ವಿವಾಹೇತರ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಥಳಿಸಿ ಫಿನಾಯಿಲ್ ಕುಡಿಸಿದ ಪತಿ

|

Updated on: Aug 10, 2024 | 5:26 PM

ಪತಿಯ ವಿವಾಹೇತರ ಸಂಬಂಧ ಪ್ರಶ್ನಿಸಿದ್ದಕ್ಕೆ ಆತ ಪತ್ನಿಗೆ ಫಿನಾಯಿಲ್ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ತಾಯಿಯನ್ನು ಥಳಿಸುತ್ತಿರುವುದನ್ನು ಕಂಡು ಮಕ್ಕಳು ಓಡಿಬಂದು ಆಕೆಯನ್ನು ರಕ್ಷಿಸಲು ಮುಂದಾದರೂ ಕರುಣೆ ತೋರದೆ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ವಿವಾಹೇತರ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಥಳಿಸಿ ಫಿನಾಯಿಲ್ ಕುಡಿಸಿದ ಪತಿ
Follow us on

ವಿವಾಹೇತರ ಸಂಬಂಧಗಳಿಂದಾಗಿ ಕೌಟುಂಬಿಕ ಹಿಂಸಾಚಾರದ ವರದಿಗಳು ಹೆಚ್ಚಾಗಿವೆ. ಕೆಲವಡೆ ಪ್ರಾಣ ಕುತ್ತು ತಂದುಕೊಳ್ಳುವ ಘಟನೆಗಳೂ ಇವೆ. ವಿವಾಹಿತ ವ್ಯಕ್ತಿಯೊಬ್ಬ ಬೇರೊಬ್ಬಳೊಂದಿಗೆ ವಿವಾಹೇತರ ಸಂಬಂಧವಿಟ್ಟುಕೊಂಡಿದ್ದ ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನು ಥಳಿಸಿ ಆಕೆಗೆ ಫಿನಾಯಿಲ್ ಕುಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತಾಯಿಯನ್ನು ಥಳಿಸುತ್ತಿರುವುದನ್ನು ಕಂಡು ಮಕ್ಕಳು ಓಡಿಬಂದು ಆಕೆಯನ್ನು ರಕ್ಷಿಸಲು ಮುಂದಾದರೂ ಕರುಣೆ ತೋರದೆ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಟಿವಿ9 ಭಾರತ್​ವರ್ಷ್​ ವರದಿ ಪ್ರಕಾರ, ಟಾಲ್ಕಟೋರಾ ಪ್ರದೇಶದಲ್ಲಿ ಈ ಘಟನೆ ನಡೆಸಿದೆ, ಸಂತೋಷ್ ಯಾದವ್ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು, ಸಂತೋಷ್​ ಬೇರೊಬ್ಬ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿದ್ದ. ಈ ವಿಚಾರವಾಗಿ ಮಹಿಳೆ ಪ್ರತಿಭಟಿಸಿದ್ದಾಳೆ.

ಪತಿ ಸಂತೋಷ್ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ. ಇದಾದ ಮೇಲೆ ಸಂತೋಷ್ ಕೂಡ ಪೊಲೀಸರ ಮುಂದೆ ಪತ್ನಿ ಬಳಿ ಕ್ಷಮೆ ಕೇಳಿದ್ದ. ಕೆಲವು ದಿನಗಳ ಹಿಂದೆ ಸಂತೋಷ್​ ಮತ್ತೆ ಅದೇ ಮಹಿಳೆಯನ್ನು ಭೇಟಿಯಾಗಲು ಪ್ರಾರಂಭಿಸಿದರು.

ಮತ್ತಷ್ಟು ಓದಿ: Video: ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಪತಿಗೆ ಹಿಗ್ಗಾಮುಗ್ಗಾ ಥಳಿತ

ಗೆಳತಿಯ ಜತೆ ಹೋಟೆಲ್​, ಊರೂರು ಸುತ್ತಿದ್ದಾನೆ, ಇದನ್ನು ವಿರೋಧಿಸಿ ಮತ್ತೆ ಪತ್ನಿ ಪ್ರತಿಭಟಿಸಿದ್ದಾಳೆ, ಇದಕ್ಕೆ ಕೋಪಗೊಂಡ ವ್ಯಕ್ತಿ ಪತ್ನಿಗೆ ಫಿನಾಯಿಲ್ ಕುಡಿಸಿದ್ದಾನೆ.

ತಕ್ಷಣ ಆಕೆಯ ಪೋಷಕರು ಮನೆಗೆ ಆಗಮಿಸಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಸಂತ್ರಸ್ತೆಯ ತಾಯಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 5:24 pm, Sat, 10 August 24