ಈ ರಾಜ್ಯದಲ್ಲಿ ಕಾಪಿ ಮಾಡಿದರೆ 10 ಕೋಟಿ ರೂ. ದಂಡದ ಜೊತೆಗೆ 10 ವರ್ಷ ಜೈಲು ಶಿಕ್ಷೆ!

ದೇಶದಲ್ಲೇ ಕಟ್ಟುನಿಟ್ಟಾದ ನಕಲು ವಿರೋಧಿ ಕಾನೂನು ( Anti-Copying Law)ಭಾರತದ ಉತ್ತರ ಭಾಗದಲ್ಲಿರುವ ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕಾಪಿ ಹೊಡೆದರೆ 10 ಕೋಟಿ ದಂಡದ ಜೊತೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಈ ರಾಜ್ಯದಲ್ಲಿ ಕಾಪಿ ಮಾಡಿದರೆ 10 ಕೋಟಿ ರೂ. ದಂಡದ ಜೊತೆಗೆ 10 ವರ್ಷ ಜೈಲು ಶಿಕ್ಷೆ!
ಉತ್ತರಾಖಂಡ ನಕಲು ವಿರೋಧಿ ಕಾನೂನು
Image Credit source: Times Now
Edited By:

Updated on: Feb 11, 2023 | 4:40 PM

ಉತ್ತರಾಖಂಡ: ಶಾಲಾ, ಕಾಲೇಜು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಕಾಪಿ ಹೊಡೆದು ಡಿಬಾರ್ ಆಗಿರುವ ಸುದ್ದಿಯನ್ನು ನೀವು ಕೇಳಿರಬಹುದು. ಹಾಗೆಯೇ ಹಲವು ರಾಜ್ಯಗಳಲ್ಲಿ ಕಾಪಿ ಮಾಡಿದ ಅಭ್ಯರ್ಥಿಗಳು ನಿರ್ದಿಷ್ಟ ಅವಧಿಯ ವರೆಗೂ ಪರೀಕ್ಷೆ ಬರೆಯುವಂತಿಲ್ಲ ಎಂಬ ಕಾನೂನಿರುತ್ತದೆ. ಆದರೆ ಇಲ್ಲೊಂದು ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕಾಪಿ ಹೊಡೆದರೆ 10 ಕೋಟಿ  ರೂ. ದಂಡದ ಜೊತೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಹೌದು.. ದೇಶದಲ್ಲೇ ಕಟ್ಟುನಿಟ್ಟಾದ ನಕಲು ವಿರೋಧಿ ಕಾನೂನು ( Anti-Copying Law)ಭಾರತದ ಉತ್ತರ ಭಾಗದಲ್ಲಿರುವ ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ (Gurmeet Singh) ಅವರು ನಿನ್ನೆ(ಫೆಬ್ರವರಿ 10) ಉತ್ತರಾಖಂಡ ಸ್ಪರ್ಧಾತ್ಮಕ ಪರೀಕ್ಷೆ ನೇಮಕಾತಿಯಲ್ಲಿ ಅನ್ಯಾಯವನ್ನು ತಡೆಗಟ್ಟಲು ಕಟುನಿಟ್ಟಾದ ಕ್ರಮಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದಾರೆ. ಇನ್ನುಇದನ್ನು 24 ಗಂಟೆಯೊಳಗೆ ರಾಜಭವನ ಈ ಕಾನೂನು ಅಂಗೀಕರಿಸಿ ಜಾರಿಗೊಳಿಸಿದೆ.

ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ ರಾಜ್ಯಪಾಲರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಧನ್ಯವಾದ ತಿಳಿಸಿದ್ದಾರೆ. ಈ ನಕಲು ವಿರೋಧಿ ಕಾನೂನಿನಡಿಯಲ್ಲಿ ಕಾಪಿ ಮಾಡುವವರಿಗೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಇದಲ್ಲದೇ ಕಾಪಿ ಮಾಡುವ ದಂಧೆಗೆ ಕುಮ್ಮಕ್ಕು ನೀಡುವವರ ಆಸ್ತಿ ಮುಟ್ಟುಗೋಲು ಹಾಕುವ ಅವಕಾಶವೂ ಈ ಕಾನೂನಿನಲ್ಲಿ ಇದೆ.