ದೇಶ ಇಬ್ಭಾಗವಾದಾಗ ಬೇರ್ಪಟ್ಟಿದ್ದ ತನ್ನ ಮುಸ್ಲಿಂ ಸಹೋದರಿಯನ್ನು ಜಲಂಧರ್ ನ ಸರ್ದಾರ್ಜೀ 75 ವರ್ಷಗಳ ನಂತರ ಭೇಟಿಯಾದರು!
ವ್ಹೀಲ್ ಚೇರ್ ನಲ್ಲಿ ಕುಳಿತಿದ್ದ ಅಮರಜಿತ್ ಸಿಂಗ್ ಅವರು ತಮ್ಮ ಸಹೋದರಿ ಖುಲ್ಸುಮ್ ಅಖ್ತರ್ ಅವರನ್ನು ಬುಧವಾರದಂದು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಖರಗ್ ಪುರನಲ್ಲಿರುವ ಗುರದ್ವಾರ ದರ್ಬಾರ್ ಸಾಹಿಬ್ ನಲ್ಲಿ ಭೇಟಿಯಾದ ಆ ಭಾವುಕ ಕ್ಷಣವನ್ನು ಕಂಡು ಅಲ್ಲಿದ್ದವರ ಕಣ್ಣಗಳು ತೇವಗೊಂಡವು.
ಇಸ್ಲಾಮಾಬಾದ್: ಭಾರತ ಇಬ್ಭಾಗಗೊಂಡಾಗ (Partition) ತನ್ನ ಕುಟುಂಬದಿಂದ ಬೇರ್ಪಟ್ಟಿದ್ದ ಜಲಂದರ್ ಮೂಲದ ಸಿಖ್ ಅಮರಜಿತ್ ಸಿಂಗ್ ಅವರಿಗೆ 75 ವರ್ಷಗಳ ನಂತರ ಪಾಕಿಸ್ತಾನದ ಖರ್ತಾರ್ಪುರನಲ್ಲಿರುವ (Kartarpur) ಗುರುದ್ವಾರ ದರ್ಬಾರ್ ಸಾಹಿಬ್ ನಲ್ಲಿ ತಮ್ಮ ಮುಸ್ಲಿಂ ಸಹೋದರಿಯನ್ನು ಭೇಟಿಯಾದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ.
ದೇಶ ವಿಭಜೆನೆಯ ಸಂದರ್ಭದಲ್ಲಿ ಸಿಂಗ್ ಅವರ ಮುಸ್ಲಿಂ ತಂದೆತಾಯಿ ಪಾಕಿಸ್ತಾನಕ್ಕೆ ಹೋದಾಗ ಅವರು ಮಾತ್ರ ಭಾರತಲ್ಲೇ ಉಳಿದುಬಿಟ್ಟಿದ್ದರು.
ವ್ಹೀಲ್ ಚೇರ್ ನಲ್ಲಿ ಕುಳಿತಿದ್ದ ಅಮರಜಿತ್ ಸಿಂಗ್ ಅವರು ತಮ್ಮ ಸಹೋದರಿ ಖುಲ್ಸುಮ್ ಅಖ್ತರ್ ಅವರನ್ನು ಬುಧವಾರದಂದು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಖರಗ್ ಪುರನಲ್ಲಿರುವ ಗುರದ್ವಾರ ದರ್ಬಾರ್ ಸಾಹಿಬ್ ನಲ್ಲಿ ಭೇಟಿಯಾದ ಆ ಭಾವುಕ ಕ್ಷಣವನ್ನು ಕಂಡು ಅಲ್ಲಿದ್ದವರ ಕಣ್ಣಗಳು ತೇವಗೊಂಡವು.
ಸಿಂಗ್ ಅವರು ತಮ್ಮ ತಂಗಿಯನ್ನು ಭೇಟಿಯಾಗಲು ವೀಸಾವೊಂದನ್ನು ಪಡೆದು ಅತ್ತಾರಿ-ವಾಘಾ ಗಡಿ ಪ್ರದೇಶದ ಮೂಲಕ ಪಾಕಿಸ್ತಾನಕ್ಕೆ ಆಗಮಿಸಿದರು.
65-ವರ್ಷ ವಯಸ್ಸಿ ಖುಲ್ಸೂಮ್ ಅವರಿಗೆ ತನ್ನಣ್ಣನನ್ನು ಕಂಡು ಅಳು ತಡೆಯಲಾಗಲಿಲ್ಲ. ಸಹೋದರ-ಸಹೋದರಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಗಳಗಳಲೇ ಅತ್ತುಬಿಟ್ಟರು. ಖುಲ್ಸೂಮ್ ಅಣ್ಣನನ್ನು ನೋಡಲು ತಮ್ಮ ಮಗ ಶಹಜಾದ್ ಅಹ್ಮದ್ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ತಮ್ಮ ತವರು ನಗರ ಫೈಸಲಾಬಾದ್ ನಿಂದ ಆಗಮಿಸಿದರು.
ಪಾಕಿಸ್ತಾನದ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯೊಂದಿಗೆ ಮಾತಾಡಿದ ಖುಲ್ಸೂಮ್, 1947 ರಲ್ಲಿ ಅವರ ತಂದೆ ತಾಯಿಗಳು ಜಲಂಧರ್ ಗೆ ಹತ್ತಿರದ ಊರೊಂದರಿಂದ ತಮ್ಮ ಸಹೋದರ ಮತ್ತೊಬ್ಬ ಸಹೋದರಿಯನ್ನು ಅಲ್ಲೇ ಬಿಟ್ಟು ಪಾಕಿಸ್ತಾನಕ್ಕೆ ವಲಸೆ ಬಂದರು ಎಂದು ಹೇಳಿದರು.
ತಾನು ಪಾಕಿಸ್ತಾನದಲ್ಲಿ ಹುಟ್ಟಿರುವುದಾಗಿ ಹೇಳಿದ ಖುಲ್ಸೂಮ್ ತನ್ನ ತಾಯಿಯಿಂದ ಭಾರತದಲ್ಲೇ ಉಳಿದುಬಿಟ್ಟಿದ್ದ ಅಣ್ಣ ಮತ್ತು ಅಕ್ಕನ ಬಗ್ಗೆ ತಿಳಿದುಕೊಂಡಿದ್ದಾಗಿ ಹೇಳಿದರು. ತಮ್ಮ ಕಳೆದು ಹೋದ ಮಕ್ಕಳನ್ನು ನೆನದು ಅಮ್ಮ ಬಹಳ ಅಳುತ್ತಿದ್ದಳು ಅಂತ ಅವರು ಹೇಳಿದ್ದಾರೆ.
ತನ್ನಣ್ಣ ಮತ್ತು ಅಕ್ಕನನ್ನು ಭೇಟಿಯಾಗುವ ಬಗ್ಗೆ ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಖುಲ್ಸೂಮ್ ಹೇಳಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಅವರ ತಂದೆಯ ಗೆಳೆಯ ಸರ್ದಾರ್ ದಾರಾ ಸಿಂಗ್ ಭಾರತದದಿಂದ ಪಾಕಿಸ್ತಾನಕ್ಕೆ ಬಂದು ಖುಲ್ಸೂಮ್ ಅವರನ್ನು ಭೇಟಿಯಾಗಿದ್ದರು.
ಖುಲ್ಸೂಮ್ ಅವರ ತಾಯಿ ತಾವು ಭಾರತದಲ್ಲೇ ಬಿಟ್ಟು ಬಂದ ಮಕ್ಕಳ ಬಗ್ಗೆ ದಾರಾ ಸಿಂಗ್ ಅವರಿಗೆ ಹೇಳಿ, ತಾವು ಭಾರತದಲ್ಲಿ ವಾಸವಾಗಿದ್ದ ಊರು, ಮನೆಯಿದ್ದ ಸ್ಥಳದ ವಿಳಾಸ ಮೊದಲಾದವುಗಳ ಮಾಹಿತಿ ನೀಡಿದ್ದರು.
ಸರ್ದಾರ್ ದಾರಾರ ಸಿಂಗ್ ಅವರು ಖುಲ್ಸೂಮ್ ತಂದೆ ತಾಯಿ ವಾಸವಾಗಿದ್ದ ಪಡಾವನ್ ಗ್ರಾಮಕ್ಕೆ ಭೇಟಿ ನೀಡಿ ಅವರ ಮಗ ಬದುಕಿರುವ ಆದರೆ ಮಗಳು ನಿಧನ ಹೊಂದಿರುವ ವಿಷಯವನ್ನು ಖುಲ್ಸೂಮ್ ತಾಯಿಗೆ ತಿಳಿಸಿದ್ದರು.
1947ರಲ್ಲಿ ಅವರ ಮಗನನ್ನು ಸಿಖ್ ಕುಟುಂಬವೊಂದು ದತ್ತು ಪಡೆದು ಅವರಿಗೆ ಅಮರಜಿತ್ ಸಿಂಗ್ ಅಂತ ನಾಮಕರಣ ಮಾಡಿತ್ತು.