Uttarakhand Glacier Burst: ಉತ್ತರಾಖಂಡದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಈವರೆಗೆ ಹೊರತೆಗೆದದ್ದು 36 ಮೃತದೇಹಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 12, 2021 | 1:39 PM

Uttarakhand: ಚಮೋಲಿ ಜಿಲ್ಲೆಯಲ್ಲಿನ ಸುರಂಗ ಮಾರ್ಗದಲ್ಲಿ ಹೂತುಹೋಗಿರುವ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.

Uttarakhand Glacier Burst: ಉತ್ತರಾಖಂಡದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಈವರೆಗೆ ಹೊರತೆಗೆದದ್ದು 36 ಮೃತದೇಹಗಳು
ಉತ್ತರಾಖಂಡದ ಚಮೋಲಿ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ
Follow us on

ನವದೆಹಲಿ: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಹಾನಿಗೊಳಗಾಗಿರುವ ತಪೋವನ್ ಸುರಂಗ ಮಾರ್ಗದಲ್ಲಿ 6ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿಯವರೆಗೆ 36 ಮೃತದೇಹಗಳನ್ನು ಹೊರತೆಗೆದಿದ್ದು, 200 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ತಪೋವನ್​ನಲ್ಲಿರುವ ಎನ್​ಟಿಪಿಸಿಯ ಜಲ ವಿದ್ಯುತ್ ಯೋಜನೆ ಬಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರ ಮತ್ತು ಇತರ ಸಂಸ್ಥೆಗಳ ಕಾರ್ಯದ ಬಗ್ಗೆ  ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆ ನೀಡಿದೆ.

ಜಲವಿದ್ಯುತ್ ಯೋಜನೆ ತಾತ್ಕಾಲಿಕ ತಡೆ ನಿರ್ಮಿಸಿ ನೀರಿನ ಹರಿವು ನಿಯಂತ್ರಿಸುವ ಕಾರ್ಯಗಳ ಬಗ್ಗೆ ಭಲ್ಲಾ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಪರಿಸ್ಥಿತಿ ವಿಶ್ಲೇಷಣೆ ಮಾಡಲು ತಜ್ಞರನ್ನು ಕಳುಹಿಸಿ ಕೊಡಿ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹೇಳಿದ್ದಾರೆ. ಗುರುವಾರ ಧೌಲಿಗಂಗಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

 ಇದನ್ನೂ ಓದಿ:  Uttarakhand Glacier Burst Updates | ಉತ್ತರಾಖಂಡ್ ಹಿಮ ಸ್ಫೋಟ: ಹೆಚ್ಚುತ್ತಲೇ ಇದೆ ಮೃತರ ಸಂಖ್ಯೆ, ಇನ್ನೂ 60 ಮೀಟರ್ ಸುರಂಗ ಶೋಧ ನಡೆಸಬೇಕಿದೆ

ಚಮೋಲಿ ಜಿಲ್ಲೆಯಲ್ಲಿನ ಸುರಂಗ ಮಾರ್ಗದಲ್ಲಿ ಹೂತುಹೋಗಿರುವ ಅವಶೇಷಗಳಡಿಯಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಮುಚ್ಚಿರುವ ಸುರಂಗ ಮಾರ್ಗದಲ್ಲಿ ಆಮ್ಲಜನಕ ಪೂರೈಸಿ ಜನರ ರಕ್ಷಣೆ ಮಾಡಲು ರಕ್ಷಣಾ ಕಾರ್ಯಕರ್ತರು ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಡಿಆರ್​ಎಫ್) ಮತ್ತು ಸೇನಾಪಡೆ ಸುರಂಗದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿವೆ.

Published On - 1:27 pm, Fri, 12 February 21