AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಐವರು ಮಕ್ಕಳಿದ್ರೂ 1.5 ಕೋಟಿ ರೂ. ಮೊತ್ತದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ವೃದ್ಧ

85 ವರ್ಷದ ವೃದ್ಧರೊಬ್ಬರು ತಮಗೆ ಐವರು ಮಕ್ಕಳಿದ್ದರೂ 1.5 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದಿದ್ದಾರೆ. ನಾಥು ಸಿಂಗ್ ಅವರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ ಮತ್ತು ಮಗ ಹಾಗೂ ನಾಲ್ವರು ಪುತ್ರಿಯರನ್ನು ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳದಿರುವಂತೆ ತಿಳಿಸಿದ್ದಾರೆ.

Uttar Pradesh: ಐವರು ಮಕ್ಕಳಿದ್ರೂ 1.5 ಕೋಟಿ ರೂ. ಮೊತ್ತದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ವೃದ್ಧ
ನಾಥು ಸಿಂಗ್Image Credit source: NDTV
ನಯನಾ ರಾಜೀವ್
|

Updated on:Mar 06, 2023 | 3:04 PM

Share

85 ವರ್ಷದ ವೃದ್ಧರೊಬ್ಬರು ತಮಗೆ ಐವರು ಮಕ್ಕಳಿದ್ದರೂ 1.5 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದಿದ್ದಾರೆ. ನಾಥು ಸಿಂಗ್ ಅವರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ ಮತ್ತು ಮಗ ಹಾಗೂ ನಾಲ್ವರು ಪುತ್ರಿಯರನ್ನು ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳದಿರುವಂತೆ ತಿಳಿಸಿದ್ದಾರೆ. ನಾಥು ಸಿಂಗ್ ಮುಜಾಫರ್​ನಗರದ ನಿವಾಸಿಯಾಗಿದ್ದಾರೆ. ಅವರು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗ ಇದ್ದು, ಅವರು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ವರು ಹೆಣ್ಣುಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ.

ಪತ್ನಿಯ ಸಾವಿನ ಬಳಿಕ ವೃದ್ಧರು ಒಬ್ಬರೇ ಜೀವನ ನಡೆಸುತ್ತಿದ್ದರು, ಏಳು ತಿಂಗಳುಗಳ ಕಾಲ ತಮ್ಮ ಗ್ರಾಮದ ವೃದ್ಧಾಶ್ರಮದಲ್ಲಿದ್ದರು. ತಮ್ಮ ಕುಟುಂಬದ ಯಾರೂ ಅವರನ್ನು ಭೇಟಿಯಾಗಲು ಬಾರದ ಕಾರಣ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ತನ್ನ ಆಸ್ತಿಯ ವಿಲ್ ಮಾಡಿ, ಅವರ ಮರಣ ನಂತರ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ಕೇಳಿದ್ದಾರೆ.

ಈ ವಯಸ್ಸಿನಲ್ಲಿ ನಾನು ಮಗ ಹಾಗೂ ಸೊಸೆಯೊಂದಿಗೆ ವಾಸಿಸಬೇಕಿತ್ತು, ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ, ಹಾಗಾಗಿ ನನ್ನ ಆಸ್ತಿಯನ್ನು ಸರ್ಕಾರಕ್ಕೆ ನೀಡುವ ನಿರ್ಧಾರ ಮಾಡಿದೆ. ವೃದ್ಧಾಶ್ರಮಕ್ಕೆ ಬಂದು 7 ತಿಂಗಳಾದರೂ ಕುಟುಂಬದವರು ಯಾರೂ ಕೂಡ ಅವರು ಹೇಗಿದ್ದಾರೆ ಎಂದು ತಿಳಿಯಲು ವೃದ್ಧಾಶ್ರಮಕ್ಕೆ ಆಗಮಿಸಿಲ್ಲ ಎಂದು ಮ್ಯಾನೇಜರ್ ರೇಖಾ ಸಿಂಗ್ ಹೇಳಿದ್ದಾರೆ. ಆ ಪ್ರದೇಶದ ಸಬ್​ ರಿಜಿಸ್ಟ್ರಾರ್ ಅವರು ಸಿಂಗ್​ ಅವರ ಅಫಿಡವಿಟ್ ಅನ್ನು ಸ್ವೀಕರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Mon, 6 March 23