ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಆಡ್ತಿದ್ದ ಶಿಕ್ಷಕ ಅಮಾನತು

|

Updated on: Jul 11, 2024 | 12:30 PM

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಕೆಲಸದ ಸಮಯದಲ್ಲಿ ಕ್ಯಾಂಡಿಕ್ರಷ್ ಆಡುತ್ತಿದ್ದ ಶಿಕ್ಷಕನನ್ನು ಶಿಕ್ಷಣ ಇಲಾಖೆಯು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಆಡ್ತಿದ್ದ ಶಿಕ್ಷಕ ಅಮಾನತು
ಶಿಕ್ಷಕ
Follow us on

ಮಕ್ಕಳಿಗೆ ಪಾಠ ಮಾಡುವ ಸಮಯದಲ್ಲಿ ಮೊಬೈಲ್​ ಹಿಡಿದು ಕ್ಯಾಂಡಿಕ್ರಶ್​ ಆಟವಾಡುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕರ್ತವ್ಯದ ಸಮಯದಲ್ಲಿ ಮೊಬೈಲ್​ನಲ್ಲಿ ಆಟವಾಡುತ್ತಾ ಇದ್ದಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಪರಿಶೀಲನೆಗಾಗಿ ಶಾಲೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳ ಪುಸ್ತಕ ತೆಗೆದು ನೋಡಿದಾಗ ಹೆಚ್ಚಿನ ತಪ್ಪುಗಳು ಎದ್ದು ಕಾಣಿಸಿದ್ದವು ಈ ಕುರಿತು ಮಕ್ಕಳನ್ನು ವಿಚಾರಿಸಿದಾಗ ಇದು ತಿಳಿದಿದೆ.

ಅವರು ಕರ್ತವ್ಯದ ಸಮಯದಲ್ಲಿ ಗಂಟೆಗಳ ಕಾಲ ಕ್ಯಾಂಡಿಕ್ರಷ್ ಆಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಹೋಂವರ್ಕ್​ ಬಗ್ಗೆ ಗಮನಕೊಡುತ್ತಿರಲಿಲ್ಲ, ಶಿಕ್ಷಣ ಗುಣಮಟ್ಟವನ್ನು ಕಾಪಾಡುವಲ್ಲಿ ಸೋತಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಲಾ ಸಮಯದಲ್ಲಿ ಮೊಬೈಲ್ ಫೋನ್​ಗಳನ್ನು ಬಳಸುವುದು ಸೂಕ್ತವಲ್ಲ, ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಆರು ವಿದ್ಯಾರ್ಥಿಗಳ ಹೋಂವರ್ಕ್​ನಲ್ಲಿ ಆರು ಪುಟಗಳನ್ನು ಪರಿಶೀಲಿಸಿದರು ಮತ್ತು 95 ತಪ್ಪುಗಳನ್ನು ಗುರುತಿಸಿದರು.

ಮತ್ತಷ್ಟು ಓದಿ: ಯಾದಗಿರಿ: ಎಸ್‌ಎಸ್‌ಎಲ್‌ಸಿ‌ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಅಮಾನತು

ಒಂಬತ್ತು ಮೊದಲ ಪುಟದಲ್ಲಿಯೇ ಇತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಸಹಾಯಕ ಶಿಕ್ಷಕಿ ಪ್ರಿಯಾಂ ಗೋಯಲ್ ಅವರ ಫೋನ್ ಪರಿಶೀಲಿಸಿದರು. ಶಿಕ್ಷಕರು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಪ್ರತಿದಿನ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಉಪಯೋಗಿಸುತ್ತಾರೆ ಎಂಬುದು ತಿಳಿದುಬಂದಿದೆ.

ಶಾಲೆಯ ಐದೂವರೆ ಗಂಟೆಗಳಲ್ಲಿ, ಪ್ರಿಯಮ್ ಗೋಯಲ್ ಕ್ಯಾಂಡಿ ಕ್ರಷ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆಯುತ್ತಾರೆ, 26 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಾರೆ ಮತ್ತು ಸುಮಾರು 30 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ನಂತರ ರಾಜ್ಯ ಶಿಕ್ಷಣ ಇಲಾಖೆಗೆ ವಿಷಯದ ಬಗ್ಗೆ ತಿಳಿಸಿದ್ದು, ನಂತರ ಅವರು ಅದನ್ನು ಅರಿತುಕೊಂಡು ಸಹಾಯಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ