Nikki Yadav Murder Case: ಆರೋಪಿ ಸಾಹಿಲ್ ಗೆಹ್ಲೋಟ್ ಸೇರಿ 5 ಮಂದಿಗೆ 14 ದಿನ ನ್ಯಾಯಾಂಗ ಬಂಧನ
ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ದ್ವಾರಕಾ ನ್ಯಾಯಾಲಯವು ಆರೋಪಿ ಸಾಹಿಲ್ ಗಹ್ಲೋಟ್ ಮತ್ತು ಇತರ 5 ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ.
ದೆಹಲಿ: ನಿಕ್ಕಿ ಯಾದವ್ (Nikki Yadav) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ದ್ವಾರಕಾ ನ್ಯಾಯಾಲಯವು ಆರೋಪಿ ಸಾಹಿಲ್ ಗಹ್ಲೋಟ್ ಮತ್ತು ಇತರ 5 ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. 24ರ ಹರೆಯದ ಯುವಕ ತನ್ನ ಗೆಳತಿ ನಿಕ್ಕಿಯನ್ನು ಕೊಂದು ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿ ಇರಿಸಿರುವ ಪಕ್ರರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿತ್ತು, ಇದೀಗ ದೆಹಲಿ ಕೋರ್ಟ್ ನಿಕ್ಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 6 ಜನ ಆರೋಪಿಗಳನ್ನು ಹೆಚ್ಚಿನ ತನಿಖೆಯಾಗಿ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮೀಕ್ಷಾ ಗುಪ್ತಾ ಅವರ ಪೀಠಿವು ಇತರ ಐವರ ಸಹ-ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. ಇದಕ್ಕೂ ಮೊದಲು ಫೆಬ್ರವರಿ 22 ರಂದು ನ್ಯಾಯಾಲಯವು ಗೆಹ್ಲೋಟ್ ಅವರನ್ನು 12 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು ಮತ್ತು ಇತರ ಐವರು ಸಹ ಆರೋಪಿಗಳನ್ನು ಫೆಬ್ರವರಿ 20 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಗೆಹ್ಲೋಟ್ ಫೆಬ್ರವರಿ 14 ರಂದು ಬಂಧಿಸಲಾಯಿತು, ಆದರೆ ಅವರ ತಂದೆ ವೀರೇಂದ್ರ ಸಿಂಗ್, ಸೋದರಸಂಬಂಧಿಗಳಾದ ನವೀನ್ ಮತ್ತು ಆಶಿಶ್ ಮತ್ತು ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಅವರನ್ನು ಮೂರು ದಿನಗಳ ನಂತರ ಬಂಧಿಸಲಾಯಿತು. ಹತ್ಯೆಯಲ್ಲಿ ಅವರ ಪಾತ್ರವಿದೆ ಎಂದು ಖಚಿತಪಡಿಸಿಕೊಂಡ ನಂತರ ಐವರು ಸಹ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : Nikki Yadav Murder Case: ಆರೋಪಿ ಸಾಹಿಲ್ ಗೆಹ್ಲೋಟ್ ಸೇರಿ 5 ಮಂದಿಗೆ 14 ದಿನ ನ್ಯಾಯಾಂಗ ಬಂಧನ
Nikki Yadav murder case | Delhi’s Dwarka court extends the judicial custody of accused Sahil Gahlot and 5 other accused persons for 14 days.
— ANI (@ANI) March 6, 2023
ನಿಕ್ಕಿ ಯಾದವ್ ನನ್ನನ್ನೂ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣಕ್ಕೆ ಆಕೆಯನ್ನು ಕೊಂದಿರುವುದಾಗಿ ಗೆಹ್ಲೋಟ್ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ, ಯಾದವ್ ಅವರು ಸಾಹಿಲ್ ಗೆಹ್ಲೋಟ್ 2020 ಮದುವೆಯಾಗಿದರು ಪೊಲೀಸರು ಹೇಳಿದ್ದಾರೆ. ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಯ ಪ್ರಕಾರ ಯಾದವ್, ಅವರ ಕುಟುಂಬವು ಗೆಹ್ಲೋಟ್ ಅವರ ವಿವಾಹವನ್ನು ವಿರೋಧಿಸಿದರು. ಈ ಕಾರಣಕ್ಕೆ ಈ ಮದುವೆಯನ್ನು ಮುಂದುವರಿಯಲು ಅವರನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ.
Published On - 2:32 pm, Mon, 6 March 23