ತಂದೆಯ ಮೃತದೇಹ ಕೊಂಡೊಯ್ಯುತ್ತಿದ್ದಾಗ ಮಗನೂ ಸಾವು, ಒಟ್ಟಿಗೆ ಇಬ್ಬರ ಅಂತ್ಯಕ್ರಿಯೆ

|

Updated on: Mar 24, 2025 | 7:46 AM

ತಂದೆಯ ಮೃತದೇಹ ಕೊಂಡೊಯ್ಯುತ್ತಿರುವಾಗ ಹೃದಯಾಘಾತದಿಂದ ಮಗನೂ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹುಟ್ಟು-ಸಾವು ಎರಡನ್ನೂ ಮನುಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಅಂದಾಜಿಸಲಾಗದು. ಹಾಗೆಯೇ ತಂದೆಯ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದ ಮಗ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿದೆ.

ತಂದೆಯ ಮೃತದೇಹ ಕೊಂಡೊಯ್ಯುತ್ತಿದ್ದಾಗ ಮಗನೂ ಸಾವು, ಒಟ್ಟಿಗೆ ಇಬ್ಬರ ಅಂತ್ಯಕ್ರಿಯೆ
ಹೃದಯಾಘಾತ
Image Credit source: India TV
Follow us on

ಕಾನ್ಪುರ, ಮಾರ್ಚ್​ 24: ತಂದೆಯ ಮೃತದೇಹ ಕೊಂಡೊಯ್ಯುತ್ತಿರುವಾಗ ಹೃದಯಾಘಾತದಿಂದ ಮಗನೂ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹುಟ್ಟು-ಸಾವು ಎರಡನ್ನೂ ಮನುಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಅಂದಾಜಿಸಲಾಗದು. ಹಾಗೆಯೇ ತಂದೆಯ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದ ಮಗ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಯುವಕನೊಬ್ಬ ತನ್ನ ತಂದೆಯ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಕರೆದೊಯ್ಯುತ್ತಿದ್ದ. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು. ಕಾನ್ಪುರ ನಿವಾಸಿ ಲೈಕ್ ಅಹ್ಮದ್ ಮಾರ್ಚ್ 20 ರಂದು ಆರೋಗ್ಯ ಹದಗೆಟ್ಟ ಕಾರಣ ಖಾಸಗಿ ನರ್ಸಿಂಗ್ ಹೋಂನಲ್ಲಿ ನಿಧನರಾದರು.

ತಂದೆ ಬಗ್ಗೆ ಅತೀಕ್​ಗೆ ತುಂಬಾ ಪ್ರೀತಿ, ತಂದೆ ಸತ್ತಿದ್ದಾರೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ದು ತನ್ನ ತಂದೆ ಬದುಕಿದ್ದಾರಲ್ಲವೇ ಆ ವೈದ್ಯರು ಸರಿಯಾಗಿ ಹೇಳಿಲ್ಲ ಎಂದು ವೈದ್ಯರ ಬಳಿ ತಂದೆಯ ಪ್ರಾಣಕ್ಕಾಗಿ ಅಂಗಲಾಚಿದ್ದ, ಆದರೆ ಸತ್ತವರು ಬದುಕಿ ಬರಲು ಸಾಧ್ಯವೇ, ಹೀಗಾಗಿ ಆ ವೈದ್ಯರೂ ಕೂಡ ತಂದೆ ಮೃತಪಟ್ಟಿದ್ದಾರೆಂದು ಹೇಳಿದ್ದರು.

ಮತ್ತಷ್ಟು ಓದಿ: ಕೇರಳ ಮೂಲದ ಕುಖ್ಯಾತ ಕಳ್ಳ ಬೆಂಗಳೂರಲ್ಲಿ ನಿಗೂಢ ಸಾವು: ಸುಳಿವು ನೀಡಿತು ಟ್ಯಾಟೂ

ಕುಟುಂಬವು ಲೈಕ್ ಅಹ್ಮದ್ ಅವರ ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದಾಗ, ಅತಿಕ್ ತನ್ನ ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿದನು. ದುಃಖದಿಂದ ಕಂಗೆಟ್ಟ ಅತಿಕ್ ಹಠಾತ್ ಹೃದಯಾಘಾತಕ್ಕೆ ಒಳಗಾದರು ಮತ್ತು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಅತೀಕ್ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ವೈದ್ಯರು ಅವರ ಸಾವನ್ನು ದೃಢಪಡಿಸಿದರು. ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು, ಕುಟುಂಬದವರು ಹಾಗೂ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.

ಲೈಕ್ ಅಹ್ಮದ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯವನಾದ ಅತೀಕ್, ಯಾವಾಗಲೂ ತನ್ನ ತಂದೆಗೆ ಹತ್ತಿರವಾಗಿದ್ದ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ತಂದೆ ಮತ್ತು ಮಗನ ಶವಗಳನ್ನು ಸ್ಥಳೀಯ ಸ್ಮಶಾನದಲ್ಲಿ ಹೂಳಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ