AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Shocker ಕೊರೊನಾ ದೂರವಿಡಲು ಮಕ್ಕಳಿಗೆ ಸಾರಾಯಿ ಕುಡಿಸಿದರಯ್ಯಾ!

ಭುವನೇಶ್ವರ: ಜೀವನವನ್ನೇ ಬರಡು ಮಾಡಿರೋ ಕಿಲ್ಲರ್ ಕೊರೊನಾ ಹಿಮ್ಮೆಟ್ಟಿಸಲು ನಾನಾ ದೇಶಗಳು ತಲೆ ಕೆಡಿಸಿಕೊಂಡಿವೆ. ಈ ಮದ್ದು ಆ ಮದ್ದು ಅಂತ ಪ್ರಯೋಗಗಳನ್ನು ಮಾಡುತ್ತಿವೆ. ಆದರೆ ಇಲ್ಲೊಂದು ಊರಲ್ಲಿ ಕೊರೊನಾವನ್ನು ದೂರವಿಡಲು ಶಾಲಾ ಮಕ್ಕಳಿಗೆ ಮದ್ಯ ಮದ್ದು ನೀಡಲಾಗುತ್ತಿದೆ! ಈ ಘಟನೆ ಕಂಡುಬಂದಿರುವುದು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ. ಇಲ್ಲಿ 10 ರಿಂದ 12 ವರ್ಷ ವಯಸ್ಸಿನ 50 ಕ್ಕೂ ಹೆಚ್ಚು ಮಕ್ಕಳಿಗೆ ದೇಶೀಯ ಕಳ್ಳು ಮದ್ಯ (salapa) ಆಂದ್ರೆ ಲೋಕಲ್ ಸಾರಾಯಿ ಕುಡಿಸಲಾಗುತ್ತಿದೆ. ಪಾರ್ಸನಪಾಲಿ ಗ್ರಾಮದ […]

Covid Shocker ಕೊರೊನಾ ದೂರವಿಡಲು ಮಕ್ಕಳಿಗೆ ಸಾರಾಯಿ ಕುಡಿಸಿದರಯ್ಯಾ!
ಆಯೇಷಾ ಬಾನು
| Updated By: |

Updated on:Jul 23, 2020 | 1:20 PM

Share

ಭುವನೇಶ್ವರ: ಜೀವನವನ್ನೇ ಬರಡು ಮಾಡಿರೋ ಕಿಲ್ಲರ್ ಕೊರೊನಾ ಹಿಮ್ಮೆಟ್ಟಿಸಲು ನಾನಾ ದೇಶಗಳು ತಲೆ ಕೆಡಿಸಿಕೊಂಡಿವೆ. ಈ ಮದ್ದು ಆ ಮದ್ದು ಅಂತ ಪ್ರಯೋಗಗಳನ್ನು ಮಾಡುತ್ತಿವೆ. ಆದರೆ ಇಲ್ಲೊಂದು ಊರಲ್ಲಿ ಕೊರೊನಾವನ್ನು ದೂರವಿಡಲು ಶಾಲಾ ಮಕ್ಕಳಿಗೆ ಮದ್ಯ ಮದ್ದು ನೀಡಲಾಗುತ್ತಿದೆ!

ಈ ಘಟನೆ ಕಂಡುಬಂದಿರುವುದು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ. ಇಲ್ಲಿ 10 ರಿಂದ 12 ವರ್ಷ ವಯಸ್ಸಿನ 50 ಕ್ಕೂ ಹೆಚ್ಚು ಮಕ್ಕಳಿಗೆ ದೇಶೀಯ ಕಳ್ಳು ಮದ್ಯ (salapa) ಆಂದ್ರೆ ಲೋಕಲ್ ಸಾರಾಯಿ ಕುಡಿಸಲಾಗುತ್ತಿದೆ.

ಪಾರ್ಸನಪಾಲಿ ಗ್ರಾಮದ ಜನರ ಪ್ರಕಾರ ಕಳ್ಳು ಸೇವಿಸುವುದರಿಂದ ಮಕ್ಕಳಿಗೆ ಕೊರೊನಾ ವೈರಸ್ ತಗುಲುವುದಿಲ್ಲವಂತೆ! ಕಳ್ಳಿನಲ್ಲಿ ಮದ್ಯದ ಅಂಶಗಳಿರುತ್ತವೆ. ಅವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ಇಲ್ಲಿನ ಜನ ನಂಬಿದ್ದಾರೆ. ಇನ್ನು ಮಕ್ಕಳು ಮದ್ಯ ಸೇವಿಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಆದರೆ ವೈದ್ಯಕೀಯ ತಜ್ಞರು ಮದ್ಯ ಸೇವನೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿರುವ ಮಕ್ಕಳು ಯಾರೂ ಸಾಮಾಜಿಕ ಅಂತರವಾಗಲಿ, ಮಾಸ್ಕ್​ ಆಗಲಿ ಮುಂತಾದ ಯಾವುದೇ ಕೊರೊನಾ ನಿಗ್ರಹ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ.

ಆಲ್ಕೋಹಾಲ್ ಸೇವಿಸುವುದರಿಂದ ಕೊರೊನಾವನ್ನು ಗುಣಪಡಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಜಿಐ ಟ್ರಾಕ್ಟ್ ಮೂಲಕ ಹೋಗುವುದಿಲ್ಲ. ಅದು ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಹರಡುತ್ತದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯ ಉದಾಹರಣೆ ತೆಗೆದುಕೊಂಡರೆ ವೈರಸ್ ದೇಹವನ್ನು ಉಸಿರಾಟದ ಮೂಲಕ ಪ್ರವೇಶಿಸುತ್ತದೆ ಹೊರತು ಜಿಐ ಟ್ರಾಕ್ಟ್ ಮೂಲಕ ಅಲ್ಲ ಎಂದೂ ಪರಿಣತರು ಹೇಳುತ್ತಾರೆ.

ಅಲ್ಲದೆ, ಮಕ್ಕಳಿಗೆ ಮದ್ಯವನ್ನು ನೀಡುವುದು ಅಪರಾಧ. ಹೀಗಾಗಿ ಈ ಬಗ್ಗೆ ಅಬಕಾರಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Published On - 10:33 am, Wed, 22 July 20

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು