Vande Bharat: ವಿಡಿಯೋ ನೋಡಿ; ವಂದೇ ಭಾರತ್ ರೈಲಿನ ಬಗ್ಗೆ ಶಾಲಾ ಮಕ್ಕಳಿಗೆ ಸಚಿವ ಅಶ್ವಿನಿ ವೈಷ್ಣವ್ ಪಾಠ!

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ರೈಲಿನ ಬಗ್ಗೆ ಶಾಲಾ ಮಕ್ಕಳಿಗೆ ವಿವರಣೆ ನೀಡುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

Vande Bharat: ವಿಡಿಯೋ ನೋಡಿ; ವಂದೇ ಭಾರತ್ ರೈಲಿನ ಬಗ್ಗೆ ಶಾಲಾ ಮಕ್ಕಳಿಗೆ ಸಚಿವ ಅಶ್ವಿನಿ ವೈಷ್ಣವ್ ಪಾಠ!
ಅಶ್ವಿನಿ ವೈಷ್ಣವ್ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Feb 11, 2023 | 2:55 PM

ಮುಂಬೈ: ಮಹಾರಾಷ್ಟ್ರಕ್ಕೆ ನೀಡಲಾಗಿರುವ ವಂದೇ ಭಾರತ್ ರೈಲುಗಳಿಗೆ (Vande Bharat Train) ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಚಾಲನೆ ನೀಡಿದ್ದರು. ಇದೀಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ವಂದೇ ಭಾರತ್ ರೈಲಿನ ಬಗ್ಗೆ ಶಾಲಾ ಮಕ್ಕಳಿಗೆ ವಿವರಣೆ ನೀಡುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಬೋಗಿಯ ಒಳಗೆ ಮಕ್ಕಳನ್ನು ಕರೆದುಕೊಂಡು ಹೋಗಿ ವಂದೇ ಭಾರತ್ ರೈಲಿನ ವಿಶೇಷಗಳನ್ನು ತೋರಿಸಿದ ನಂತರ ಹೊರಭಾಗದಲ್ಲಿ ಬೋಗಿಯ ಆವರಣ, ಚಕ್ರ ಇತ್ಯಾದಿಗಳ ಬಗ್ಗೆ ಸಚಿವರು ವಿವರಣೆ ನೀಡಿರುವುದು ವಿಡಿಯೋದಲ್ಲಿದೆ. ಖುಷಿಗೊಂಡ ಮಕ್ಕಳು ತಮ್ಮ ಸಂದೇಹಗಳ ಬಗ್ಗೆ ಸಚಿವರ ಬಳಿ ಪ್ರಶ್ನೆ ಕೇಳುತ್ತಾರೆ. ಅದಕ್ಕೂ ಸಚಿವರು ಸಾವಧಾನದಿಂದ ಉತ್ತರ ನೀಡಿರುವುದು ವಿಡಿಯೋದಲ್ಲಿದೆ.

‘ನೋಡಿ, ಇದನ್ನು ಬೋಗಿ ಎನ್ನುತ್ತಾರೆ. ಇದನ್ನು ಕೋಚ್ ಎನ್ನುತ್ತಾರೆ. ಇಲ್ಲಿ ಸ್ವಲ್ಪ ಕೆಳಗಡೆ ನೋಡಿ, ಚಕ್ರದ ಬಳಿ ಇರುವುದನ್ನು ಏರ್​​ಸ್ಪ್ರಿಂಗ್ ಎಂದು ಕರೆಯುತ್ತಾರೆ’ ಎಂದು ವಿವರಿಸಿದ ಸಚಿವರು, ಏರ್​​ಸ್ಪ್ರಿಂಗ್ ಹಾಗೂ ಶಾಕ್ ಅಬ್ಸರ್ಬರ್​​ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮಕ್ಕಳಿಗೆ ವಿವರಿಸಿದ್ದಾರೆ. ಅತ್ಯಾಧುನಿಕ ಏರ್​​ಸ್ಪ್ರಿಂಗ್ ಹಾಗೂ ಶಾಕ್ ಅಬ್ಸರ್ಬರ್​​ಗಳಿಂದಾಗಿ ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ.

ಮುಂಬೈ-ಸೋಲಾಪುರ, ಮುಂಬೈ-ಸಾಯಿನಗರ್ ಶಿರಡಿ ವಂದೇ ಭಾರತ್ ಎಕ್ಸ್​​ಪ್ರೆಸ್​​ಗೆ ಪ್ರಧಾನಿ ಮೋದಿ ಶುಕ್ರವಾರ ಚಾಲನೆ ನೀಡಿದ್ದರು. ಮಹಾರಾಷ್ಟ್ರಕ್ಕೆ ಎರಡು ವಂದೇ ಭಾರತ್ ರೈಲುಗಳನ್ನು ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಅಶ್ವಿನಿ ವೈಷ್ಣವ್ ಧನ್ಯವಾದ ತಿಳಿಸಿದ್ದಾರೆ. ರೈಲ್ವೆಗೆ ಕೇಂದ್ರ ಬಜೆಟ್​​ನಲ್ಲಿ ಉತ್ತಮ ಅನುದಾನ ಘೋಷಿಸಲಾಗಿದೆ ಎಂದೂ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ