ಕೊರೊನಾ ಮಣಿಸುವ ಲಸಿಕೆ ನೀಡಲು ಬರಲಿವೆ ದೇಶದಲ್ಲೇ ತಯಾರಾದ ‘ಆತ್ಮನಿರ್ಭರ್ ಸಿರಿಂಜ್’

ಕೊರೊನಾ ಮಣಿಸುವ ಲಸಿಕೆ ನೀಡಲು ಬರಲಿವೆ ದೇಶದಲ್ಲೇ ತಯಾರಾದ ‘ಆತ್ಮನಿರ್ಭರ್ ಸಿರಿಂಜ್’
ಕೊರೊನಾ ವ್ಯಾಕ್ಸಿನ್

ಕೋವಿಡ್ ವಿರುದ್ಧ ಹೋರಾಡಲು ನಾವು ಇತರೆ ದೇಶಗಳನ್ನು ಅವಲಂಬಿಸಬೇಕಿಲ್ಲ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ಭಾರತದಲ್ಲಿಯೇ ತಯಾರಾಗಲಿದೆ ಸಿರಿಂಜ್​.

Skanda

| Edited By: sadhu srinath

Nov 25, 2020 | 3:00 PM

ದೆಹಲಿ: ಕೋವಿಡ್​ 19 ವಿರುದ್ಧದ ಲಸಿಕೆ ಲಭ್ಯವಾಗುವ ಸಾಧ್ಯತೆ ದಟ್ಟವಾಗುತ್ತಿರುವಾಗಲೇ ಅದಕ್ಕೆ ಬೇಕಾದ ಉಪಕರಣಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆಲ್​ ಇಂಡಿಯಾ ಸಿರಿಂಜ್ ಆಂಡ್ ನೀಡಲ್​ ಮ್ಯಾನುಫ್ಯಾಕ್ಚರ್​ ಅಸೋಸಿಯೇಶನ್​ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು ಹೆಚ್ಚುವರಿ 35 ಕೋಟಿ ಸಿರಿಂಜ್ ಪೂರೈಸುವುದಾಗಿ ಭರವಸೆ ನೀಡಿದೆ.

ಕೊರೊನಾ ತಡೆಗಟ್ಟಲು ಭಾರತ ಪರದೇಶಗಳ ಮೇಲೆ ಅವಲಂಬಿಸಬೇಕಿಲ್ಲ, ಆತ್ಮನಿರ್ಭರ್ ಭಾರತದ ಪರಿಕಲ್ಪನೆಯನ್ನು ನಾವು ಯಶಸ್ವಿಗೊಳಿಸಬೇಕೆಂದರೆ ನಮ್ಮ ಮೇಲೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಎಂತಹ ಕಠಿಣ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಬಲ್ಲೆವು ಎಂಬ ನಂಬಿಕೆ ನಮಗಿದೆ ಎಂದು ಉಲ್ಲೇಖಿಸಲಾಗಿದ್ದು ಅಸೋಸಿಯೇಶನ್ನಿನ ಸದಸ್ಯರು ಭಾರತದ 19 ರಾಜ್ಯಗಳಲ್ಲಿ ಈಗಾಗಲೇ ಇರುವುದರಿಂದ ಅವಶ್ಯಕತೆಗೆ ಅನುಗುಣವಾಗಿ ಸಿರಿಂಜ್ ಉತ್ಪಾದಿಸುವುದು ನಮಗೆ ಸುಲಭವಾಗಲಿದೆ ಎಂದಿದ್ದಾರೆ.

ಕಡಿಮೆ ಆಗುತ್ತಂತೆ ಕ್ವಾರಂಟೈನ್ ಅವಧಿ! ಈಗಿರುವ ಎರಡು ವಾರಗಳ ಕ್ವಾರಂಟೈನ್ ಅವಧಿಯನ್ನು 7ರಿಂದ 10 ದಿನಗಳಿಗೆ ಕಡಿತಗೊಳಿಸುವ ಬಗ್ಗೆ, ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಸೂಚನೆ ನೀಡಿದೆ. ಈ ಮೊದಲು ಹದಿನಾಲ್ಕು ದಿನಗಳ ಕ್ವಾರಂಟೈನ್ ಅವಧಿಯನ್ನು CDC ಸಲಹೆ ಮಾಡಿತ್ತು. ಆದರೆ ಈಗ ಜನರ ಅನುಕೂಲಕ್ಕಾಗಿ ಮತ್ತು ನಿಯಮ ಪಾಲನೆಗೆ ಸಹಕಾರಿಯಾಗಲೆಂದು ಕ್ವಾರಂಟೈನ್ ಅವಧಿಯನ್ನು ಕಡಿತಗೊಳಿಸಲು ಚಿಂತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, ಹಲವಷ್ಟು ಮಂದಿಯಲ್ಲಿ ಒಂದು ವಾರದ ಬಳಿಕವಷ್ಟೇ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಕ್ವಾರಂಟೈನ್ ಮುಗಿಸಿ ಹೊರ ಬರುವ ಮುನ್ನ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada