ಹೈದರಾಬಾದ್: ಆಂಧ್ರಪ್ರದೇಶದ ಪಾಲಕೋಲ್‌ನ ಭಕ್ತರೊಬ್ಬರು ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ ಐಸ್‌ಕ್ರೀಂ ಅನ್ನು ಜನರಿಗೆ ಪ್ರಸಾದವಾಗಿ ನೀಡಿರುವ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ವಿಭಿನ್ನವಾದ ಪ್ರಸಾದವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಹಬ್ಬ-ಹರಿದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದು ದೇವಸ್ಥಾನಗಳು ಮತ್ತು ಪೂಜಾ ಸ್ಥಳಗಳಲ್ಲಿ ಸಾಮಾನ್ಯ ಸಂಗತಿಯಾಗಿದ್ದರೂ ಈ ದೇವಸ್ಥಾನದಲ್ಲಿ ನೀಡಲಾಗುವ ರುಚಿಕರವಾದ ಐಸ್‌ಕ್ರೀಂ ಪ್ರಸಾದವನ್ನು ತಿನ್ನಲು ಪ್ರವಾಸಿಗರು ಆಗಮಿಸಿದ್ದಾರೆ.
ಭಕ್ತರು ಈ ದೇವರಿಗೆ ಅಭಿಷೇಕವಾಗಿ ಹಾಲು ಅಥವಾ ಮೊಸರನ್ನು ಅರ್ಪಿಸುತ್ತಾರೆ. ಇವುಗಳಲ್ಲದೆ, ಕೆಲವರು ಜೇನುತುಪ್ಪ, ಸಕ್ಕರೆ ಮತ್ತು ವಿವಿಧ ಹಣ್ಣಿನ ರಸವನ್ನು ದೇವರಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕೆಲವರು ಒಂದು ಟಂಬ್ಲರ್ ನೀರನ್ನು ಅಭಿಷೇಕವಾಗಿ ಅರ್ಪಿಸುತ್ತಾರೆ. ಅವರ ಇಷ್ಟಾರ್ಥಗಳನ್ನು ಪೂರೈಸುವ ಮೂಲಕ ಭಗವಂತ ಅವರನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಈ ದೇವರನ್ನು ‘ಭೋಲಾ ಶಂಕರ’ ಎಂದು ಕರೆಯಲಾಗುತ್ತದೆ. ಭಕ್ತರು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮರೆಡು ಎಲೆಗಳನ್ನು ಬಳಸಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ.
ಆದರೆ, ಪಾಲಕೋಲಿನ ದೇವೆಲ್ಲ ನರಸಿಂಹ ಮೂರ್ತಿ ಎಂಬ ವ್ಯಕ್ತಿ ಶಿವನಿಗೆ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ಅರ್ಪಿಸಿದ್ದರಿಂದ ಸುತ್ತಮುತ್ತಲೂ ಬಹಳ ಪ್ರಸಿದ್ಧರಾಗಿದ್ದಾರೆ. ಐಸ್ ಕ್ರೀಮ್ ಅನ್ನು ಶಿವಲಿಂಗದ ಮೇಲೆ ಸುರಿಯಲಾಯಿತು. ಅದು ದೇವರ ಸುತ್ತಲೂ ತುಂಬಿಕೊಂಡಾಗ ಆ ಅದ್ಭುತ ದೃಶ್ಯವನ್ನು ವೀಕ್ಷಿಸಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ದೇವರ ಪ್ರಸಾದವಾಗಿ ತಣ್ಣನೆಯ ಐಸ್ ಕ್ರೀಂ ಅನ್ನು ಪಡೆಯಲು ಭಕ್ತರು ಪ್ರಸಿದ್ಧ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.
ಶಿವನಿಗೆ ಮಾಂಸದ ಅಡುಗೆಯನ್ನು ನೈವೇದ್ಯವಾಗಿ ನೀಡಿದ ಉದಾಹರಣೆಗಳೂ ಪುರಾಣದಲ್ಲಿದೆ. ಇನ್ನು ಕೆಲವರು ಪಾಯಸ, ಸಕ್ಕರೆ ಪೊಂಗಲ್ ಮತ್ತು ಹೂರಣವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.
ಇದನ್ನೂ ಓದಿ: ಮಂಡ್ಯ, ಮೈಸೂರಿನ ದೇವಸ್ಥಾನಗಳಲ್ಲಿ ದೇವರ ವಿಗ್ರಹ ಧ್ವಂಸ; ಒಂದೇ ದಿನದಲ್ಲಿ ಆರೋಪಿಯ ಬಂಧನ
Viral Video: ಬಾಯಾರಿದ ನಾಯಿಮರಿಗೆ ಬೋರ್ವೆಲ್ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್