AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಪುರುಷರಿಗೆ ಮೋಸ ಮಾಡಿದ್ದ ಮಹಿಳೆ ಅಂತೂ ಸಿಕ್ಕಿಬಿದ್ಲು

ಮದುವೆಯಾಗುವುದಾಗಿ ಪುರುಷರನ್ನು ನಂಬಿಸಿ ಮೋಸ ಮಾಡಿ ಹಣ, ಬಂಗಾರ ದೋಚಿ ಪರಾರಿಯಾಗುತ್ತಿದ್ದ ಮಹಿಳೆ ಅಂತೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಮದುವೆಯಾಗುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಪುರುಷರಿಗೆ ಮೋಸ ಮಾಡಿದ್ದ ಮಹಿಳೆ ಅಂತೂ ಸಿಕ್ಕಿಬಿದ್ಲು
ಮಹಿಳೆ-ಸಾಂದರ್ಭಿಕ ಚಿತ್ರImage Credit source: Shutterstock
ನಯನಾ ರಾಜೀವ್
|

Updated on: Jul 11, 2024 | 11:38 AM

Share

ಮದುವೆಯಾಗುವುದಾಗಿ ನಂಬಿಸಿ ಐವತ್ತಕ್ಕೂ ಹೆಚ್ಚು ಪುರುಷರಿಗೆ ಮಹಿಳೆಯೊಬ್ಬರು ಮೋಸ ಮಾಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್​ನಲ್ಲಿ ನಡೆದಿದೆ. ಪುರುಷರನ್ನು ಮದುವೆಯಾಗಿ ಅಥವಾ ವಂಚಿಸಿ ಮನೆಯಿಂದ ಲಕ್ಷಗಟ್ಟಲೆ ನಗದು, ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗುತ್ತಿದ್ದರು.

ಈ ಸಂಬಂಧ ತುರುಪುರದ ತಾರಾಪುರಂನಲ್ಲಿ ನೆಲೆಸಿರುವ ಮಹೇಶ್ ಅರವಿಂದ್ ಎಂಬುವವರು ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಬಳಿಕ ಪೊಲೀಸರು ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಹಿಳೆ ವಯಸ್ಸು 30 ವರ್ಷ, ಮೊಬೈಲ್ ಆಪ್ ಮೂಲಕ ಈರೋಡ್ ಜಿಲ್ಲೆಯ ಕೊಡುಮುಡಿ ನಿವಾಸಿ ಸಂಧ್ಯಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಆರಂಭದಲ್ಲಿ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು, ಆದರೆ ಈ ಸಂಭಾಷಣೆ ಪ್ರೀತಿಗೆ ತಿರುಗಿ ಇಬ್ಬರೂ ಪಳನಿ ಬಳಿಯ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ.

ಮಹೇಶ್ ಅರವಿಂದ್ ಹೇಳುವಂತೆ ಸಂಧ್ಯಾಳನ್ನು ಮನೆಗೆ ಕರೆತಂದರು ಆದರೆ ಆಕೆಯ ನಡೆ ಆತನಿಗೆ ಅನುಮಾನ ಮೂಡಿಸಿತ್ತು. ಇದಾದ ಬಳಿಕ ಆಕೆಯ ಆಧಾರ್ ಕಾರ್ಡ್ ನೋಡಿದಾಗ ಸಂಧ್ಯಾ ಹೆಸರಿನ ಬದಲು ಚೆನ್ನೈ ಮೂಲದ ಮತ್ತೊಬ್ಬ ಮಹಿಳೆಯ ಹೆಸರು ಬರೆಯಲಾಗಿತ್ತು. ವಯಸ್ಸು ಕೂಡ ಹೆಚ್ಚಿತ್ತು. ಈ ವಿಚಾರ ಪ್ರಶ್ನಿಸಿದಾಗ ಆಕೆ ಮಹೇಶ್​ ಕುಟುಂಬದವರಿಗೆ ಬೆದರಿಕೆ ಹಾಕಿದ್ದಳು.

ಮತ್ತಷ್ಟು ಓದಿ: ಮದ್ವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಶಿವಮೊಗ್ಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಕೂಡಲೇ ಮಹೇಶ್ ಅರವಿಂದ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬರುವಷ್ಟರೊಳಗೆ ಸಂಧ್ಯಾ ಅಲ್ಲಿಂದ ಓಡಿ ಹೋಗಿದ್ದಳು. ಆರೋಪಿ ಮಹಿಳೆ ಸಂಧ್ಯಾ 10 ವರ್ಷಗಳ ಹಿಂದೆ ಚೆನ್ನೈನಲ್ಲಿ ನೆಲೆಸಿರುವ ಯುವಕನೊಂದಿಗೆ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ಅವಳಿಗೆ ಒಂದು ಮಗುವಿದೆ.

ಆರೋಪಿ ಸಂಧ್ಯಾ ವಯಸ್ಸಾದ ಅವಿವಾಹಿತ ಪುರುಷರನ್ನು ಹುಡುಕಿ ಅವರನ್ನು ಮದುವೆಯಾಗಿ ಅಥವಾ ನಂಬಿಸಿ ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ರೀತಿ 50 ಪುರುಷರಿಗೆ ಮೋಸ ಮಾಡಿದ್ದಾಳೆ, ಸಾಕಷ್ಟು ಪ್ರಯತ್ನದ ಬಳಿಕ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಗತ್ಯ ವಿಚಾರಣೆ ಬಳಿಕ ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ