ಉತ್ತರಾಖಂಡ: ದೇವಾಲಯದಲ್ಲಿ ಮೋದಿ – ಯೋಗಿ ಸಹೋದರಿಯರ ಭೇಟಿ, ವಿಡಿಯೋ ವೈರಲ್
ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಉತ್ತರಾಖಂಡದ ಗರ್ವಾಲ್‌ನಲ್ಲಿರುವ ದೇವಾಲಯದಲ್ಲಿ ಭೇಟಿಯಾಗಿದ್ದಾರೆ.

ಗರ್ವಾಲ್, ಆ.5: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( yogi adityanath) ಅವರ ಸಹೋದರಿ ಉತ್ತರಾಖಂಡದ ಗರ್ವಾಲ್‌ನಲ್ಲಿರುವ ದೇವಾಲಯದಲ್ಲಿ ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ಅವರು ಶ್ರಾವಣ ಮಾಸದ ಪ್ರಯುಕ್ತ ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಪೌರಿ ಗಡ್ವಾಲ್‌ನಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ತಮ್ಮ ಪತಿಯೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಅವರು ಕೊಠಾರಿ ಗ್ರಾಮದ ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಕಂಡು ಮಾತನಾಡಿಸಿದ್ದಾರೆ. ಇಬ್ಬರು ಕೂಡ ಜತೆಗೆಯಾಗಿ ಪಾರ್ವತಿಗೆ ಪೂಜೆ ಸಲ್ಲಿಸಿದ್ದಾರೆ.
ಇದೀಗ ಇಬ್ಬರು ಭೇಟಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡು, ಶುಭಾಶಯ ತಿಳಿಸಿದ್ದಾರೆ. ಬಳಿಕ ದೇವಸ್ಥಾನದ ಕಡೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಬ್ಬ ಪ್ರಧಾನಿ ಮತ್ತು ಮುಖ್ಯಮಂತ್ರಿಯ ಸಹೋದರಿಯರು ಇಷ್ಟು ಸಾಮಾನ್ಯರಂತೆ ಇರಲು ಸಾಧ್ಯವೇ ಎಂದು ಟ್ವಿಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
PM Modi’s sister Basantiben and CM Yogi’s sister Shashi meeting exemplifies the essence of simplicity, Indian culture, and tradition. It’s heartening to witness their bond, transcending politics, and making us proud of these two remarkable individuals representing India’s values.… pic.twitter.com/CCYLKkvqVb
— Advocate Ajay Nanda (@ajay_mlnanda) August 4, 2023
ಇದನ್ನೂ ಓದಿ: ಕೈ ಮೇಲೆ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
ಈ ವಿಡಿಯೋವನ್ನು ಬಿಜೆಪಿ ನಾಯಕ ಅಜಯ್ ನಂದಾ ಅವರು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಸಹೋದರಿ ಬಸಂತಿಬೆನ್ ಮತ್ತು ಸಿಎಂ ಯೋಗಿ ಅವರ ಸಹೋದರಿ ಶಶಿ ಅವರ ಭೇಟಿಯು ತುಂಬಾ ಸರಳವಾಗಿತ್ತು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರವನ್ನು ಈ ಭೇಟಿ ಸಾರುತ್ತದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Sat, 5 August 23