Uniform Civil Code: ಜಾತಿ, ಧರ್ಮ, ಪ್ರಾಂತ್ಯ ಬೇಧವಿಲ್ಲ, ಎಲ್ಲರಿಗೂ ಒಂದೇ ಕಾನೂನು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ

|

Updated on: Feb 06, 2024 | 11:51 AM

ಏಕರೂಪ ನಾಗರಿಕ ಸಂಹಿತೆ(Uniform Civil Code) ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡನೆ ಮಾಡಿದೆ. ಈವರೆಗೂ ಬೇರೆ ಬೇರೆ ಧರ್ಮಗಳು ಆಯಾ ವೈಯಕ್ತಿಕ ಕಾನೂನು ಕ್ರಮಗಳನ್ನು ಅನುಸರಿಸುತ್ತಿದ್ದರು, ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇನ್ನು ಮುಂದೆ ಎಲ್ಲಾ ದರ್ಮಗಳಿಗೆ ಒಂದೇ ಕಾನೂನು ಅನ್ವಯವಾಗಲಿದೆ.

Uniform Civil Code: ಜಾತಿ, ಧರ್ಮ, ಪ್ರಾಂತ್ಯ ಬೇಧವಿಲ್ಲ, ಎಲ್ಲರಿಗೂ ಒಂದೇ ಕಾನೂನು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ
ಪುಷ್ಕರ್ ಧಾಮಿ
Follow us on

ಏಕರೂಪ ನಾಗರಿಕ ಸಂಹಿತೆ(Uniform Civil Code) ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡನೆ ಮಾಡಿದೆ. ಈ ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವುದೇ ಜಾತಿ, ಧರ್ಮ, ಪ್ರಾಂತ್ಯವೆಂಬ ಬೇಧವಿರುವುದಿಲ್ಲ, ದೇಶದ ಸರ್ವರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಇದರ ಅಡಿಯಲ್ಲಿ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.

ಈ ಮಸೂದೆಯಿಂದ ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ವಿವಿಧ ಧರ್ಮಗಳಿಗೆ ಆ ಧರ್ಮದ ವೈಯಕ್ತಿಕ ಕಾನೂನುಗಳಿದ್ದು, ಅವೆಲ್ಲವೂ ಏಕರೂಪ ಕಾಯಿದೆ ಅಡಿಯಲ್ಲಿಯೇ ಇನ್ನುಮುಂದೆ ಬರಲಿವೆ. ಕಳೆದ ಭಾನುವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ನಡೆಸಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಹಾಗೆಯೇ ಸಚಿವ ಸಂಪುಟ ಮಸೂದೆ ಮಂಡನೆಗೆ ಒಪ್ಪಿಗೆಯನ್ನೂ ನೀಡಿತ್ತು.

ಇದೀಗ ಬಿಜೆಪಿ ಆಡಳಿವಿರುವ ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು ಅಳವಿಡಿಸಿಕೊಂಡ ಮೊದಲ ರಾಜ್ಯವಾಗಿದೆ.
ಈ ಮಸೂದೆ ಪ್ರಕಾರ ಮಗ ಮತ್ತು ಮಗಳಿಗೆ ಸಮಾನ ಆಸ್ತಿ ಹಕ್ಕು, ಕಾನೂನು ಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವಿನ ವ್ಯತ್ಯಾಸವನ್ನು ತೊಡೆದುಹಾಕುವುದು, ದತ್ತು ಪಡೆದ ಮತ್ತು ಜೈವಿಕವಾಗಿ ಜನಿಸಿದ ಮಕ್ಕಳನ್ನು ಸೇರಿಸುವುದು ಮತ್ತು ಸಾವಿನ ನಂತರ ಸಮಾನ ಆಸ್ತಿ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನುಹೊಂದಲಾಗಿದೆ.

ಮತ್ತಷ್ಟು ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ ಎಂದರೇನು? ಯಾರಿಗೆಲ್ಲಾ ಅನ್ವಯಿಸುತ್ತೆ ಇಲ್ಲಿದೆ ಮಾಹಿತಿ

ಈವರೆಗೂ ಬೇರೆ ಬೇರೆ ಧರ್ಮಗಳು ಆಯಾ ವೈಯಕ್ತಿಕ ಕಾನೂನು ಕ್ರಮಗಳನ್ನು ಅನುಸರಿಸುತ್ತಿದ್ದರು, ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇನ್ನು ಮುಂದೆ ಎಲ್ಲಾ ದರ್ಮಗಳಿಗೆ ಒಂದೇ ಕಾನೂನು ಅನ್ವಯವಾಗಲಿದೆ.

ಈ ಹಿಂದೆ ಕರಡಿನಲ್ಲಿ ಏನಿತ್ತು
ಸಮಾಜದ ಬೇರೆ ಬೇರೆ ವರ್ಗಗಳು, ಧರ್ಮಗಳ ಜನರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿ ಈ ಕರಡನ್ನು ಸಿದ್ಧಪಡಿಸಲಾಗಿದೆ. ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಸಮಾನ ಕಾನೂನನ್ನು ರೂಪಿಸುವ ಕುರಿತು ಕರಡಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Tue, 6 February 24