ಆಂಧ್ರಪ್ರದೇಶ: ಶುಕ್ರವಾರ ಆಂಧ್ರಪ್ರದೇಶದ ವಿಜಯನಗರಂನಲ್ಲಿ 21 ವರ್ಷದ ಹುಡುಗಿಯೊಬ್ಬಳು ಪರೀಕ್ಷೆ ಬರೆಯಲು ಈಜಿಕೊಂಡು ಚಂಪಾವತಿ ನದಿಯನ್ನು ದಾಟಿದರು. ತಡ್ಡಿ ಕಲಾವತಿ ಎಂಬ ಹುಡುಗಿ ಪರೀಕ್ಷೆ ಬರೆಯಲು ಚಂಪಾವತಿ ನದಿಯಲ್ಲಿ ಈಜಿಕೊಂಡು ನದಿಯನ್ನು ದಾಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹುಡುಗಿಯನ್ನು ಗಜಪತಿನಗರ ಮಂಡಲದ ಮರಿವಲಸ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಶನಿವಾರ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೆಂದು ಜೀವವನ್ನೇ ಪಣಕ್ಕಿಟ್ಟು ಕಲಾವತಿ ತನ್ನ ಇಬ್ಬರು ಸಹೋದರರ ನೆರವಿನೊಂದಿಗೆ ಪ್ರವಾಹಕ್ಕೆ ಸಿಲುಕಿದ ಚಂಪಾವತಿ ನದಿಯನ್ನು ದಾಟಿದ್ದಾಳೆ. 35 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ಕಲಾವತಿಯ ಸಹೋದರರು ಅವಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ನದಿಯ ಇನ್ನೊಂದು ಬದಿಗೆ ಸ್ಥಳಾಂತರಿಸುವುದನ್ನು ಕಾಣಬಹುದು, ಆದರೆ ಅವಳು ಹರಿಯುವ ನೀರಿನಲ್ಲಿ ಅಲೆಯಲು ಹೆಣಗಾಡುತ್ತಾಳೆ.
21-year-old girl swims the river to attend the exam in Vizianagaram. Risking her life she with the help of her brother crossed the flooded Champavathi river so that she can attend the exam in Vizag. Due to heavy rain, several rivers in North coastal AP overflowing. #AndhraPradesh pic.twitter.com/ezGskpg5BH
— Ashish (@KP_Aashish) September 10, 2022
ಭಾರೀ ಮಳೆಯಿಂದಾಗಿ, ಉತ್ತರ ಕರಾವಳಿ ವ್ಯಾಪ್ತಿಯ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಈ ಕಾರಣದಿಂದ ಕಲಾವತಿಯ ಹೋಗಿರುವ ದಾರಿಯನ್ನು ಬಂದ್ ಮಾಡಲಾಗಿತ್ತು. ಅದರ ನಂತರ ಅವಳ ಸಹೋದರರು ಆಕೆಗೆ ಪರೀಕ್ಷೆಯನ್ನು ಪರೀಕ್ಷೆಯ ಬರೆಯಬೇಕು ಎಂದು ನದಿ ದಾಟಲು ಸಹಾಯ ಮಾಡಲು ನಿರ್ಧರಿಸಿದರು.
Published On - 1:26 pm, Sat, 10 September 22