ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್​ಗೆ ಬಿತ್ತು ಕಡಿವಾಣ.. ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು

| Updated By: ಸಾಧು ಶ್ರೀನಾಥ್​

Updated on: Nov 25, 2020 | 1:11 PM

ಒತ್ತಾಯ, ದೌರ್ಜನ್ಯ ಅಥವಾ ಮೋಸದಿಂದ ನಡೆಯುವ ಮತಾಂತರವನ್ನು ಜಾಮೀನುರಹಿತ ಅಪರಾಧವೆಂದು ಘೋಷಿಸಲಾಗಿದೆ. ಇಂಥ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್​ಗೆ ಬಿತ್ತು ಕಡಿವಾಣ.. ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Follow us on

ಲಖನೌ: ಲವ್ ಜಿಹಾದ್ ನಿಷೇಧ ಕಾನೂನು ಎಂದೇ ಜನಜನಿತವಾಗಿರುವ ಕಾನೂನು ಬಾಹಿರ ಮತಾಂತರ ಮತ್ತು ಯುವತಿಯ ಮತಾಂತರದ ಉದ್ದೇಶದಿಂದ ನಡೆಯುವ ಅಂತರ ಧರ್ಮೀಯ ವಿವಾಹ ನಿಷೇಧ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನು ಉತ್ತರ ಪ್ರದೇಶ ಸಚಿವ ಸಂಪುಟವು ಅಂಗೀಕರಿಸಿದೆ. ಸುಗ್ರೀವಾಜ್ಞೆ ಉಲ್ಲಂಘಿಸಿದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಉತ್ತರ ಪ್ರದೇಶ ವಿಧಿ ವಿರುದ್ಧ್ ಧರ್ಮ ಸಂಪರಿವರ್ತನ್ ಪ್ರತಿಶೇಧ್​ ಅಧ್ಯಾದೇಶ್ 2020ರ (ಕಾನೂನು ಬಾಹಿರ ಮತಾಂತರ ನಿಷೇಧ) ಪ್ರಕಾರ, ಹುಡುಗಿಯ ಧರ್ಮ ಬದಲಾವಣೆಯೊಂದನ್ನೇ ಉದ್ದೇಶವಾಗಿರಿಸಿಕೊಂಡು ನಡೆಸುವ ಮದುವೆಗಳನ್ನು ಶೂನ್ಯ (ರದ್ದು) ಎಂದು ಘೋಷಿಸಲಾಗುತ್ತದೆ.

ಒತ್ತಾಯ, ದೌರ್ಜನ್ಯ ಅಥವಾ ಮೋಸದಿಂದ ನಡೆಯುವ ಮತಾಂತರವನ್ನು ಜಾಮೀನುರಹಿತ ಅಪರಾಧವೆಂದು ಘೋಷಿಸಲಾಗಿದೆ. ಇಂಥ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರದ 100ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ವಂಚನೆ, ಸುಳ್ಳು ಹಾಗೂ ಮೋಸದಿಂದ ಧಾರ್ಮಿಕ ಮತಾಂತರಗಳನ್ನು ಮಾಡಿರುವ ದಾಖಲೆಗಳಿವೆ. ಈ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುವುದು ಅಗತ್ಯವಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮತ್ತು ಮಹಿಳೆಯರಿಗೆ, ವಿಶೇಷವಾಗಿ ಪರಿಶಿಷ್ಟ ಪಂಗಡದವರಿಗೆ ನ್ಯಾಯ ದೊರಕಿಸಿಕೊಡಲು ಈ ಕಾನೂನು ಅಗತ್ಯವಾಗಿತ್ತು ಎಂದು ಉತ್ತರ ಪ್ರದೇಶದ ಸಚಿವ ಮತ್ತು ರಾಜ್ಯ ಸರ್ಕಾರದ ವಕ್ತಾರ ಸಿದ್ದಾರ್ಥ್ ಸಿಂಗ್ ಹೇಳಿದ್ದಾರೆ.

ಪ್ರಸ್ತಾವಿತ ಸುಗ್ರೀವಾಜ್ಞೆಯ ಪ್ರಕಾರ ಸಾಮಾನ್ಯ ಸಂದರ್ಭಗಳಲ್ಲಿ ಇಂಥ ಅಪರಾಧಗಳಿಗೆ 1ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 15 ಸಾವಿರ ರೂ. ದಂಡ ವಿಧಿಸಲಾಗುವುದು. ಮಹಿಳೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಅಪ್ರಾಪ್ತ ವಯಸ್ಕಳಾಗಿದ್ದರೆ ಅಪರಾಧಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, ಕನಿಷ್ಠ ₹ 25 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶುದ್ಧ ಪ್ರೇಮ ಬೇರೆ, ಮತಾಂತರಕ್ಕಾಗಿ ಪ್ರೇಮ ಬೇರೆ -ಲವ್​ ಜಿಹಾದ್ ತಡೆಗೆ ಸಿ.ಟಿ.ರವಿ ಆಗ್ರಹ

Published On - 1:02 pm, Wed, 25 November 20