21 ಸಚಿವರನ್ನು ಉಳಿಸಿ 22 ಸಚಿವರನ್ನು ಕೈ ಬಿಟ್ಟ ಯೋಗಿ ಆದಿತ್ಯನಾಥ; ಸಚಿವ ಸಂಪುಟದಲ್ಲಿ 31 ಹೊಸಬರು, ಐವರು ಮಹಿಳೆಯರು

| Updated By: ರಶ್ಮಿ ಕಲ್ಲಕಟ್ಟ

Updated on: Mar 25, 2022 | 10:44 PM

Yogi cabinet 2.0 ಇಬ್ಬರು ಉಪ ಮುಖ್ಯಮಂತ್ರಿಗಳು, 16 ಇತರ ಕ್ಯಾಬಿನೆಟ್ ಸಚಿವರು, 14 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 20 ರಾಜ್ಯ ಸಚಿವರು ಸೇರಿದಂತೆ ಯೋಗಿ ಆದಿತ್ಯನಾಥ ಮತ್ತು ಅವರ 52 ಸದಸ್ಯರ ತಂಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು.

21 ಸಚಿವರನ್ನು ಉಳಿಸಿ 22 ಸಚಿವರನ್ನು ಕೈ ಬಿಟ್ಟ ಯೋಗಿ ಆದಿತ್ಯನಾಥ; ಸಚಿವ ಸಂಪುಟದಲ್ಲಿ 31 ಹೊಸಬರು, ಐವರು ಮಹಿಳೆಯರು
ನರೇಂದ್ರ ಮೋದಿ-ಯೋಗಿ ಆದಿತ್ಯನಾಥ
Follow us on

ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿಯ (BJP) ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ (Yogi Adityanath) ಶುಕ್ರವಾರ ಉತ್ತರ ಪ್ರದೇಶದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಯೋಗಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಪಾಠಕ್ ಅವರಿಗೆ ಬಡ್ತಿ ನೀಡಲಾಗಿದ್ದು ದಿನೇಶ್ ಶರ್ಮಾ ಅವರನ್ನು ಇಬ್ಬರು ಉಪ ಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ನೇಮಿಸಲಾಯಿತು. ಉತ್ತರ ಪ್ರದೇಶಲ್ಲಿ ಬಿಜೆಪಿಯ ಒಬಿಸಿ ಮುಖ ಮೌರ್ಯ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಗೋರಖನಾಥ ಮಠದ ಪ್ರಧಾನ ಅರ್ಚಕರೂ ಆಗಿರುವ ಆದಿತ್ಯನಾಥ ಅವರು ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಸತತ ಎರಡನೇ ಅವಧಿಗೆ ಗೆದ್ದಿರುವ ಮುಖ್ಯಮಂತ್ರಿ ಯೋಗಿ. ಇಬ್ಬರು ಉಪ ಮುಖ್ಯಮಂತ್ರಿಗಳು, 16 ಇತರ ಕ್ಯಾಬಿನೆಟ್ ಸಚಿವರು, 14 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 20 ರಾಜ್ಯ ಸಚಿವರು ಸೇರಿದಂತೆ ಯೋಗಿ ಆದಿತ್ಯನಾಥ ಮತ್ತು ಅವರ 52 ಸದಸ್ಯರ ತಂಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು. ಹಿಂದಿನ ಆದಿತ್ಯನಾಥ ಸರ್ಕಾರದ 21 ಸಚಿವರನ್ನು ಉಳಿಸಿಕೊಂಡಿದ್ದು, 22 ಸಚಿವರನ್ನು ಕೈಬಿಡಲಾಗಿದೆ. ನೂತನ ಸಂಪುಟದಲ್ಲಿ 31 ಮಂದಿ ಹೊಸ ಮುಖಗಳಿದ್ದು, ಐವರು ಸಚಿವೆಯರೂ ಇದ್ದಾರೆ.

ಯೋಗಿ ಆದಿತ್ಯನಾಥ 2.0 ಸರ್ಕಾರದಿಂದ ಕೈಬಿಟ್ಟಿರುವವರು
ಮಹೇಂದ್ರ ಸಿಂಗ್, ಹಿಂದಿನ ಸರ್ಕಾರದಲ್ಲಿ ಜಲಶಕ್ತಿ ಸಚಿವರಾಗಿದ್ದ ಶ್ರೀಕಾಂತ್ ಶರ್ಮಾ, ಮಥುರಾದಿಂದ ರಾಜ್ಯದ ಇಂಧನ ಸಚಿವರಾಗಿದ್ದ ಶ್ರೀಕಾಂತ್ ಶರ್ಮಾ, ಹಾಲಿ ನಗರಾಭಿವೃದ್ಧಿ ಸಚಿವ ಅಶುತೋಷ್ ಟಂಡನ್, ಎಂಎಸ್ಎಂಇ ಸಚಿವರಾಗಿದ್ದ ಸಿದ್ಧಾರ್ಥ್ ನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್. ಈಗ ಅವರಿಗೆ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗುವುದು. 18ನೇ ವಿಧಾನಸಭೆಯ ಸ್ಪೀಕರ್ ಆಗಿ ಮಾಜಿ ಕೈಗಾರಿಕಾ ಸಚಿವ ಸತೀಶ್ ಮಹಾನಾ ಅಥವಾ ಮಾಜಿ ಅಬಕಾರಿ ಸಚಿವ ರಾಮ್ ನರೇಶ್ ಅಗ್ನಿಹೋತ್ರಿ ಅವರನ್ನು ನೇಮಿಸಬಹುದು ಎಂಬ ಸುದ್ದಿ ಹರಡಿದ್ದು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ.

ಹೊಸ ಸರ್ಕಾರದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪಿಎಸ್ ರಾಥೋಡ್ ಮತ್ತು ರಾಜ್ಯ ಉಪಾಧ್ಯಕ್ಷ ಅರವಿಂದ್ ಕುಮಾರ್ ಶರ್ಮಾ ಕೂಡ ಇದ್ದಾರೆ. ಮೂವರಿಗೂ ಸಂಪುಟ ಸಚಿವ ಸ್ಥಾನ ನೀಡಲಾಗಿದೆ. ಮತ್ತೊಬ್ಬ ರಾಜ್ಯ ಉಪಾಧ್ಯಕ್ಷ ದಯಾ ಶಂಕರ್ ಸಿಂಗ್ ಅವರನ್ನು ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಮಾಡಲಾಗಿದೆ. ಬಿಜೆಪಿಯು ಮೊದಲ ಆದಿತ್ಯನಾಥ ಸರ್ಕಾರದಲ್ಲಿ ತನ್ನ ಏಕೈಕ ಮುಸ್ಲಿಂ ಮುಖವಾದ ಮೊಹ್ಸಿನ್ ರಝಾ ಅವರ ಸ್ಥಾನಕ್ಕೆ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಡ್ಯಾನಿಶ್ ಆಜಾದ್ ಅನ್ಸಾರಿ ಅವರನ್ನು ಕರೆತರಲಾಗಿದೆ.

ಆಜಾದ್ ಅವರನ್ನು ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಅವರು ರಾಂಪುರದ ಬಿಸಲ್ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿರುವ ಸಿಖ್ ರಾಜ್ಯ ಸಚಿವ ಬಲದೇವ್ ಔಲಾಖ್ ಅವರೊಂದಿಗೆ ಈಗ ಆದಿತ್ಯನಾಥ ಸರ್ಕಾರದ ಅಲ್ಪಸಂಖ್ಯಾತ ಮುಖಗಳಾಗಿರುತ್ತಾರೆ. ಯೋಗಿ ಸರ್ಕಾರ 2.0 ಗರಿಷ್ಠ 60 ಸಚಿವರನ್ನು ಹೊಂದಬಹುದು. ಬಿಜೆಪಿ ಶಾಸಕಾಂಗ ಪಕ್ಷದ ಅತ್ಯಂತ ಹಿರಿಯ ಸದಸ್ಯ ಸುರೇಶ್ ಖನ್ನಾ ಅವರನ್ನು ಮತ್ತೆ ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಅವರು ತಮ್ಮ ಒಂಬತ್ತನೇ ವಿಧಾನಸಭಾ ಚುನಾವಣೆಯಲ್ಲಿ ಷಹಜಹಾನ್‌ಪುರದಿಂದ ಗೆದ್ದಿದ್ದಾರೆ.

ಜಾತವ್ ದಲಿತರಾಗಿರುವ ಉತ್ತರಾಖಂಡದ ಮಾಜಿ ಗವರ್ನರ್ ಬೇಬಿ ರಾಣಿ ಮೌರ್ಯ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಗಿದೆ. ಅವರು ಆಗ್ರಾ ಗ್ರಾಮಾಂತರ ಕ್ಷೇತ್ರದಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು.

ಬಿಜೆಪಿಯ ಮಿತ್ರಪಕ್ಷಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಎಂಎಲ್‌ಸಿ ಮತ್ತು ಕೇಂದ್ರ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರ ಪತಿ, ಅಪ್ನಾ ದಳ (ಸೋನೆಲಾಲ್) ನಾಯಕ ಆಶಿಶ್ ಪಟೇಲ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಗಿದೆ. ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್, ಎಂಎಲ್‌ಸಿ ಕೂಡ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: Yogi Adityanath Oath Taking ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ ; ಉಪ ಮುಖ್ಯಮಂತ್ರಿಯಾಗಿ ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಪ್ರಮಾಣ ವಚನ

Published On - 10:42 pm, Fri, 25 March 22