ಫೈಜಾಬಾದ್​ ರೈಲ್ವೆ ಸ್ಟೇಶನ್​ ಹೆಸರು ಬದಲಿಸಲು ಯೋಗಿ ಸರ್ಕಾರ ನಿರ್ಧಾರ; ಅದಕ್ಕೂ ಅಯೋಧ್ಯೆ ಹೆಸರು

| Updated By: Lakshmi Hegde

Updated on: Oct 23, 2021 | 3:20 PM

ಫೈಜಾಬಾದ್​ ರೈಲ್ವೆ ಸ್ಟೇಶನ್​ನ ಹೆಸರನ್ನು ಅಯೋಧ್ಯಾ ಕೈಂಟ್ ಆಗಿ ಬದಲಿಸಲು ಪ್ರಸ್ತಾವನೆ ಇಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎನ್ನಲಾಗಿದೆ.

ಫೈಜಾಬಾದ್​ ರೈಲ್ವೆ ಸ್ಟೇಶನ್​ ಹೆಸರು ಬದಲಿಸಲು ಯೋಗಿ ಸರ್ಕಾರ ನಿರ್ಧಾರ; ಅದಕ್ಕೂ ಅಯೋಧ್ಯೆ ಹೆಸರು
ಯೋಗಿ ಆದಿತ್ಯನಾಥ್​
Follow us on

ಲಖನೌ: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಬಿಜೆಪಿ ಸೇರಿ ಎಲ್ಲ ಪ್ರಮುಖ ಪಕ್ಷಗಳೂ ಅಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಪ್ರಯತ್ನ ಆರಂಭಿಸಿವೆ. ಇದೇ ಹೊತ್ತಲ್ಲಿ ಬಿಜೆಪಿ ಫೈಜಾಬಾದ್​ ರೈಲ್ವೆ ಸ್ಟೇಶನ್​ ಹೆಸರನ್ನು ಬದಲಿಸಲು ನಿರ್ಧಾರ ಮಾಡಿದೆ. ಅದಕ್ಕೆ ಅಯೋಧ್ಯಾ ಕೈಂಟ್​ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದೆ.  ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಮುಖ್ಯಮಂತ್ರಿಯಾದ ಬಳಿಕ ಈಗಾಗಲೇ ಹಲವು ಪ್ರದೇಶಗಳ ಹೆಸರನ್ನು ಬದಲಿಸಿದ್ದಾರೆ. ಇದೇ ಕಾರಣಕ್ಕೆ ಅವರು ಶ್ಲಾಘನೆಯನ್ನೂ ಪಡೆದಿದ್ದಾರೆ. ಟೀಕೆಗೂ ಗುರಿಯಾಗಿದ್ದಾರೆ.

ಫೈಜಾಬಾದ್​ ರೈಲ್ವೆ ಸ್ಟೇಶನ್​ನ ಹೆಸರನ್ನು ಅಯೋಧ್ಯಾ ಕೈಂಟ್ ಆಗಿ ಬದಲಿಸಲು ಪ್ರಸ್ತಾವನೆ ಇಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕಳೆದ ವಾರ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಅಯೋಧ್ಯೆಗೆ ಬಂದಿದ್ದರು. ಆಗ ಆ ಪಕ್ಷದ ಕಾರ್ಯಕರ್ತರು ಅಯೋಧ್ಯೆಯ ಎಲ್ಲೆಡೆ, ಅಯೋಧ್ಯೆಯನ್ನು ಫೈಜಾಬಾದ್​ ಎಂದು ಉಲ್ಲೇಖಿಸಿರುವ ಪೋಸ್ಟರ್​​ಗಳನ್ನು ಹಾಕಿದ್ದರು. ಇದೀಗ ಆ ಪೋಸ್ಟರ್​​ಗಳನ್ನೆಲ್ಲ ತೆಗೆಯುವಂತೆ ಉತ್ತರಪ್ರದೇಶ ಪೊಲೀಸರು ಎಐಎಂಐಎಂ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅಂದಹಾಗೇ ಈ ಫೈಜಾಬಾದ್​ ಎಂಬುದು ಅಯೋಧ್ಯೆಯಲ್ಲಿರುವ ಒಂದು ನಗರ.

ಇದನ್ನೂ ಓದಿ: PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ 1 ಕೋಟಿ ರೂಪಾಯಿ ಉಳಿಸಲು ತಿಂಗಳಿಗೆ ಎಷ್ಟು ಉಳಿಸಬೇಕು?

ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ; ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಗೈರು