತ ಕಿಶನ್ ಬಿರುಸಿನ ಬ್ಯಾಟಿಂಗ್ಗೆ ಇಳಿಯುತ್ತಿದ್ದಂತೆ ಅತ್ತ ಬಾಂಗ್ಲಾ ಬೌಲರ್ಗಳು ಲಯ ತಪ್ಪಿದರು.
ಇದನ್ನೂ ಓದಿ: Shreyas Iyer: ಕೆಎಲ್ ರಾಹುಲ್ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್
ಅದರಂತೆ 85 ಎಸೆತಗಳಲ್ಲಿ ಚೊಚ್ಚಲ ಶತಕ ಬಾರಿಸಿದ ಇಶಾನ್ ಆ ಬಳಿಕ ಸಿಡಿಲಬ್ಬರವನ್ನು ಪ್ರಾರಂಭಿಸಿದ್ದರು. ಸೆಂಚುರಿ ಮೂಡಿ ಬರುತ್ತಿದ್ದಂತೆ ರೌದ್ರನರ್ತನ ತೋರಲಾರಂಭಿಸಿದ ಯುವ ದಾಂಡಿಗನ ಬ್ಯಾಟ್ನಿಂದ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು. ಪರಿಣಾಮ ಕೇವಲ 125 ಎಸೆತಗಳಲ್ಲಿ ಕಿಶನ್ 199 ರನ್ಗಳಿಸಿದ್ದರು. 35ನೇ ಓವರ್ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ 1 ರನ್ ಕಲೆಹಾಕುತ್ತಿದ್ದಂತೆ ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ವಿರಾಟ್ ಕೊಹ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: IPL 2023: ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್?
1 ರನ್ಗಾಗಿ ಇಶಾನ್ ಕಿಶನ್ ಓಡುತ್ತಿದ್ದಂತೆ ಬ್ಯಾಟ್ ಮೇಲೆತ್ತಿ ಸಂಭ್ರಮಿಸುತ್ತಾ ವಿರಾಟ್ ಕೊಹ್ಲಿ ರನ್ ಓಡಿದರು. ಅಷ್ಟೇ ಅಲ್ಲದೆ ಭಾಂಗ್ರ ಸ್ಟ್ರೈಲ್ನಲ್ಲಿ ಡ್ಯಾನ್ಸ್ ಮಾಡುತ್ತಾ ಅಲ್ಲದೆ ಯುವ ಆಟಗಾರನನ್ನು ಅಭಿನಂದಿಸಿದರು. ಇದೀಗ ಕಿಂಗ್ ಕೊಹ್ಲಿ ಹಾಗೂ ಇಶಾನ್ ಕಿಶನ್ರ ಸಂಭ್ರಮದ ವಿಡಿಯೋ ವೈರಲ್ ಆಗಿದೆ. ಅದರಲ್ಲೂ ಸಹ ಆಟಗಾರನ ಸಾಧನೆಯನ್ನು ಸಂಭ್ರಮಿಸಿದ ಕೊಹ್ಲಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Look what it means to him ? What. A. Moment. ??
4th ?? to score a Double-Hundred in ODIs. Take a bow, @ishankishan51 ?#SonySportsNetwork #IshanKishan #BANvIND pic.twitter.com/STpCCyXawN
— Sony Sports Network (@SonySportsNetwk) December 10, 2022
ಇನ್ನು ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ ಅಂತಿಮವಾಗಿ 24 ಫೋರ್ ಹಾಗೂ 10 ಸಿಕ್ಸ್ನೊಂದಿಗೆ 210 ರನ್ಗಳಿಸಿ ಔಟಾದರು. ಮತ್ತೊಂದೆಡೆ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 11 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 113 ರನ್ ಬಾರಿಸಿದರು. ಈ ದ್ವಿಶತಕ ಹಾಗೂ ಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 409 ರನ್ ಕಲೆಹಾಕಿತು.