- Kannada News Photo gallery Cricket photos ICC Men's Test Player Rankings: Marnus Labuschagne Claim top spot Kannada News zp
ICC Test Player Rankings: ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಟಾಪ್-10 ನಲ್ಲಿ ರಿಷಭ್ ಪಂತ್..!
ICC Men's Test Player Rankings: ಟಾಪ್-20 ಯಲ್ಲೂ ಭಾರತದ ಬೇರೆ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗಿದ್ರೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...
Updated on: Dec 08, 2022 | 5:23 PM

ICC Men's Test Player Rankings: ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್ಮನ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್ಗಳು ಸ್ಥಾನ ಪಡೆದಿದ್ದಾರೆ.

ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಲಾಬುಶೇನ್ ಕಾಣಿಸಿಕೊಂಡಿದ್ದಾರೆ. ಅದು ಕೂಡ ಟೆಸ್ಟ್ ಕ್ರಿಕೆಟಿಗನ ದಿಗ್ಗಜರೆನಿಸಿಕೊಂಡಿರುವ ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಹಾಗೆಯೇ ಈ ಬಾರಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10 ನಿಂದ ಹೊರಬಿದ್ದಿದ್ದಾರೆ. ಕೊಹ್ಲಿ ನೂತನ ಶ್ರೇಯಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿ ಟಾಪ್-20 ಯಲ್ಲೂ ಭಾರತದ ಬೇರೆ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗಿದ್ರೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...

1- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ): 935 ಅಂಕಗಳು

2- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 893 ಅಂಕಗಳು

3- ಬಾಬರ್ ಆಜಂ (ಪಾಕಿಸ್ತಾನ್): 879 ಅಂಕಗಳು

4- ಜೋ ರೂಟ್ (ಇಂಗ್ಲೆಂಡ್): 876 ಅಂಕಗಳು

5- ರಿಷಭ್ ಪಂತ್ (ಭಾರತ): 801 ಅಂಕಗಳು

6- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 786 ಅಂಕಗಳು

7- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ): 752 ಅಂಕಗಳು

8- ದಿಮುತ್ ಕರುಣರತ್ನೆ (ಶ್ರೀಲಂಕಾ): 748 ಅಂಕಗಳು

9- ರೋಹಿತ್ ಶರ್ಮಾ (ಭಾರತ): 746 ಅಂಕಗಳು

10- ಡೇರಿಲ್ ಮಿಚೆಲ್ (ನ್ಯೂಜಿಲೆಂಡ್): 715 ಅಂಕಗಳು



















