ಕೊಳವೆಬಾವಿಗೆ ಬಿದ್ದ ಬಾಲಕ: 4 ತಂಡ, ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಹೊರತೆಗೆದರೂ ಬದುಕುಳಿಯಲಿಲ್ಲ
ಕೊಳವೆಬಾವಿಯೊಳಗೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಅಹಮದ್ನಗರದಲ್ಲಿ ನಡೆದಿದೆ.
ಕೊಳವೆಬಾವಿಯೊಳಗೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಅಹಮದ್ನಗರದಲ್ಲಿ ನಡೆದಿದೆ. ಪುಣೆಯಿಂದ ಸುಮಾರು 125 ಕಿ.ಮೀ ದೂರವಿರುವ ಕರ್ಜತ್ ತಹಸಿಲ್ ವ್ಯಾಪ್ತಿಯ ಕೊಪರ್ಡಿ ಗ್ರಾಮದಲ್ಲಿರುವ ಕೊಳವೆಬಾವಿಗೆ ಮಗು ಬಿದ್ದಿತ್ತು, ಒಟ್ಟು 4 ತಂಡ ಸತತ 9 ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆ ಮಾಡಿ ಮಗುವನ್ನು ಹೊರತೆಗೆದರೂ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಮಗು ಬೋರ್‌ವೆಲ್‌ಗೆ ಬಿದ್ದಿತ್ತು, 15 ಅಡಿ ಆಳದಲ್ಲಿ ಮಗು ಸಿಕ್ಕಿಬಿದ್ದಿತ್ತು, ಮಗು ಕೂಲಿಕಾರ್ಮಿಕನ ಮಗನಾಗಿದ್ದ. ಮಗು ಆಟವಾಡುತ್ತಾ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಆಗ ಯಾರೋ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದರು.
4 NDRF ತಂಡಗಳು ಮಗುವಿನ ರಕ್ಷಣೆಯಲ್ಲಿ ತೊಡಗಿತ್ತು. ಅಧಿಕಾರಿಗಳು ಮಗುವಿನೊಂದಿಗೆ ಮೇಲಿನಿಂದ ಮಾತನಾಡಲು ಪ್ರಯತ್ನಿಸುತ್ತಿದ್ದರು. ಆದರೆ ಮಗು ಯಾವುದೇ ಉತ್ತರ ನೀಡುತ್ತಿರಲಿಲ್ಲ.
ಮಾಹಿತಿ ಪ್ರಕಾರ ಬೋರ್ ವೆಲ್ ಗಾಗಿ ಹೊಂಡ ತೋಡಲಾಗಿತ್ತು. ಆದರೆ ಅದನ್ನು ಮುಚ್ಚಿರಲಿಲ್ಲ. ಸಂಜೆ ಆಟವಾಡುತ್ತಿದ್ದ ಮಗು ಅಷ್ಟರಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದಿತ್ತು. ಬೋರ್‌ವೆಲ್‌ನಿಂದ ಮಗುವನ್ನು ಹೊರತೆಗೆದ ಕೂಡಲೇ ಆರೋಗ್ಯ ತಪಾಸಣೆ ನಡೆಸಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿತ್ತು.
ಮತ್ತಷ್ಟು ಓದಿ: ಬೋರ್‌ವೆಲ್‌ಗೆ ಬಿದ್ದ 12 ವರ್ಷದ ಬಾಲಕಿ! ಸೇನೆಯಿಂದ ಕಾರ್ಯಚಾರಣೆ
ಸಿಬಿ ಯಂತ್ರದ ಮೂಲಕ ಬೋರ್ ವೆಲ್ ಸುತ್ತಲಿನ ಮಣ್ಣನ್ನು ತೆಗೆಸಲಾಯಿತು. ಮತ್ತೊಂದೆಡೆ ಮಗುವಿನ ಸಾವಿನಿಂದ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಈ ಹಿಂದೆ ಉತ್ತರ ಪ್ರದೇಶದ ಹಾಪುರ್ ನಲ್ಲೂ ಇಂತಹದ್ದೇ ಘಟನೆ ಮುನ್ನೆಲೆಗೆ ಬಂದಿತ್ತು. ಈ ವರ್ಷದ ಜನವರಿಯಲ್ಲಿ ಆರು ವರ್ಷದ ಬಾಲಕ 40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ. ಆದರೆ, ರಕ್ಷಣಾ ತಂಡ ಅವರನ್ನು ಸುರಕ್ಷಿತವಾಗಿ ರಕ್ಷಿಸಿತ್ತು,
ಮತ್ತೊಂದೆಡೆ, ಮಧ್ಯಪ್ರದೇಶದ ಬೇತುಲ್‌ನಲ್ಲಿ ಎಂಟು ವರ್ಷದ ಮಗು ಅದೇ ರೀತಿಯಲ್ಲಿ ಬೋರ್‌ವೆಲ್‌ನಲ್ಲಿ ಬಿದ್ದಿತ್ತು. ಆದರೆ ಮಗುವನ್ನು ಉಳಿಸಲು ಸಾಧ್ಯವಾಗಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ