ಪಟನಾ: ಭಾರತದಲ್ಲಿ ಹೊಂಡು ಗುಂಡಿಗಳಿರುವ ರಸ್ತೆ ಸಾಮಾನ್ಯ, ಆದರೆ ಕಣ್ಣು ಹಾಯಿಸಿದಷ್ಟು ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ಅಗಲವಾದ ದೈತ್ಯ ಹೊಂಡಗಳ ಚಿತ್ರಗಳು ಅಪರೂಪ. ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ರಸ್ತೆ ಮೂಲಕ ಚಿತ್ರೀಕರಿಸಿದ ವೈಮಾನಿಕ ವಿಡಿಯೊದಲ್ಲಿ ಬಿಹಾರದ (Bihar) ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227 ರ ಆತಂಕಕಾರಿ ಸ್ಥಿತಿ ಬಹಿರಂಗವಾಗಿದೆ. ಇದು ಟಕೇಶೀಸ್ ಕಾಸಲ್ (Takeshi’s Castle)ನಂತಿದೆ ಎಂದು ಜನರು ಟೀಕಿಸಿದ್ದಾರೆ. 90ರ ದಶಕದ ಜಂಗಲ್ ರಾಜ್‌ನಲ್ಲಿ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತಿರುವ ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227 (ಎಲ್). ಇತ್ತೀಚೆಗೆ ನಿತೀಶ್ ಕುಮಾರ್ ಅವರು ರಸ್ತೆ ನಿರ್ಮಾಣ ವಿಭಾಗದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಅವರು ಎಲ್ಲರಿಗೂ ತಿಳಿಸಬೇಕು ಎಂದು ಪ್ರಶಾಂತ್ ಕಿಶೋರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ದೈನಿಕ್ ಭಾಸ್ಕರ್ ವರದಿ ಪ್ರಕಾರ 2015ರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ದುರಸ್ತಿಗೆ ಇದುವರೆಗೆ ಮೂರು ಬಾರಿ ಟೆಂಡರ್ ಕರೆದರೂ ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದರಿಂದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.
90 के दशक के जंगलराज में बिहार में सड़कों की स्थिति की याद दिलाता यह बिहार के मधुबनी जिले का नेशनल हाईवे 227 (L) है।
अभी हाल में ही #Nitishkumar जी एक कार्यक्रम में पथ निर्माण विभाग के लोगों को बोल रहे थे कि बिहार में सड़कों की अच्छी स्थिति के बारे में उन्हें सबको बताना चाहिए। pic.twitter.com/Qp0ehEluty
— Prashant Kishor (@PrashantKishor) June 23, 2022
ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಸಮನಾಗಿರುತ್ತದೆ ಎಂದು ಹೇಳಿದ್ದರು.
ಹಾಜಿಪುರದಲ್ಲಿ ಗಂಗಾ ನದಿಯ ಮೇಲೆ ಪುನರ್ನಿರ್ಮಿಸಿದ ಮಹಾತ್ಮ ಗಾಂಧಿ ಸೇತುವಿನ ಪೂರ್ವ ಪಾರ್ಶ್ವವನ್ನು ಉದ್ಘಾಟಿಸಿ ಮಾತನಾಡಿದ್ದ ಗಡ್ಕರಿ ಕಳೆದ ಕೆಲವು ವರ್ಷಗಳಲ್ಲಿ ಬಿಹಾರದ ರಸ್ತೆಗಳು ಮಹತ್ತರವಾದ ಸುಧಾರಣೆಯನ್ನು ಕಂಡಿದೆ ಎಂದಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:32 pm, Thu, 23 June 22