ಕೊರೊನಾ ಲಸಿಕೆ ಪಡೆದ ಇಬ್ಬರು ಮೃತಪಟ್ಟಿದ್ದಾರೆ, ಆದರೆ ಇದಕ್ಕೆ ಔಷಧ ಕಾರಣವಲ್ಲ: ಕೇಂದ್ರ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2021 | 9:46 PM

ಲಸಿಕೆಯಿಂದ ಅನಾರೋಗ್ಯಕ್ಕೆ ತುತ್ತಾದ 580 ಜನರ ಮೇಲೆ ನಿಗಾ ಇಡಲಾಗಿದೆ. 7 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಸಿಕೆ ಪಡೆದ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಲಸಿಕೆ ತೆಗೆದುಕೊಂಡಿದ್ದು ಇದಕ್ಕೆ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾ ಲಸಿಕೆ ಪಡೆದ ಇಬ್ಬರು ಮೃತಪಟ್ಟಿದ್ದಾರೆ, ಆದರೆ ಇದಕ್ಕೆ ಔಷಧ ಕಾರಣವಲ್ಲ: ಕೇಂದ್ರ ಸರ್ಕಾರ
ಕೊವಿಶೀಲ್ಡ್​ ಲಸಿಕೆ
Follow us on

ನವದೆಹಲಿ: ಅಗತ್ಯ ಸೇವೆ ನೀಡುವವರಿಗೆ ಕೊರೊನಾ ವೈರಸ್​ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡು ಮೂರು ದಿನ ಕಳೆದಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 3.80 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, 580 ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಸರ್ಕಾರ ತಿಳಿಸಿದೆ.

ಲಸಿಕೆಯಿಂದ ಅನಾರೋಗ್ಯಕ್ಕೆ ತುತ್ತಾದ 580 ಜನರ ಮೇಲೆ ನಿಗಾ ಇಡಲಾಗಿದೆ. 7 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಸಿಕೆ ಪಡೆದ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಲಸಿಕೆ ತೆಗೆದುಕೊಂಡಿದ್ದು ಇದಕ್ಕೆ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಭಾನುವಾರ ರಾತ್ರಿ ಮಹಿಪಾಲ್​ ಸಿಂಗ್ ಎಂಬುವವರು​ ಮೃತಪಟ್ಟಿದ್ದಾರೆ. ಶನಿವಾರ ಇವರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಆದರೆ, ಕೊರೊನಾ ವೈರಸ್​ ಔಷಧ ಪಡೆದಿದ್ದಕ್ಕೇ ಆತ ಮೃತಪಟ್ಟಿದ್ದಾನೆ ಎನ್ನುವುದು ಸುಳ್ಳು. ಆತನಿಗೆ ಹೃದಯಾಘಾತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಬಳ್ಳಾರಿಯ 43 ವರ್ಷದ ವ್ಯಕ್ತಿ ಕೊರೊನಾ ಲಸಿಕೆ ಪಡೆದ ನಂತರ ಮೃತಪಟ್ಟಿದ್ದರು. ಅವರು ಮೃತಪಡಲು ಕಾರಣ ಹೃದಯಾಘಾತ ಎಂದು ಸರ್ಕಾರ ತಿಳಿಸಿದೆ. ಇನ್ನು, ಕೊರೊನಾ ಔಷಧ ತೆಗೆದುಕೊಂಡ ನಂತರ ತೀವ್ರ ಆರೋಗ್ಯ ಸಮಸ್ಯೆಯಿಂದ ದೆಹಲಿಯಲ್ಲಿ ಮೂವರು, ಕರ್ನಾಟಕದಲ್ಲಿ ಇಬ್ಬರು, ಉತ್ತರಾಖಂಡ ಹಾಗೂ ಚತ್ತೀಸ್​ಗಢದಲ್ಲಿ ಒಬ್ಬರು ಆಸ್ಪತ್ರೆ ಸೇರಿದ್ದಾರೆ. ಈ ಪೈಕಿ ಮೂವರು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಥಟ್​ ಅಂತ’ ಕೊರೊನಾ ಲಸಿಕೆ ಹಾಕಿಸಿಕೊಂಡು, ಧೈರ್ಯ ತುಂಬಿದ ಡಾ. ಸೋಮೇಶ್ವರ ನಾರಪ್ಪ!