ಉತ್ತರ ಪ್ರದೇಶ: ಕಾಲು ತುಂಡಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು, ಮರಣೋತ್ತರ ಪರೀಕ್ಷೆ ನಂತರ ಕಾಲು ನಾಪತ್ತೆ

|

Updated on: Oct 04, 2023 | 3:52 PM

ಕುಟುಂಬಸ್ಥರು ಮಾಡಿರುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂಒ ಡಾ.ಎನ್.ಸಿ.ತ್ರಿಪಾಠಿ ತಿಳಿಸಿದ್ದಾರೆ.ಮಾಹಿತಿ ಪ್ರಕಾರ ಮೃತರನ್ನು ಸಂಜಯ್ ನಗರ ಕ್ಯಾಂಟ್‌ನಲ್ಲಿ ವಾಸವಾಗಿರುವ ರಿಕ್ಷಾ ಚಾಲಕ ಜಗದೀಶ್ ಅವರ ಪುತ್ರ ಹರ್ಷ ಎಂದು ಗುರುತಿಸಲಾಗಿದೆ. ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲಿಗೆ ಸಿಲುಕಿ ಅವರ ಎರಡೂ ಕಾಲುಗಳು ತುಂಡಾಗಿತ್ತು

ಉತ್ತರ ಪ್ರದೇಶ: ಕಾಲು ತುಂಡಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು, ಮರಣೋತ್ತರ ಪರೀಕ್ಷೆ ನಂತರ ಕಾಲು ನಾಪತ್ತೆ
ಕಾನ್ಪುರ ಆಸ್ಪತ್ರೆಯಲ್ಲಿ ಜಗಳ
Follow us on

ಕಾನ್ಪುರ ಅಕ್ಟೋಬರ್ 04: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಹಾಲೆಟ್ ಆಸ್ಪತ್ರೆಯಲ್ಲಿ (Hallett Hospital) ಮೃತಪಟ್ಟ ಯುವಕನ ಎರಡೂ ಕಾಲುಗಳು ನಾಪತ್ತೆಯಾಗಿವೆ. ರೈಲಿಗೆ ಸಿಲುಕಿ ಈ ಯುವಕನ ಎರಡೂ ಕಾಲುಗಳು ತುಂಡಾಗಿವೆ. ಅವರ ಕುಟುಂಬ ಸದಸ್ಯರು ಈ ಕಾಲುಗಳನ್ನು ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮರಣೋತ್ತರ ಪರೀಕ್ಷೆ  ನಂತರ ಕಾಲುಗಳು ನಾಪತ್ತೆಯಾಗಿರುವುದನ್ನು ತಿಳಿದ ಕುಟುಂಬಸ್ಥರು  ಆಸ್ಪತ್ರೆಯವರನ್ನು ಪ್ರಶ್ನಿಸಿದ್ದಾರೆ.  ಗಲಾಟೆ ಹೆಚ್ಚಾದಾಗ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡರು ಎನ್ನಲಾಗಿದೆ. ಈ ಬಗ್ಗೆ ಕುಟುಂಬಸ್ಥರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕುಟುಂಬಸ್ಥರು ಮಾಡಿರುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂಒ ಡಾ.ಎನ್.ಸಿ.ತ್ರಿಪಾಠಿ ತಿಳಿಸಿದ್ದಾರೆ.ಮಾಹಿತಿ ಪ್ರಕಾರ ಮೃತರನ್ನು ಸಂಜಯ್ ನಗರ ಕ್ಯಾಂಟ್‌ನಲ್ಲಿ ವಾಸವಾಗಿರುವ ರಿಕ್ಷಾ ಚಾಲಕ ಜಗದೀಶ್ ಅವರ ಪುತ್ರ ಹರ್ಷ ಎಂದು ಗುರುತಿಸಲಾಗಿದೆ. ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲಿಗೆ ಸಿಲುಕಿ ಅವರ ಎರಡೂ ಕಾಲುಗಳು ತುಂಡಾಗಿತ್ತು . ಮನೆಯವರು ಅವರನ್ನು ಚಿಕಿತ್ಸೆಗಾಗಿ ಹಾಲಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಟುಂಬಸ್ಥರು ಘಟನಾ ಸ್ಥಳದಿಂದ ಹರ್ಷನ ಎರಡೂ ಕಾಲುಗಳನ್ನು ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿ ಆಸ್ಪತ್ರೆಗೆ ಕರೆದೊಯ್ದರು. ಕತ್ತರಿಸಿದ ಕಾಲುಗಳನ್ನು ಮರು ಜೋಡಣೆ ಮಾಡುವಂತೆ ವೈದ್ಯರಿಗೆ ಮನವಿ ಮಾಡಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಹರ್ಷ ಸಾವಿಗೀಡಾಗಿದ್ದಾನೆ.

ವೈದ್ಯರು ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಮನೆಗೆ ಕಳುಹಿಸಿದ್ದಾರೆ. ಇದಾದ ಬಳಿಕ ಕುಟುಂಬಸ್ಥರೂ ಅಲ್ಲಿಗೆ ತಲುಪಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ಅವರ ತುಂಡರಿಸಿದ ಕಾಲುಗಳು ಇಲ್ಲಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಆಮೇಲೆ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಿದ್ದಾರೆ. ವಿಷಯ ತಾರಕಕ್ಕೇರಿದಾಗ ವೈದ್ಯರು ಹಾಗೂ ಇತರೆ ವೈದ್ಯಾಧಿಕಾರಿಗಳು ಬೆದರಿಸಿ ಒತ್ತೆಯಾಳಾಗಿ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾದ ನಂತರ, ಬಲವಂತವಾಗಿ ಖಾಲಿ ಕಾಗದದ ಮೇಲೆ ಹೆಬ್ಬೆರಳಿನ ಗುರುತನ್ನು ಪಡೆದು ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ರಾಜಸ್ಥಾನ: ಆಟವಾಡುವಾಗ ಜೋಕಾಲಿಯ ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು

ಕುಟುಂಬದವರ ಪ್ರಕಾರ ಡಾ. ಸಂಜಯ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಹರ್ಷನನ್ನು ಹಾಲೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಸಮಯದಲ್ಲಿ, ಮರಣೋತ್ತರ ಪರೀಕ್ಷೆಯ ನಂತರ ಕಾಲುಗಳು ಪತ್ತೆಯಾಗದಿದ್ದಾಗ ನಾವು ವೈದ್ಯರನ್ನು ಪ್ರಶ್ನಿಸಿದೆವು, ಆದರೆ ವೈದ್ಯರು ಬೇರೇನೋ ಮಾತನಾಡುತ್ತಾ ದೂರವಾಗಲು ಪ್ರಯತ್ನಿಸಿದರು. ಗಲಾಟೆ ಹೆಚ್ಚುತ್ತಿದ್ದಂತೆಯೇ ಇಎಂಒ ಅನುರಾಗ್ ರಾಜೋರಿಯಾ ಸ್ಥಳಕ್ಕೆ ಆಗಮಿಸಿ ವೈದ್ಯರನ್ನು ವಿಚಾರಣೆ ನಡೆಸಿದರು. ಈ ವೇಳೆ ಹರ್ಷ ಸಾವಿನ ನಂತರ ಶವವನ್ನು ಹಸ್ತಾಂತರಿಸುವಂತೆ ವೈದ್ಯರು ನರ್ಸ್‌ಗೆ ಹೇಳಿದ್ದು, ಮೃತದೇಹದ ಜತೆಗೆ ಆತನ ಕಾಲುಗಳೂ ಇದ್ದವು ಎಂದು ತಿಳಿದುಬಂದಿದೆ. ಆದರೆ, ಮೃತದೇಹವನ್ನು ಹಸ್ತಾಂತರಿಸಿ ಮರಣೋತ್ತರ ಪರೀಕ್ಷೆಯ ಮನೆಗೆ ರವಾನಿಸಿದ ನರ್ಸ್ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ