Video Viral: ಚುನಾವಣೆ ಗೆಲ್ಲಲು ಫಕೀರ್​​ನಿಂದ ಚಪ್ಪಲಿ ಆಶೀರ್ವಾದ ಪಡೆದ ಕಾಂಗ್ರೆಸ್​​ ಅಭ್ಯರ್ಥಿ

ಮಧ್ಯಪ್ರದೇಶದ (Madhya Pradesh) ರತ್ಲಂ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್​​​ ಅಭ್ಯರ್ಥಿಯೊಬ್ಬರು "ಅಬ್ಬಾ" ಎಂದು ಕರೆಯಲ್ಪಡುವ ಫಕೀರ್ ಬಾಬಾರಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಇದೊಂದು ಸಾಂಕೇತಿಕ ಆಶೀರ್ವಾದ, ಇದನ್ನು "ಜೂಟೆ ಖಾನಾ" (ಚಪ್ಪಲಿಯಿಂದ ಹೊಡೆಯುವುದು) ಎಂದು ಕರೆಯುತ್ತಾರೆ. ಇಲ್ಲಿ ಪ್ರತಿಯೊಬ್ಬರು ಈ ಬಾಬಾಗೆ ಚಪ್ಪಲಿಯನ್ನು ನೀಡಿ ಆಶೀರ್ವಾದ ಪಡೆಯುತ್ತಾರೆ. ಇದು ಸಾಮಾನ್ಯ ಆಚರಣೆ ಎಂದು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್​​ ಆಗಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಚುನಾವಣೆ ನಡೆದಿದ್ದು, ಚುನಾವಣೆಗೂ ಮುನ್ನ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Video Viral: ಚುನಾವಣೆ ಗೆಲ್ಲಲು ಫಕೀರ್​​ನಿಂದ ಚಪ್ಪಲಿ ಆಶೀರ್ವಾದ ಪಡೆದ ಕಾಂಗ್ರೆಸ್​​ ಅಭ್ಯರ್ಥಿ
ವೈರಲ್​​ ವಿಡಿಯೋ
Follow us
|

Updated on: Nov 18, 2023 | 1:15 PM

ರತ್ಲಂ, ನ.18: ಮಧ್ಯಪ್ರದೇಶದ (Madhya Pradesh) ರತ್ಲಂ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್​​​ ಅಭ್ಯರ್ಥಿಯೊಬ್ಬರು “ಅಬ್ಬಾ” ಎಂದು ಕರೆಯಲ್ಪಡುವ ಫಕೀರ್ ಬಾಬಾರಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಇದೊಂದು ಸಾಂಕೇತಿಕ ಆಶೀರ್ವಾದ, ಇದನ್ನು “ಜೂಟೆ ಖಾನಾ” (ಚಪ್ಪಲಿಯಿಂದ ಹೊಡೆಯುವುದು) ಎಂದು ಕರೆಯುತ್ತಾರೆ. ಇಲ್ಲಿ ಪ್ರತಿಯೊಬ್ಬರು ಈ ಬಾಬಾಗೆ ಚಪ್ಪಲಿಯನ್ನು ನೀಡಿ ಆಶೀರ್ವಾದ ಪಡೆಯುತ್ತಾರೆ. ಇದು ಸಾಮಾನ್ಯ ಆಚರಣೆ ಎಂದು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್​​ ಆಗಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಚುನಾವಣೆ ನಡೆದಿದ್ದು, ಚುನಾವಣೆಗೂ ಮುನ್ನ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಚಪ್ಪಲಿಯಲ್ಲಿ ಆಶೀರ್ವಾದ ಪಡೆದ ಕಾಂಗ್ರೆಸ್​​ ಅಭ್ಯರ್ಥಿಯನ್ನು ಪರಸ್ ಸಕ್ಲೇಚಾ ಎಂದು ಹೇಳಲಾಗಿದೆ. ಇವರು ಚುನಾವಣೆಯಲ್ಲಿ ಗೆಲ್ಲಲು ಈ ಫಕೀರನಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಈ ವಿಡಿಯೋ ವೈರಲ್​​​ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ಪರಸ್ ಸಕ್ಲೇಚಾ, ಈ ಫಕೀರ ಅತ್ಯಂತ ಗೌರವಾನ್ವಿತ, ಅವರು ಮೋವ್ ರಸ್ತೆಯಲ್ಲಿರುವ ದರ್ಗಾದಲ್ಲಿ ವಾಸಿವಾಗಿರುತ್ತಾರೆ. ಯಾವುದೇ ಒಂದು ಕಾರ್ಯ ಯಶಸ್ವಿಯಾಗಬೇಕಾದರೆ, ಈ ಫಕೀರನಿಗೆ ಲುಂಗಿ ಮತ್ತು ಚಪ್ಪಲಿಗಳಂತಹ ಕಾಣಿಕೆಗಳನ್ನು ನೀಡುತ್ತಾರೆ. ಈ ಕಾಣಿಕೆಯಲ್ಲಿ ಅವರಿಗೆ ಯಾವುದು ಬೇಕು ಅದನ್ನು ಸ್ವೀಕರಿಸಿ, ಉಳಿದದ್ದನ್ನು ಹಿಂದಕ್ಕೆ ನೀಡುತ್ತಾರೆ ಎಂದು ಹೇಳಿದ್ದಾರೆ.

ಎಕ್ಸ್​​​ನಲ್ಲಿ (ಈ ಹಿಂದಿನ ಟ್ವಿಟರ್​) ಹಂಚಿಕೊಂಡ ವಿಡಿಯೋ ಇಲ್ಲಿದೆ:

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ಪರಸ್ ಸಕ್ಲೇಚಾ ಅವರು ಈ ಫಕೀರನ ಬಳಿಗೆ ಒಂದು ಜತೆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಆಶೀರ್ವಾದ ಪಡೆದಿದ್ದಾರೆ. ಈ ವಿಚಾರದ ಬಗ್ಗೆ ಸಕ್ಲೇಚಾ ಅವರನ್ನು ಮಾತನಾಡಿಸಿದಾಗ, ಬಾಬಾ ನಾನು ತೆಗೆದುಕೊಂಡ ಹೋಗಿದ್ದ ಚಪ್ಪಲಿಯನ್ನು ಸ್ವೀಕಾರಿಸಿ, ಅದರಲ್ಲಿ ಹೊಡೆದು ನನ್ನ ಮೇಲಿದ್ದ ದುಷ್ಟ ನೆರಳುಗಳನ್ನು ದೂರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಯ ಬಂಧನ

ಸಕ್ಲೇಚಾ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ಬಿಜೆಪಿಯ ಹಾಲಿ ಶಾಸಕ, ಚೇತನ್ ಕಶ್ಯಪ್ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಸಕ್ಲೇಚಾ ಈ ಹಿಂದೆ 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರತ್ಲಾಮ್ ಕ್ಷೇತ್ರದಿಂದ ಗೆದ್ದಿದ್ದರು. ನಂತರ 2013ರಲ್ಲಿ ಮತ್ತೆ ಸ್ವರ್ಧಿಸಿ ಸೋತರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು