ಉತ್ತರಾಖಂಡ: ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ
ಅತ್ಯಾಚಾರ ಸಂತ್ರಸ್ತೆಯೊಬ್ಬರು ನ್ಯಾಯಾಲಯದ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಾಖಂಡ(Uttarakhand)ದಲ್ಲಿ ನಡೆದಿದೆ. ಸಂತ್ರಸ್ತೆಯನ್ನು ರೂರ್ಕಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದಲ್ಲಿ ಆಕೆಯ ಗರ್ಭಪಾತಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿತ್ತು. ಆಕೆಯ ನಡೆಯಿಂದ ಕುಟುಂಬಸ್ಥರು ಕೂಡ ಭಯಗೊಂಡಿದ್ದಾರೆ.

ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಹುಡುಗಿ 20 ಸೆಪ್ಟೆಂಬರ್ 2023 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತನ್ನ ಪ್ರೇಮಿ ಮತ್ತು ಅವನ ಸ್ನೇಹಿತರ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು.
ನವೆಂಬರ್ 9 ರಂದು ಪೊಲೀಸರು ತಯ್ಯಬ್ ಎಂಬ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅತ್ಯಾಚಾರ ಸಂತ್ರಸ್ತೆಯ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಗಂಗಾನಹರ್ ಕೊತ್ವಾಲಿ ಉಸ್ತುವಾರಿ ಇನ್ಸ್‌ಪೆಕ್ಟರ್ ಅಮರಜೀತ್ ಸಿಂಗ್ ಹೇಳಿದ್ದಾರೆ.
ಈ ಪ್ರಕರಣದ ವಿಚಾರಣೆಗೆ ಸಂತ್ರಸ್ತೆ ಬಂದಿದ್ದರು. ಈ ವೇಳೆ ಸಂತ್ರಸ್ತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬದವರು ಮತ್ತು ಅಲ್ಲಿದ್ದ ಇತರ ಜನರ ಸಹಾಯದಿಂದ ಸಂತ್ರಸ್ತ ಮಹಿಳೆಯನ್ನು ಚಿಕಿತ್ಸೆಗಾಗಿ ರೂರ್ಕಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತಷ್ಟು ಓದಿ: ಭೋಪಾಲ್: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ 3 ಬಾರಿ ಅತ್ಯಾಚಾರ
ರೋಲಹೇರಿ ಪೊಲೀಸ್ ಠಾಣೆಯ ಭಗವಾನ್‌ಪುರ ನಿವಾಸಿ ತೈಬ್, ಆತನ ಸಹಚರರಾದ ತೌಹಿದ್, ಫಜ್ಲು ರೆಹಮಾನ್ ಮತ್ತು ಸಲ್ಮಾನ್ ವಿರುದ್ಧ ಬಾಲಕಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ನವೆಂಬರ್ 18ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆಕೆ ಈಗ ನಾಲ್ಕು ತಿಂಗಳ ಗರ್ಭಿಣಿ. ಆಕೆ ಗರ್ಭಪಾತಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ