Atiq Ahmed: ಗ್ಯಾಂಗ್​​ಸ್ಟರ್ ಅತೀಕ್ ಅಹಮದ್‌ನ್ನು ಪ್ರಯಾಗ್‌ರಾಜ್‌ಗೆ ಕರೆತರುತ್ತಿದ್ದಾಗ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

|

Updated on: Mar 27, 2023 | 11:07 PM

ವಿಡಿಯೊ ದೃಶ್ಯದ ಪ್ರಕಾರ ಅತಿವೇಗದ ಬೆಂಗಾವಲು ಪಡೆ ಶಿವಪುರಿ ಮೂಲಕ ಹಾದು ಹೋಗುತ್ತಿದ್ದಾಗ ಹಸುವೊಂದು ಇದ್ದಕ್ಕಿದ್ದಂತೆ ಟ್ರಕ್‌ನ ಮುಂದೆ ಬಂದಿದೆ. ವಾಹನಕ್ಕೆ ಡಿಕ್ಕಿ ಹೊಡೆದ ಹಸು ರಸ್ತೆಯಿಂದ ರಸ್ತೆ ಬದಿಗೆ ಎಸೆಯಲ್ಪಟ್ಟು ಅಲ್ಲೇ ಸಾವಿಗೀಡಾಗಿದೆ.

Atiq Ahmed: ಗ್ಯಾಂಗ್​​ಸ್ಟರ್ ಅತೀಕ್ ಅಹಮದ್‌ನ್ನು ಪ್ರಯಾಗ್‌ರಾಜ್‌ಗೆ ಕರೆತರುತ್ತಿದ್ದಾಗ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ
ಅತೀಕ್ ಅಹ್ಮದ್
Follow us on

ಗ್ಯಾಂಗ್ ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್‌ನ್ನು (Atiq Ahmed) ಪ್ರಯಾಗ್‌ರಾಜ್‌ಗೆ (Prayagraj) ಕರೆಯೊಯ್ಯುತ್ತಿದ್ದ ವೇಳೆ ಮಧ್ಯಪ್ರದೇಶ (Madhya Pradesh) ಶಿವಪುರಿಯಲ್ಲಿ ಪೊಲೀಸ್ ಬೆಂಗಾವಲು ಪಡೆಯ ವಾಹನವೊಂದು ಹಸುವಿಗೆ ಡಿಕ್ಕಿ ಹೊಡೆದಿದೆ.ವಿಡಿಯೊ ದೃಶ್ಯದ ಪ್ರಕಾರ ಅತಿವೇಗದ ಬೆಂಗಾವಲು ಪಡೆ ಶಿವಪುರಿ ಮೂಲಕ ಹಾದು ಹೋಗುತ್ತಿದ್ದಾಗ ಹಸುವೊಂದು ಇದ್ದಕ್ಕಿದ್ದಂತೆ ಟ್ರಕ್‌ನ ಮುಂದೆ ಬಂದಿದೆ. ವಾಹನಕ್ಕೆ ಡಿಕ್ಕಿ ಹೊಡೆದ ಹಸು ರಸ್ತೆಯಿಂದ ರಸ್ತೆ ಬದಿಗೆ ಎಸೆಯಲ್ಪಟ್ಟು ಅಲ್ಲೇ ಸಾವಿಗೀಡಾಗಿದೆ. ಇದಾದನಂತರ ವಾಹನಗಳು ಸ್ವಲ್ಪ ಹೊತ್ತು ನಿಂತಿವೆ. ಭಾನುವಾರ ಗುಜರಾತ್‌ನಿಂದ ಹೊರಟಿದ್ದ ಭದ್ರತಾ ಸಿಬ್ಬಂದಿಯ ಬೆಂಗಾವಲು ಪಡೆ ಸಂಜೆಯ ವೇಳೆಗೆ ಪ್ರಯಾಗ್‌ರಾಜ್‌ಗೆ ತಲುಪುವ ನಿರೀಕ್ಷೆಯಿದೆ. ಅಹ್ಮದ್‌ನನ್ನು ಮಂಗಳವಾರ ಪ್ರಯಾಗ್‌ರಾಜ್‌ನಲ್ಲಿರುವ ಎಂಪಿ ಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಗುತ್ತಿದೆ.

ಇದಕ್ಕೂ ಮೊದಲು, ಸಮಾಜವಾದಿ ಪಕ್ಷದ ಮಾಜಿ ಸಂಸದ ಶಿವಪುರಿಯಲ್ಲಿ ನಿಲುಗಡೆ ಸಮಯದಲ್ಲಿ ಪೊಲೀಸ್ ವ್ಯಾನ್‌ನಿಂದ ಹೊರಬರುತ್ತಿರುವುದನ್ನು ಕಂಡು ಸುದ್ದಿಗಾರರು ಅವರಲ್ಲಿ ಪ್ರಶ್ನೆ ಕೇಳಿದಾಗ ಅವರು ಮಾತನಾಡಲಿಲ್ಲ.


ಭಾನುವಾರ ತಡರಾತ್ರಿ ಬೆಂಗಾವಲು ಪಡೆ ರಾಜಸ್ಥಾನದ ಕೋಟಾದಲ್ಲಿ ನೇತಾಡುವ ಸೇತುವೆಯನ್ನು ದಾಟಿದೆ. ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ನ್ಯಾಯಾಲಯದ ವಿಚಾರಣೆಗಾಗಿ ರಸ್ತೆ ಮಾರ್ಗವಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕರೆದೊಯ್ಯಲಾಗುತ್ತಿದೆ. ಅತೀಕ್ ಅಹ್ಮದ್ ಸೋಮವಾರ ಸಂಜೆ ಪ್ರಯಾಗರಾಜ್ ತಲುಪಲಿದ್ದಾನೆ.

ಭಾನುವಾರ ಸಂಜೆ ಸಬರಮತಿಯಿಂದ ಹೊರಟ ಅವರ ಬೆಂಗಾವಲು ಪಡೆ ಇಲ್ಲಿಯವರೆಗೆ ಒಂಬತ್ತು ಬಾರಿ ನಿಂತು ಅಲ್ಲಿಂದ ಪ್ರಯಾಣಿಸಿದೆ.

ಸೋಮವಾರ ಮುಂಜಾನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಝಾನ್ಸಿ ಪ್ರವೇಶಿಸುವ ಮುನ್ನ ಪೊಲೀಸ್ ಬೆಂಗಾವಲು ಪಡೆ ಸ್ವಲ್ಪ ಹೊತ್ತು ನಿಲ್ಲಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.ಶಿವಪುರಿ ಜಿಲ್ಲೆಯ ಖರಾಯ್‌ನಲ್ಲಿ ಬೆಂಗಾವಲು ಪಡೆ ಸ್ವಲ್ಪ ಹೊತ್ತು ನಿಂತಿತ್ತು. ಅಹ್ಮದ್ ಬಿಳಿ ಪೇಟವನ್ನು ಧರಿಸಿ  ಮೂತ್ರ ವಿಸರ್ಜನೆ ಮಾಡಲು ವ್ಯಾನ್​​ನಿಂದ ಇಳಿದ್ದಿದ್ದ,

ನೀವು “ಹೆದರಿದ್ದೀರಾ” ಎಂದು  ಮಾಧ್ಯಮದವರು ಕೇಳಿದಾಗ “ಕಹೇ ಡರ್” (ಏನು ಭಯ) ಎಂದು ಉತ್ತರಿಸಿದರು.

ಭಾನುವಾರ ಸಂಜೆ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಿಂದ ಹೊರಬಂದ ನಂತರ, ಅಹ್ಮದ್ ತಾನು ಕೊಲೆಯಾಗಬಹುದೆಂಬ ಭಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Sanjeev Sanyal: ಅದಾನಿ ಹಾಗೂ ಹಿಂಡನ್​ಬರ್ಗ್​ ನಡುವಿನ ಹೋರಾಟದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿಲ್ಲ: ಪ್ರಧಾನಿ ಆರ್ಥಿಕ ಸಲಹೆಗಾರ

ದರೋಡೆಕೋರ ವಿಕಾಸ್ ದುಬೆಯಂತೆಯೇ ಅಹ್ಮದ್ ಅನ್ನು ಕೊಲ್ಲುವ ಭಯವನ್ನು ಅಹ್ಮದ್ ಕುಟುಂಬ ವ್ಯಕ್ತಪಡಿಸಿದೆ.

ಅತೀಕ್ ಅಹ್ಮದ್ 2005ರಲ್ಲಿ ನಡೆದ ಬಿಎಸ್​ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಅರೋಪಿಯೂ ಆಗಿದ್ದಾರೆ, ಹಾಗೆಯೇ ಇದೇ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆಯ ಆರೋಪಿಯೂ ಕೂಡ ಹೌದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Mon, 27 March 23