ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು: ಬೆಚ್ಚಿಬಿದ್ದ ಜನ, ಮುಂದೇನಾಯ್ತು ನೋಡಿ

ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟು ಆತಂಕ ಸೃಷ್ಟಿಸಿದ್ದ ಜಗನ್ ಅರ್ಜುನ್ ಭಾಲೆಯನ್ನು RPF 50 ದಿನಗಳ ನಂತರ ಬಂಧಿಸಿದೆ. ಡಿಸೆಂಬರ್ 27, 2025 ರಂದು ನಡೆದ ಘಟನೆಯಲ್ಲಿ 2.5 ಅಡಿ ರ್ಯಾಟ್ ಸ್ನೇಕ್ ಪತ್ತೆಯಾಗಿತ್ತು. ಆರೋಪಿ "ಗೊಂದಲ" ಸೃಷ್ಟಿಸುವುದಾಗಿ ಒಪ್ಪಿಕೊಂಡಿದ್ದು, ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ರೈಲ್ವೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು: ಬೆಚ್ಚಿಬಿದ್ದ ಜನ, ಮುಂದೇನಾಯ್ತು ನೋಡಿ
ವಂದೇ ಭಾರತ್​​​ ರೈಲಿನಲ್ಲಿ ಹಾವು

Updated on: Feb 14, 2026 | 5:52 PM

ಮುಂಬೈ, ಫೆ.14: ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ (RPF) ಕೊನೆಗೂ ಬಂಧಿಸಿದೆ. ಸುಮಾರು 50 ದಿನಗಳ ಸುದೀರ್ಘ ಹುಡುಕಾಟದ ನಂತರ ಆರೋಪಿಯನ್ನು ಮುಂಬ್ರಾದಲ್ಲಿ ಸೆರೆಹಿಡಿಯಲಾಗಿದೆ.ಈ ಘಟನೆಯು ಡಿಸೆಂಬರ್ 27, 2025 ರಂದು ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22225) ನಲ್ಲಿ ನಡೆದಿತ್ತು. ರೈಲಿನ ಕೋಚ್ C-16 ರ ಶೌಚಾಲಯದಲ್ಲಿ ಸುಮಾರು 2.5 ಅಡಿ ಉದ್ದದ ಇಂಡಿಯನ್ ರ್ಯಾಟ್ ಸ್ನೇಕ್ (Rat Snake) ಪತ್ತೆಯಾಗಿತ್ತು. ಇದರಿಂದ ಪ್ರಯಾಣಿಕರು ಭೀತಿಗೊಳಗಾಗಿದ್ದರು.

ಬಂಧಿತನನ್ನು ನಾಸಿಕ್ ಜಿಲ್ಲೆಯ ನಿವಾಸಿ ಜಗನ್ ಅರ್ಜುನ್ ಭಾಲೆ (37) ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಈತ ಠಾಣೆ ರೈಲ್ವೆ ನಿಲ್ದಾಣದಲ್ಲಿ ಚೀಲದೊಂದಿಗೆ ರೈಲು ಹತ್ತಿ ಶೌಚಾಲಯದ ಒಳಗೆ ಹಾವನ್ನು ಬಿಟ್ಟು ಕೆಳಗಿಳಿಯುವ ದೃಶ್ಯ ಸೆರೆಯಾಗಿದೆ. ವಿಚಾರಣೆ ವೇಳೆ ಆರೋಪಿ ತಾನು ಕೇವಲ “ಗೊಂದಲ ಮತ್ತು ಜನರಲ್ಲಿ ಆತಂಕ” ಸೃಷ್ಟಿಸಲು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿದ್ದ ಆರೋಪಿ ಜಗನ್ ಅರ್ಜುನ್ ಭಾಲೆಗೆ ಕಲ್ಯಾಣ್ ರೈಲ್ವೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

ಇಲ್ಲಿದೆ ನೋಡಿ ವಿಡಿಯೋ:

ರೈಲ್ವೆ ರಕ್ಷಣಾ ಪಡೆ (RPF) ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನ ವಿರುದ್ಧ ರೈಲ್ವೆ ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 145(ರೈಲಿನಲ್ಲಿ ಅಸಭ್ಯ ವರ್ತನೆ ಮತ್ತು ಜನರಿಗೆ ತೊಂದರೆ ನೀಡುವುದು) ಸೆಕ್ಷನ್ 147 (ರೈಲ್ವೆ ಆಸ್ತಿಯೊಳಗೆ ಅತಿಕ್ರಮ ಪ್ರವೇಶ)ಸೆಕ್ಷನ್ 153 (ರೈಲು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವುದು) ಸಿಸಿಟಿವಿ ಆಧಾರದ ಮೇಲೆ ಬಂಧಿತನಾಗಿರುವ ಈತ, ಕೇವಲ ಕುಚೇಷ್ಟೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಈಗ ಜೈಲಿಗಟ್ಟಲಾಗಿದ್ದು, ರೈಲ್ವೆ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:51 pm, Sat, 14 February 26

Follow Us