ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಸೇರ್ಪಡೆ

ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಭೂಷಣ್,ಪಕ್ಷದಿಂದ ಪ್ರಗತಿಪರ ಕೆಲಸಗಳು ನಡೆಯುತ್ತಿವೆ ಎಂದು ಭಾವಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ನನಗೆ, ಇದು ವಾಷಿಂಗ್ ಮೆಷೀನ್ ಅಲ್ಲ ಎಂದಿದ್ದಾರೆ.

ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಸೇರ್ಪಡೆ
ಭೂಷಣ್ ದೇಸಾಯಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 13, 2023 | 9:09 PM

ಶಿವಸೇನಾದ ಹಿರಿಯ ನಾಯಕ (UBT) ಸುಭಾಷ್ ದೇಸಾಯಿ (Subhash Desai) ಅವರ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನಾಗೆ (Shiv Sena) ಸೇರ್ಪಡೆಗೊಂಡಿದ್ದಾರೆ. ಮುಂಬರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಮುನ್ನ ಭೂಷಣ್ ಅವರು ಪಕ್ಷ ಬದಲಿಸಿದ್ದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಭೂಷಣ್ ಅವರು ಪ್ಯಾಕೇಜ್ಡ್ ಕುಡಿಯುವ ನೀರನ್ನು ತಯಾರಿಸುವ ಕಂಪನಿಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಆಡಳಿತದ ಅವಧಿಯಲ್ಲಿ ಕೈಗಾರಿಕೆಗಳು ಮತ್ತು ಗಣಿಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ ಅವರ ತಂದೆ ಸುಭಾಷ್ ದೇಸಾಯಿ ಅವರನ್ನು ಠಾಕ್ರೆ ಕುಟುಂಬದ ನಿಕಟವರ್ತಿ ಎಂದು ಹೇಳಲಾಗುತ್ತದೆ.

ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಭೂಷಣ್,ಪಕ್ಷದಿಂದ ಪ್ರಗತಿಪರ ಕೆಲಸಗಳು ನಡೆಯುತ್ತಿವೆ ಎಂದು ಭಾವಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ನನಗೆ, ಇದು ವಾಷಿಂಗ್ ಮೆಷೀನ್ ಅಲ್ಲ. ಈಗಾಗಲೇ ರಾಜ್ಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಕೆಲಸ ಮಾಡಲು ಬಯಸುತ್ತೇನೆ ಮತ್ತು ಯಾವುದೇ ಹುದ್ದೆಯ ನಿರೀಕ್ಷೆಯಿಲ್ಲ ಎಂದಿದ್ದಾರೆ.

ಈ ಹಿಂದೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಭೂಷಣ್ ದೇಸಾಯಿ ಅವರು ಉದ್ಧವ್ ಅವರ ಬಣಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಮೊದಲು ಮೋದಿಯನ್ನು ಮುಗಿಸಬೇಕು ಎಂದ ಪಂಜಾಬ್ ಮಾಜಿ ಡಿಸಿಎಂ ರಾಂಧವಾ ವಿರುದ್ಧ ಬಿಜೆಪಿ ವಾಗ್ದಾಳಿ

ಸುಭಾಷ್ ದೇಸಾಯಿ ಅವರು ನಮ್ಮ ದೊಡ್ಡ ನಾಯಕರು. ನಾವು ಅವರ ಮಾರ್ಗದರ್ಶನವನ್ನು ಅನುಸರಿಸುತ್ತೇವೆ ಮತ್ತು ಅವರ ಮಗ ನಮ್ಮೊಂದಿಗೆ ಇರಲಿಲ್ಲ. ವಾಷಿಂಗ್ ಮೆಷಿನ್‌ಗೆ ಹೋಗಲು ಬಯಸುವವರು ಹೋಗಬಹುದು ಎಂದಿದ್ದರು ಆದಿತ್ಯ.

ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ 2019ರಲ್ಲಿ ಬಿಜೆಪಿ-ಶಿವಸೇನಾ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಈಗ ಬಿಜೆಪಿ-ಶಿವಸೇನಾ ರಚನಾತ್ಮಕ ಕೆಲಸ ಮಾಡುತ್ತಿವೆ ಮತ್ತು ನಮ್ಮೊಂದಿಗೆ ಸೇರಲು ಅನೇಕ ಜನರು ಮುಂದೆ ಬರುತ್ತಿದ್ದಾರೆ. ಭೂಷಣ್ ಅವರು ಇಂದು ಪಕ್ಷಕ್ಕೆ ಸೇರಿದ್ದಾರೆ. ಏಕೆಂದರೆ ಅವರು ನನ್ನನ್ನು ಚೆನ್ನಾಗಿ ತಿಳಿದಿದ್ದಾರೆ. ನನ್ನ ಕೆಲಸದ ನೀತಿಯನ್ನು ತಿಳಿದಿದ್ದಾರೆ. ನಾವು ಬಾಳಾಸಾಹೇಬ್ ಠಾಕ್ರೆಯವರ ತತ್ವಗಳು ಮತ್ತು ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇವೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಭೂಷಣ್ ದೇಸಾಯಿ ಅವರಿಗೂ ಪಕ್ಷದಲ್ಲಿ ಜವಾಬ್ದಾರಿ ನೀಡಲಾಗುವುದುಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಅವರ ಶಿಬಿರಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ ಶಿಂಧೆ. ಫೆಬ್ರವರಿ 17 ರಂದು, ಭಾರತದ ಚುನಾವಣಾ ಆಯೋಗವು (ಇಸಿಐ) ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಗುರುತಿಸಿ ಅದಕ್ಕೆ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Mon, 13 March 23