ಮುಂಬೈ: ಪೂರ್ವ ಅಂಧೇರಿಯಲ್ಲಿರುವ ಹಾರ್ಡ್‌ವೇರ್ ಅಂಗಡಿಯಲ್ಲಿ ಬೆಂಕಿ ಅನಾಹುತ; ಓರ್ವ ವ್ಯಕ್ತಿ ಸಾವು
ರಾಜಶ್ರೀ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಎಲೆಕ್ಟ್ರಿಕ್ ವೈರಿಂಗ್ ಮತ್ತು ಇನ್‌ಸ್ಟಾಲೇಶನ್ಸ್ ದೊಡ್ಡ ಪ್ರಮಾಣದ ಹಾರ್ಡ್‌ವೇರ್ ಇಲ್ಲಿ ಸಂಗ್ರಹಿಸಿಡಲಾಗಿತ್ತು
ಮುಂಬೈನ (Mumbai) ಅಂಧೇರಿ ಪ್ರದೇಶದಲ್ಲಿರುವ ಸಾಕಿ ನಾಕಾ ಮೆಟ್ರೋ(Saki Naka metro station) ನಿಲ್ದಾಣದ ಸಮೀಪವಿರುವ ಹಾರ್ಡ್‌ವೇರ್ ಅಂಗಡಿಯಲ್ಲಿ ಸೋಮವಾರ ಮುಂಜಾನೆ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾಗೆ. ಮೃತ ವ್ಯಕ್ತಿಯನ್ನು ರಾಕೇಶ್ ಗುಪ್ತಾ (22 ವರ್ಷ)ಎಂದು ಗುರುತಿಸಲಾಗಿದೆ.ಅಂಗಡಿಗೆ ಬೆಂಕಿ ಹಬ್ಬಿಕೊಂಡಾಗ ಈತನಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ಜನರು ಒಳಗೆ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ಪ್ರಸ್ತುತ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.ರಾಜಶ್ರೀ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಎಲೆಕ್ಟ್ರಿಕ್ ವೈರಿಂಗ್ ಮತ್ತು ಇನ್‌ಸ್ಟಾಲೇಶನ್ಸ್ ದೊಡ್ಡ ಪ್ರಮಾಣದ ಹಾರ್ಡ್‌ವೇರ್ ಇಲ್ಲಿ ಸಂಗ್ರಹಿಸಿಡಲಾಗಿತ್ತು. ಅಂಗಡಿಯು ಗ್ರೌಂಡ್-ಪ್ಲಸ್-ಟು-ಲಾಫ್ಟ್ ರಚನೆಯಾಗಿದ್ದು, ಅಧಿಕ ಪ್ರಮಾಣದ ಹಾರ್ಡ್‌ವೇರ್ ಸಂಗ್ರಹವಾಗಿರುವ ಲಾಫ್ಟ್‌ಗಳ ಪೈಕಿ ಒಂದರ ಕುಸಿತವು ರಕ್ಷಣಾ ತಂಡಗಳಿಗೆ ಕಟ್ಟಡವನ್ನು ಪ್ರವೇಶಿಸಲು ಸವಾಲಾಗಿದೆ.
ರಕ್ಷಣಾ ಕಾರ್ಯಗಳಿಗೆ ನೆರವಾಗಲು ಜೆಸಿಬಿ ಯಂತ್ರದ ಸಹಾಯದಿಂದ ಕಟ್ಟಡದ ಮುಂಭಾಗವನ್ನು ಕೆಡವಲಾಗುತ್ತಿದೆ. ಹಾರ್ಡ್‌ವೇರ್ ಅಂಗಡಿಯು ಸರಿಸುಮಾರು 40 ಅಡಿಯಿಂದ 50 ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ ಮತ್ತು ಬೆಂಕಿಯನ್ನು ನಂದಿಸಲು ಮತ್ತು ಒಳಗೆ ಉಳಿದಿರುವ ವ್ಯಕ್ತಿಗಳನ್ನು ಉಳಿಸಲು ಐದು ಅಗ್ನಿಶಾಮಕ ಎಂಜಿನ್‌ಗಳನ್ನು ನಿಯೋಜಿಸಲಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಮಾಹಿತಿ ಮೇರೆಗೆ ಮುಂಬೈ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕನಿಷ್ಠ ಐದು ಅಗ್ನಿಶಾಮಕ ಟೆಂಡರ್‌ಗಳು ಇದ್ದವು. ಕಟ್ಟಡದ 1 ನೇ ಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳ ತಿಳಿಸಿದೆ. ಕೊನೆಗೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಾಗ ಇಬ್ಬರಿಂದ ಮೂರು ಮಂದಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಅವರನ್ನು ರಕ್ಷಿಸಿ, ಬೆಂಕಿ ನಂದಿಸಲಾಯಿತು.
ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಮುಂಜಾನೆ ಭಾನುವಾರ ಬೆಳಿಗ್ಗೆ, ಕಂಜುರ್ಮಾರ್ಗ್ ನಲ್ಲಿರುವ ಮಹದಾ ಕಟ್ಟಡದಲ್ಲಿ ದೊಡ್ಡ ಬೆಂಕಿ ಆವರಿಸಿದೆ. ಏಳು ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: Congress Protest: ಸಂಸದ ಸ್ಥಾನದಿಂದ ರಾಹುಲ್ ಅನರ್ಹ: ಸಂಸತ್ನಲ್ಲಿ ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ
14 ಅಂತಸ್ತಿನ ವಸತಿ ಕಟ್ಟಡದ ನೆಲ ಮಹಡಿಯಲ್ಲಿ ಮೀಟರ್ ಕ್ಯಾಬಿನ್ ಮತ್ತು ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕಟ್ಟಡದ ವಿದ್ಯುತ್ ವೈರಿಂಗ್, ನೆಲ ಮಹಡಿಯಲ್ಲಿರುವ ಸಾಮಾನ್ಯ ಎಲೆಕ್ಟ್ರಿಕ್ ಮೀಟರ್ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ