ಪಣಜಿ: ಹಿರಿಯ ಗೋವಾ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ (Luizinho Faleiro) ಅವರು ಮಮತಾ ಬ್ಯಾನರ್ಜಿಯ (Mamata Banerjee) ತೃಣಮೂಲ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ ಎಂಬ ವರದಿಗಳ ನಡುವೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಫಲೆರೊ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ಅನುಭವವಿದೆ. ಸೋಮವಾರ ಫಲರೊ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದು ಬಿಜೆಪಿಯನ್ನು ಕಠಿಣ ಹೋರಾಟ ನೀಡಬಲ್ಲ “ಬೀದಿ ಹೋರಾಟಗಾರರು ” ಎಂದು ಹೇಳಿದ್ದರು.
“ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರಿಗೆ ಕಠಿಣ ಹೋರಾಟ ನೀಡಿದ್ದಾರೆ. ಮಮತಾ ಸೂತ್ರವು ಬಂಗಾಳದಲ್ಲಿ ಗೆದ್ದಿದೆ” ಎಂದು ಫಲೆರೊ ಸುದ್ದಿಗಾರರಿಗೆ ಹೇಳಿದರು. ನೀವು ಪಕ್ಷ ಬದಲಿಸುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಅವರು “ದೊಡ್ಡ ಕಾಂಗ್ರೆಸ್ ಕುಟುಂಬದ ಕಾಂಗ್ರೆಸ್ಸಿಗ” ಆಗಿ ಮುಂದುವರಿಯುವುದಾಗಿ ಫಲೆರೊ ಹೇಳಿದ್ದಾರೆ. ಅದೇ ವೇಳೆ, ಬಿಜೆಪಿಯ ವಿರುದ್ಧ ಹೋರಾಡಲು ತೃಣಮೂಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದೇನೆ ಎಂದಿದ್ದಾರೆ.
“ನಾನು ಕೆಲವು ಜನರನ್ನು ಭೇಟಿಯಾದೆ. ನಾನು 40 ವರ್ಷದ ಕಾಂಗ್ರೆಸ್ಸಿಗ ಎಂದು ಅವರು ಹೇಳಿದರು. ನಾನು ಕಾಂಗ್ರೆಸ್ ಕುಟುಂಬದ ಕಾಂಗ್ರೆಸ್ಸಿಗನಾಗಿ ಮುಂದುವರಿಯುತ್ತೇನೆ. ಎಲ್ಲಾ ನಾಲ್ಕು ಕಾಂಗ್ರೆಸ್‌ಗಳಲ್ಲಿ ಮಮತಾ ಅವರು ಪ್ರಧಾನಿ ಮೋದಿಗೆ ಕಠಿಣ ಹೋರಾಟ ನೀಡಿದ್ದಾರೆ. ಪ್ರಧಾನಿ ಮೋದಿ ಬಂಗಾಳದಲ್ಲಿ 200 ಸಭೆಗಳನ್ನು ನಡೆಸಿದ್ದರು. ಅಮಿತ್ ಶಾ 250 ಸಭೆಗಳನ್ನು ನಡೆಸಿದ್ದರು. ನಂತರ ಇಡಿ, ಸಿಬಿಐ ಇತ್ತು. ಆದರೆ ಮಮತಾ ಸೂತ್ರ ಗೆದ್ದಿದೆ “ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಬ್ಯಾನರ್ಜಿ ಅವರನ್ನು ಬೀದಿ ಹೋರಾಟಗಾರರು ಎಂದು ವಿವರಿಸಿದ ಫಲೆರೊ “ಒಂದೇ ಪಕ್ಷದ ಸಿದ್ಧಾಂತ, ನೀತಿಗಳು, ತತ್ವಗಳು ಮತ್ತು ಕಾರ್ಯಕ್ರಮಗಳಲ್ಲಿರುವ ಇಂತಹ ಹೋರಾಟಗಾರರು ನಮಗೆ ಬೇಕಾಗಿದ್ದಾರೆ. ಬಿಜೆಪಿಯ ವಿರುದ್ಧ ಹೋರಾಡಲು ಎಲ್ಲಾ ಕಾಂಗ್ರೆಸ್ ಪಕ್ಷಗಳು ಒಟ್ಟಾಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು.
ಸುಶ್ಮಿತಾ ದೇಬ್ ನಂತರ ಇದು ತೃಣಮೂಲಕ್ಕೆ ಎರಡನೇ ಪ್ರಮುಖ ಪಕ್ಷಾಂತರವಾಗಿದೆ. ಮುಂದಿನ ವರ್ಷ ಚುನಾವಣೆಗೆ ಮುಂಚಿತವಾಗಿ ತ್ರಿಪುರಾದಲ್ಲಿ ದೇಬ್‌ಗೆ ದೊಡ್ಡ ಪಾತ್ರವನ್ನು ನೀಡಲಾಗಿದ್ದರೂ ಫಲೆರೊ ಅವರು ಗೋವಾದಲ್ಲಿ ತೃಣಮೂಲವನ್ನು ಬಲಪಡಿಸುವ ಸಾಧ್ಯತೆಯಿದೆ. ಅಲ್ಲಿ ಕಾಂಗ್ರೆಸ್ ಗಣನೀಯವಾಗಿ ದುರ್ಬಲಗೊಂಡಿದೆ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ.
I, Luizinho Faleiro, hereby tender my resignation of my seat in the house w.e.f. 27th Sep 2021.
I thank the people of #Navelim for placing their trust in me & look forward to their continued support in all future endeavors. #Goa #newbeginnings pic.twitter.com/wxSG4mWbVN— Luizinho Faleiro (@luizinhofaleiro) September 27, 2021
ಫಲೆರೊ ಅವರು 2019 ರ ರಾಷ್ಟ್ರೀಯ ಚುನಾವಣೆಗೆ ತ್ರಿಪುರಾದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು ಮತ್ತು ಈಶಾನ್ಯ ರಾಜ್ಯದಲ್ಲಿ ತೃಣಮೂಲಕ್ಕೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಡಲು ಸಹಾಯ ಮಾಡುವ ಸಾಧ್ಯತೆ ಇದೆ.
ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕರಾದ ಡೆರೆಕ್ ಒ ಬ್ರಿಯಾನ್ ಮತ್ತು ಪ್ರಸೂನ್ ಬ್ಯಾನರ್ಜಿ ಅವರು ಗೋವಾದಲ್ಲಿ ಫಲೆರೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಇತರ ರಾಜ್ಯಗಳೊಂದಿಗೆ ಗೋವಾದಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ’ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ, ಹಾಗಾಗಿಯೇ ಇಟಲಿಗೆ ಹೋಗಲು ಅನುಮತಿ ಸಿಗಲಿಲ್ಲ’-ಮಮತಾ ಬ್ಯಾನರ್ಜಿ
(Veteran Goa Congress leader Luizinho Faleiro quit his party After Praising Mamata Banerjee)