Uttarakhand: ಬಿಜೆಪಿ ಮುಖಂಡನ ಮಗಳಿಗೆ ಮುಸ್ಲಿಂ ಯುವಕನ ಜತೆಗೆ ಮದುವೆ, ಬೆಂಬಲಿಗರು, ಪಕ್ಷದಿಂದ ಭಾರೀ ವಿರೋಧ

|

Updated on: May 20, 2023 | 5:23 PM

ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಯಶಪಾಲ್ ಬೇನಂ ಅವರ ಮಗಳ ಮದುವೆ ಸುದ್ದಿ, ಈಗ ಭಾರೀ ವಿವಾದವಾಗಿದೆ. ಕೆಲ ಬಿಜೆಪಿ ನಾಯಕರು ಬಿಜೆಪಿ ಮುಖಂಡನ ಮಗಳ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Uttarakhand: ಬಿಜೆಪಿ ಮುಖಂಡನ ಮಗಳಿಗೆ ಮುಸ್ಲಿಂ ಯುವಕನ ಜತೆಗೆ ಮದುವೆ, ಬೆಂಬಲಿಗರು, ಪಕ್ಷದಿಂದ ಭಾರೀ ವಿರೋಧ
ಸಾಂದರ್ಭಿಕ ಚಿತ್ರ
Follow us on

ಡೆಹ್ರಡೂನ್: ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಯಶಪಾಲ್ ಬೇನಂ ಅವರ ಮಗಳ ಮದುವೆ ಸುದ್ದಿ, ಈಗ ಭಾರೀ ವಿವಾದವಾಗಿದೆ. ಕೆಲ ಬಿಜೆಪಿ ನಾಯಕರು ಬಿಜೆಪಿ ಮುಖಂಡನ ಮಗಳ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗರ್ವಾಲ್ ಪುರಸಭೆಯ ಅಧ್ಯಕ್ಷ ಯಶಪಾಲ್ ಬೇನಮ್ ಅವರ ಪುತ್ರಿ ಮೋನಿಕಾ ಮೇ 28 ರಂದು ರೈಸ್ ಅಹ್ಮದ್ ಅವರ ಮಗ ಮೋನಿಸ್ ಅಹ್ಮದ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಈ ಮದುವೆಗೆ ಹಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಯಶ್ಪಾಲ್ ಬೇನಾಮ್ ಪಕ್ಷದ ಅನೇಕರು ಮದುವೆ ನಿಲ್ಲಿಸುವಂತೆ ಹೇಳಿದ್ದಾರೆ. ಯಶಪಾಲ್ ಬೇನಮ್ ಅವರ ಪುತ್ರಿ ಮೋನಿಕಾ, ಮೋನಿಸ್ ಅಹ್ಮದ್ ಲಕ್ನೋ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಯಶ್ಪಾಲ್ ಬೇನಮ್ ಮಗಳ ಮದುವೆ ಹಿಂದೂ ಪದ್ಧತಿಯಂತೆ ನಡೆಯಲಿದೆ.

ಬೇನಂ ಅವರ ಪತ್ನಿ ಉಷಾ ರಾವತ್ ಅವರ ಪರವಾಗಿ ವಿವಾಹ ಆಮಂತ್ರಣ ಪತ್ರವನ್ನು ಕಳುಹಿಸಲಾಗುತ್ತಿದೆ. ಈ ಆಹ್ವಾನ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರು ಕೈಯಲ್ಲಿ ಹೂಮಾಲೆ ಹಿಡಿದು ನಿಂತಿರುವಂತೆ ತೋರಿಸಲಾಗಿದೆ. ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನ ಪತ್ರಿಕೆಯನ್ನು ಭಾರೀ ಕಟುವಾಗಿ ಟೀಕಿಸುತ್ತಿದ್ದಾರೆ.

ಉತ್ತರಾಖಂಡದ ಜನರು ತಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಾರೆ ಮತ್ತು ಅದನ್ನೇ ನಂಬುತ್ತಾರೆ ಎಂದು ಬಿಜೆಪಿ ಸದಸ್ಯ ಮತ್ತು ಗೋಸಂರಕ್ಷಣಾ ಆಯೋಗದ ಸದಸ್ಯ ಧರಂವೀರ್ ಗುಸೇನ್ ಹೇಳಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಆಕ್ಷೇಪಾರ್ಹವಾದುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮದುವೆಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗತ್ ಕಿಶೋರ್ ಬರ್ತ್ವಾಲ್ ಮಾತನಾಡಿ, ಸಾರ್ವಜನಿಕ ಭಾವನೆಗಳನ್ನು ಗೌರವಿಸದ ಜನಪ್ರತಿನಿಧಿಗೆ ಹುದ್ದೆ ಅಲಂಕರಿಸುವ ಹಕ್ಕಿಲ್ಲ. ಕಿಶೋರ್ ಬರ್ತ್ವಾಲ್ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಬೆಳಗಾವಿಯಲ್ಲಿ ಬಿತ್ತಾ ಹೆಣ? ಮುಂದುವರಿದ ತನಿಖೆ

ಮಗಳ ಮದುವೆಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದು ಯಶಪಾಲ್ ಬೇನಂ ಹೇಳಿದ್ದಾರೆ. ಈ ಮದುವೆಯನ್ನು ಧರ್ಮದ ಚೌಕಟ್ಟಿನಲ್ಲಿ ನೋಡಬಾರದು ಎಂದು ಯಶಪಾಲ್ ಬೇನಮ್ ಹೇಳಿದ್ದಾರೆ. ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಮ್ಮ ಮಕ್ಕಳಿಗೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕಿದೆ. ಈ ಮದುವೆ ಎರಡೂ ಕುಟುಂಬಗಳಿಗೆ ಮಹತ್ವದ್ದಾಗಿದೆ. ಇದರಲ್ಲಿ ಎರಡು ಜೋಡಿಗಳು ತಮ್ಮ ಜೀವನವನ್ನು ನಿರ್ಧರಿಸುತ್ತಿದ್ದಾರೆ. ಅದಕ್ಕಾಗಿ ಧರ್ಮವನ್ನು ಇದರೊಳಗೆ ತರಬಾರದು. ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆ ಮೇರೆಗೆ ಈ ಮದುವೆ ನಡೆಯುತ್ತಿದೆ ಎಂದು ಯಶಪಾಲ್ ಬೇನಮ್ ಹೇಳಿದ್ದಾರೆ. ಹಾಗಾಗಿ ಯಾರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ.

ಮತ್ತೊಂದೆಡೆ, ಯಶ್‌ಪಾಲ್ ಬೇನಮ್ ಅವರಿಗೆ ಬೆದರಿಕೆ ಮತ್ತು ಮದುವೆಗೆ ವಿರೋಧದ ಕುರಿತು, ಪೌರಿ ಎಸ್‌ಎಸ್‌ಪಿ ಶ್ವೇತಾ ಚೌಬೆ ಅವರು ವಿವಾಹವನ್ನು ಸೌಹಾರ್ದಯುತ ವಾತಾವರಣದಲ್ಲಿ ಮಾಡಲು ಪೊಲೀಸರ ಪ್ರಯತ್ನವಾಗಿದೆ ಎಂದು ಹೇಳಿದರು. ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Sat, 20 May 23