ಕೋಳಿಗಳನ್ನು ನುಂಗಿದ ಹೆಬ್ಬಾವು; 2 ವರ್ಷಗಳ ನಂತರ ರೈತನಿಗೆ ಪರಿಹಾರ ನೀಡಿದ ಕೇರಳ ಸರ್ಕಾರ

ಮನೆಯಲ್ಲಿದ್ದ ಕೋಳಿ ಗೂಡಿನಲ್ಲಿ ಪ್ರತಿದಿನ ಕೋಳಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದುದ್ದನ್ನು ಗಮನಿಸಿದ ಜಾರ್ಜ್ ಅವರು ಚಿಂತೆಗೊಳಲಾಗಿದ್ದರು. ಆರಂಭದಲ್ಲಿ, ಯಾರೋ ಕೋಳಿಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ, ಆದರೆ ಜೂನ್ 2022 ರಲ್ಲಿ ಒಂದು ದಿನ, ಹೆಬ್ಬಾವು ಕೋಳಿ ನುಂಗುತ್ತಿರುವುದನ್ನು ಕಂಡುಬಂದಿದೆ.

ಕೋಳಿಗಳನ್ನು ನುಂಗಿದ ಹೆಬ್ಬಾವು; 2 ವರ್ಷಗಳ ನಂತರ ರೈತನಿಗೆ ಪರಿಹಾರ ನೀಡಿದ ಕೇರಳ ಸರ್ಕಾರ
Follow us
|

Updated on:Jul 11, 2024 | 12:39 PM

ಕೇರಳದ ಕಾಸರಗೋಡಿನ ಸಣ್ಣ ಕೋಳಿ ಸಾಕಾಣಿಕೆದಾರ ಕೆ.ವಿ.ಜಾರ್ಜ್ ಅವರು ಸಾಕುತ್ತಿದ್ದ ಕೆಲವು ಕೋಳಿಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಛೇರಿಗಳ ಸುತ್ತಾಟ ನಡೆಸಿದರೂ ಏನು ಪರಿಹಾರ ಸಿಗದೇ ನೊಂದಿದ್ದ ಕೆ.ವಿ.ಜಾರ್ಜ್ ಅವರಿಗೆ ಇದೀಗ 2 ವರ್ಷಗಳ ಕೇರಳ ಸರ್ಕಾರ ಪರಿಹಾರ ನೀಡಿದೆ.

ತಮ್ಮ ಮನೆಯಲ್ಲಿದ್ದ ಕೋಳಿ ಗೂಡಿನಲ್ಲಿ ಪ್ರತಿದಿನ ಸಂಖ್ಯೆ ಕಡಿಮೆಯಾಗುತ್ತಿದ್ದುದ್ದನ್ನು ಗಮನಿಸಿದ ಜಾರ್ಜ್ ಅವರು ಚಿಂತೆಗೊಳಲಾಗಿದ್ದರು. ಆರಂಭದಲ್ಲಿ, ಯಾರೋ ಕೋಳಿಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ, ಆದರೆ ಜೂನ್ 2022 ರಲ್ಲಿ ಒಂದು ದಿನ, ಹೆಬ್ಬಾವು ಕೋಳಿ ನುಂಗುತ್ತಿರುವುದನ್ನು ಕಂಡಿದ್ದಾರೆ.

ಭಾರೀ ಗಾತ್ರದ ಹೆಬ್ಬಾವನ್ನು ಕಂಡ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಬಂದು ಅದನ್ನು ಕೊಂಡೊಯ್ದಿದ್ದಾರೆ. ನಂತರ, ಅಪರೂಪದ ಸರೀಸೃಪವು ‘ರಾಜ್ಯ-ರಕ್ಷಿತ’ ಆಗಿರುವುದರಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅರಣ್ಯ ಅಧಿಕಾರಿಗಳು ಜಾರ್ಜ್ ಅವರಿಗೆ ತಿಳಿಸಿದ್ದರು. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಶೆಡ್ಯೂಲ್ I ರ ಅಡಿಯಲ್ಲಿ ಹೆಬ್ಬಾವಿಗೆ ಅತ್ಯಂತ ರಕ್ಷಣೆಯ ಸ್ಥಾನಮಾನವನ್ನು ನೀಡಲಾಗಿದೆ.

ಇದನ್ನೂ ಓದಿ: ಪ್ರೀತಿಗೆ ವಿರೋಧ; ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

ಆದರೆ ಪರಿಹಾರವನ್ನು ಪಡೆಯಲು ಅವರು ಮಾಡಿದ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲಿಲ್ಲ. ಒಂದು ವರ್ಷದ ನಂತರ ರಾಜ್ಯ ಸಚಿವರೊಬ್ಬರು ನಡೆಸಿದ ‘ಜನತಾ ಅದಾಲತ್’ ನಲ್ಲಿ ದಿಗ್ಭ್ರಮೆಗೊಂಡ ಜಾರ್ಜ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಹಾವು ಕೇರಳ ಸರಕಾರದ್ದಾಗಿರಬಹುದು, ಆದರೆ ಕಳೆದುಕೊಂಡ ಕೋಳಿಗಳು ತಮ್ಮದಾಗಿದ್ದು, ಪರಿಹಾರ ನೀಡಬೇಕು ಎಂದು ಜಾರ್ಜ್ ಸಚಿವರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು.

ಜಾರ್ಜ್‌ಗೆ ಸಚಿವರು ಸಮಾಧಾನ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಅಂತಿಮವಾಗಿ, ಅವರು ಕೇರಳ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ಆದರೆ, ಆಯೋಗದ ಮೊರೆ ಹೋಗುವ ಮುನ್ನವೇ ಪರಿಹಾರದ ಕುರಿತು ಅರಣ್ಯ ಇಲಾಖೆಯಿಂದ ಕರೆ ಬಂದಿದೆ. ರಾಜ್ಯ ಸರ್ಕಾರದಿಂದ ಹೆಬ್ಬಾವು ಸೇವಿಸಿದ ಕೋಳಿಗಳಿಗೆ 2,000 ರೂ. ಪರಿಹಾರ ಸಿಕ್ಕಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Thu, 11 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್